ಚಳ್ಳಕೆರೆ : ಜಾನುವಾರಗಳ ಮೇವಿಗೆ, ಗೋಮಾಳ ಉಳಿಸಿ : ಸ್ಥಳೀಯರಿಂದ ಪ್ರತಿಭಟನೆ
ಚಳ್ಳಕೆರೆ : ರಾತ್ರೋ ರಾತ್ರಿ ಗಿಡಗಂಟೆಗಳನ್ನು ತೆಗೆಸಿ ಸರಕಾರಿ ಗೋಮಾಳದಲ್ಲಿ ಏಕಾಏಕಿ ವಸತಿ ಕಾಮಗಾರಿ ನಿರ್ಮಾಣ ಮಾಡುತ್ತಿರುವುದು ಖಂಡನೀಯ, ನಾಲ್ಕು ಗ್ರಾಮಗಳ ಜಾನುವಾರುಗಳಿಗೆ ಮೀಸಲಿಟ್ಟ ಗೋಮಾಳವನ್ನು ಉಳಿಸಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಗುತ್ತಿಗೆ ದಾರರನಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ಕುರುಡಿಹಳ್ಳಿ ಗ್ರಾಮದ ಸಮೀಪ ನಡೆಯಿತು.
ಹೌದು ಸರಕಾರದ ಕೆಲವು ಅವೈಜ್ಞಾನಿಕ ನಿಲುವುಗಳು ಇಂತಹ ಜನರ ಆಕ್ರೋಶಕ್ಕೆ ಕಾರಣವಾಗಿ ಪ್ರತಿಭಟನೆಗೆ ಆಹಾರವಾಗುತ್ತಿವೆ. ತಾಲ್ಲೂಕಿನ ಕುರುಡಿಹಳ್ಳಿ ಗ್ರಾಮದ ರಿ.ಸಂ.142ರಲ್ಲಿ ಸುಮಾರು 39ಎಕರೆ ಸರಕಾರಿ ಗೋಮಾಳವಿದ್ದು, ಈಗಾಗಲೆ ಗೋಶಾಲೆ ನಿರ್ಮಾಣಕ್ಕ 10ಎಕರೆ ಮಂಜುರಾತಿ ಮಾಡಿರುವ ಬೆನ್ನಲ್ಲೇ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲಾ ಕಟ್ಟಡ ನಿರ್ಮಾಣಕ್ಕೆ 10ಎಕರೆ ಮಂಜುರಾತಿ ನೀಡಿ ಗಿಡಗೆಂಟೆಗಳನ್ನು ತೆರವುಗೊಳಿಸಿ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಮುಂದಾಗಿರುವುದನ್ನು ಗ್ರಾಮಸ್ಥರು ಅಡ್ಡಿ ಪಡಿಸಿದ್ದಾರೆ.
ಗೋಮಾಳದ ಸುತ್ತಲಿನ ಗ್ರಾಮಗಳು ಸೇರಿದಂತೆ ಜಾನುವಾರುಗಳಿಗೆ ಮೇಹಿಸಲು ಜಾಗವಿಲ,್ಲ ಇರುವ ಸರಕಾರಿ ಭೂಮಿಯಲ್ಲಿ ಸರಕಾರಿ ಕಟ್ಟಡಗಳ ನಿರ್ಮಾಣಕ್ಕೆ ನೀಡಿದ್ದು ಜಾನುವಾರುಗಳ ಮೇವಿಗೆ ತೊಂದರೆಯಾಗಲಿದ್ದು ಈಗಾಗಲೆ ರೈತನ ಜೀವನಾಡಿಯಾದ ಗೋವುಗಳ ಕಣ್ಮರೆಯಾಗಿದ್ದು. ರೈತರು ಜಾನುವಾರುಗಳನ್ನು ಪಾಲನೆ ಪೋಷಣೆ ಮಾಡಲು ಸರಕಾರಿ ಗೋಮಾಳ ವಿಲ್ಲದಂತಾಗಿರುವುದು ರೈತರ ಮನಸ್ಸಿನಲ್ಲಿ ನೋವುಂಟಾಗಿದೆ
