ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಜನ್ಮದಿನಾಚರಣೆಗೆ ರಾಜ್ಯ ನಾಯಕರಿಂದ ಶುಭಾಕೋರಿಕೆ : ಶಾಸಕರಾದ ಟಿ.ರಘುಮೂರ್ತಿ ಬಾಗಿ
ಚಳ್ಳಕೆರೆ : ಹೊಸದುರ್ಗದಲ್ಲಿ ನಡೆದ ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ ಅವರ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ಭಾಗವಹಿಸಿ ಶುಭಹಾರೈಸಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಸಜ್ಜನ ರಾಜಾಕರಣಿ ಹಿರಿಯ ಮುತ್ಸದಿ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಶಾಸಕರು ಇವರ ಜನ್ಮ ದಿನಾಚರಣೆಗೆ ನಾಡಿದ ಸರ್ವರು ಆಗಮಿಸಿ ಶುಭಾ ಕೋರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಡಿ.ಸುರೇಶ್ ಮಾಜಿ ಸಂಸದರಾದ ಬಿಎನ್ ಚಂದ್ರಪ್ಪ ಮಾಜಿ ಸಚಿವರಾದ ಎಚ್‌ಎಂ.ರೇವಣ್ಣ, ಎಚ್ ಆಂಜನೇಯ ಮತ್ತು ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಮಧುಬಂಗಾರಪ್ಪ ಮುಂತಾದ ಮುಖಂಡರು ಉಪಸ್ಥಿತರಿದ್ದರು.