ಜಾನುವಾರುಗಳ ಚರ್ಮ ಗಂಟುರೋಗಕ್ಕೆ ಲಸಿಕೆ ಕಡ್ಡಾಯವಾಗಿ ಹಾಕಿಸಿ : ತಹಶೀಲ್ದಾರ್ ಎನ್.ರಘುಮೂರ್ತಿ ಕರೆ
ಚಳ್ಳಕೆರೆ : ಇತ್ತೀಚಿನ ದಿನಗಳಲ್ಲಿ ರಾಜ್ಯಾಂದ್ಯಾAತ ಜಾನುವಾರಗಳಿಗೆ ಕಾಣಿಸಿಕೊಂಡಿರುವAತ ಗಂಟು ರೋಗಕ್ಕೆ ಸಂಬAಧಿಸಿದAತ ಜಾನುವಾರಗಳಿಗೆ ವ್ಯಾಕ್ಸಿನ್ ಹಾಕಿಸುವ ಅಭಿಯಾನದಲ್ಲಿ ಕಾರ್ಯ ನಡೆಯುತ್ತಿದೆ ಆದೇ ರೀತಿಯಲ್ಲಿ
ಚಳ್ಳಕೆರೆ ತಾಲೂಕಿನಲ್ಲಿ ಕೂಡ ಅಭಿಯಾನಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ಚಾಲನೆ ನೀಡಿ ಮಾತನಾಡಿದರು.
ಕಳೆದ ಒಂದು ವಾರದಿಂದ ಪ್ರತಿದಿನ ಸಾರ್ವಜನಿಕರು ಗ್ರಾಮಗಳಿಗೆ ಭೇಟಿ ನೀಡಿದಂತ ಸಂದರ್ಭದಲ್ಲಿ ಮತ್ತು ಕಚೇರಿಯಲ್ಲಿ ಜಾನುವಾರುಗಳಿಗೆ ಅದರಲ್ಲಿಯೂ ದೇವರ ಎತ್ತುಗಳಿಗೆ ಇಂತಹ ಕಾಯಿಲೆ ಉಲ್ಬಣಿಸಿದ್ದು ತಕ್ಷಣ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪಶು ಇಲಾಖೆಯ ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಹಗಲಿರಳು ಜಾನುವಾರುಗಳಿಗೆ ವ್ಯಾಕ್ಸಿನ್ ನೀಡುವ ಕೆಲಸ ಮಾಡುತ್ತಿದ್ದಾರೆ ಆದರೂ ಕೂಡ ತಾಲೂಕಿನ ಸಾರ್ವಜನಿಕರು ಆರೋಗ್ಯವಾಗಿರುವಂತಹ ಜಾನುವಾರುಗಳಿಗೆ ವ್ಯಾಕ್ಸಿನ್ ಹಾಕಿಸದಿದ್ದಲ್ಲಿ ತಕ್ಷಣ ಸ್ಥಳೀಯ ಪಶು ವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಅವರಿಂದ ತಮ್ಮ ತಮ್ಮ ಜಾನುವಾರುಗಳಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮನವಿ ಮಾಡಿದರು
ಬುಡಕಟ್ಟು ಸಂಸ್ಕೃತಿಯ ಜನರಿಗೂ ಮತ್ತು ಇಲ್ಲಿನ ದೇವರ ಎತ್ತುಗಳಿಗೂ ಭಾವನಾತ್ಮಕವಾದ ಸಂಬAಧವಿದೆ, ದೇವರ ಎತ್ತುಗಳಿಗೆ ಮತ್ತು ಆರೋಗ್ಯವಂತ ಜಾನುವಾರುಗಳಿಗೆ ಮುಂಜಾಗ್ರತ ಕ್ರಮವಾಗಿ ಕಡ್ಡಾಯವಾಗಿ ಲಸಿಕೆ ಹಾಕುವಂತ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಪ್ರತಿಯೊಬ್ಬ ಸಾರ್ವಜನಿಕರು ಕೂಡ ಜಾಗ್ರತೆವಹಿಸಿ ತಾವು ಸಾಕಿರುವಂತಹ ಜಾನುವಾರಗಳಿಗೆ ಮತ್ತು ದೇವರ ಎತ್ತುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
ಪಶುವೈದ್ಯಾಧಿಕಾರಿ ರಾಮನಾಯಕ್, ಗೌರಸಮುದ್ರ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ರಾಜಣ್ಣ, ಸದಸ್ಯ ರುದ್ರಮುನಿ, ಗೋಪಾಲಪ್ಪ, ರಾಜೇಶ್ವ ನಿರೀಕ್ಷಕ ತಿಪ್ಪೇಸ್ವಾಮಿ, ತಾಲೂಕು ಸರ್ವೆ ಪ್ರಸನ್ನ ಕುಮಾರ್ ಮುಂತಾದವರು ಉಪಸ್ಥಿತರಿದ್ದರು