ಇನ್ನೂ ಸರಕಾರ ರೈತ ಬಗರ್ ಹುಕ್ಕಂ ಸಾಗುವಳಿ ಭೂಮಿ ಉಳುಮೆ ಮಾಡುವಾಗ ಗ್ರಾಮದ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ಮೀಸಲಿಟ್ಟು ಉಳಿಕೆ ಭೂಮಿಯನ್ನು ಮಂಜೂರು ಮಾಡುತ್ತದೆ ಆದರೆ ಇಲ್ಲಿ ಜಾನುವಾರುಗಳ ಸಂಖ್ಯೆಗೆ ಕಡಿಮೆ ಗೋಮಾಳ ಇದೆ ಇಂತಹ ಮಾರಕವಾದ ಯೋಜನೆಗಳು ರೈತನಿಗೆ ಮಾರಕವಾಗಿದೆ. ರೈತನಿಗೆ ಒಂದು ಕಾನೂನು ಸರಕಾರಕ್ಕೆ ಒಂದು ಕಾನೂನು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ತಾಪಂ ಅಧ್ಯಕ್ಷ ಜಿ.ಟಿ.ತಿಪ್ಪೇಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ಗ್ರಾಮದಲ್ಲಿ ಸುಮಾರು 39 ಎಕರೆ ಈ ಗೋಮಾಳದ ಜಮೀನನ್ನು ನಂಬಿಕೊAಡು ಕುರಿ, ಮೇಕೆ ಹಾಗು ಜಾನುವಾರಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಾರೆ. ಮತ್ತೊಂದು ಕಡೆ ದೇವರ ರಾಸುಗಳು ಹೆಚ್ಚಿನದಾಗಿರುವುದರಿಂದ ಗೋಮಾಳದ ಜಮೀನು ಮೇಯಸಲು ಅತ್ಯವಶ್ಯಕ. ಈ ಗೋಮಾಳ ಬಿಟ್ಟರೇ ಬೇರೆ ಜಾಗವಿಲ್ಲ ಆದ್ದರಿಂದ ಗೋಮಾಳ ಜಾಗವನ್ನು ಬಿಟ್ಟು ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ತಿಪ್ಪೇಸ್ವಾಮಿ, ರಾಮಸ್ವಾಮಿ ಮಾತನಾಡಿ, ಯಾವುದೇ ಗ್ರಾಮ ಪಂಚಾಯಿತಿ ಪರವಾನಿಗೆ ಹಾಗೂ ಸ್ಥಳೀಯರ ಅಭಿಪ್ರಾಯ ಪಡೆಯದೆ ಇವರು ಪ್ರದೇಶದಲ್ಲಿ ಹೈಟೆನ್ಸನ್ ವಿದ್ಯುತ್ ಮಾರ್ಗಹೋಗಿದ್ದು ಪಕ್ಕದಲ್ಲೇ ಸಣ್ಣಕೆರೆಯಿದ್ದು ಯಾವಾಗಲು ನೀರು ಇರುತ್ತದೆ ಇದರಿಂದ ಮಕ್ಕಳಿಗೆ ವಿದ್ಯುತ್ ಹಾಗೂ ನೀರಿನ ಅವಘಡ ಸಂಭವಿಸುವ ಸಾಧ್ಯತೆ ಇದ್ದು ಕೂಡಲೆ ವಸತಿ ಶಾಲೆಗೆ ಮಂಜುರಾತಿ ನೀಡಿದ ಭೂಮಿಯನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದಿದ್ದಾರೆ.
ಇದೇ ಸಂಧರ್ಭದಲ್ಲಿ ಸ್ಥಳೀಯರಾದ ರಾಜಣ್ಣ, ಪುರುಶೋತ್ತಮ, ಉಮರೆಡ್ಡಿ, ವೀರಭದ್ರಪ್ಪ, ಮಂಜಣ್ಣ, ವೆಂಕಟೇಶ್, ಮಾಜಿ ತಾಪಂ ಅಧ್ಯಕ್ಷ ಜಿ.ಟಿ.ತಿಪ್ಪೇಸ್ವಾಮಿ, ಸುರೇಶ್, ಶಿವಣ್ಣ, ಇತರರು ಪ್ರತಿಭಟನೆ ಸ್ಥಳದಲಿದ್ದರು.
ಪೋಟೋ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ಸಮೀಪ ಜಾನುವಾರುಗಳ ಗೋಮಾಳ ಉಳಿಸಿ ಎಂದು ಸ್ಥಳೀಯರಿಂದ ಪ್ರತಿಭಟನೆ