ಎನ್‌ಪಿಎಸ್ ರದ್ದುಪಡಿಸಿ ಓಪಿಎಸ್
ಜಾರಿಗೊಳಿಸಲು ಸಂಕಲ್ಪ ಯಾತ್ರೆ” ಗೆ
ಚಳ್ಳಕೆರೆ ಶಿಕ್ಷಕರು ಸಾಥ್
ಚಳ್ಳಕೆರೆ : ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಎನ್ ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ(ಓ.ಪಿ.ಎಸ್) ಜಾರಿಗೊಳಿಸಲು ರಾಜ್ಯಾದ್ಯಂತ ಓಪಿಎಸ್ ಸಂಕಲ್ಪ ಯಾತ್ರೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಸಂಘ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಚಳ್ಳಕೆರೆ ತಾಲೂಕಿನ ಸುಮಾರು 250 ಶಿಕ್ಷಕರು ಸಂಕಲ್ಪ ರಥಕ್ಕೆ ಭಾಗವಹಿಸಲಿದ್ದೆವೆ ಎಂದು ಶಿಕ್ಷಕ ರಾಜಣ್ಣ ಹೇಳಿದ್ದಾರೆ
ಡಿಸೆಂಬರ್ 19 ರಂದು ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ “ಮಾಡು ಇಲ್ಲವೇ ಮಡಿ” ಹೋರಾಟಕ್ಕೆ ಸಿದ್ಧತೆ ಗೊಳಿಸಲು ಜಾಗೃತಿ ಮಾಡುವ ನಿಟ್ಟಿನಲ್ಲಿ ಈ ಯಾತ್ರೆಯು ಚಿತ್ರದುರ್ಗ ಜಿಲ್ಲೆಗೆ ದಿನಾಂಕ ಅಕ್ಟೋಬರ್ 20 ರಂದು ಗುರುವಾರದಂದು ಬೆಳಿಗ್ಗೆ 10:00 ಗಂಟೆಗೆ ಕನಕದಾಸರ ವೃತ್ತ, ಹೊಳಲ್ಕೆರೆ ರೋಡ್ ನಿಂದ ಸಂಗೊಳ್ಳಿ ರಾಯಣ್ಣ ವೃತ್ತ ನಂತರ ಅಂಬೇಡ್ಕರ್ ವೃತ್ತ ಮದಕರಿ ನಾಯಕ ವೃತ್ತ ಹಾಗೂ ಒನಕೆ ಓಬವ್ವ ವೃತ್ತ ಇಲ್ಲಿ ಮಾಲಾರ್ಪಣೆ ಮಾಡಿ, ಡಿಸಿ ಸರ್ಕಲ್ ಬಳಿ ಚಿತ್ರದುರ್ಗ,
ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಕೂರು, ಚಳ್ಳಕೆರೆ ತಾಲೂಕುಗಳು ಸುಮಾರು 600 ಕ್ಕೂ ಹೆಚ್ಚು ನೌಕರರು ಹಾಗೂ ನಿಗಮ ಮಂಡಳಿಯ ನೌಕರರು ನಗರದಲ್ಲಿ ಪಾದಯಾತ್ರೆ ಮುಖಾಂತರ ಬಹಿರಂಗ ಸಭೆ ಮಾಡಿದರು.
ತದನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆ ನಂತರ ಹಿರಿಯೂರು ಬೈಪಾಸ್ ರ ವರೆಗೆ ಸಂಚರಿಸಿ, ಹಿರಿಯೂರು ಟಿ.ಬಿ. ಸರ್ಕಲ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ಈ ತಾಲ್ಲೂಕಿನ ನೌಕರರು ವೃತ್ತದ ಬಳಿ ಸೇರಿ ತಾಲ್ಲೂಕು ಕಚೇರಿಯವರೆಗೆ ಪಾದಯಾತ್ರೆಯ ಮುಖಾಂತರ ಸಂಚರಿಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ನಂತರ ಹಿರಿಯೂರು ಬೈಪಾಸ್ ಮುಖಾಂತರ ತುಮಕೂರು ಜಿಲ್ಲೆಗೆ ಪ್ರವೇಶ ಮಾಡಲಿದೆ ಎನ್ನಲಾಗಿದೆ
ಈದೇ ಸಂಧರ್ಭದಲ್ಲಿ ಶಿಕ್ಷಕರಾದ ಹೆಚ್.ರಾಜಣ್ಣ, ಹೆಚ್.ಓ.ಶ್ರೀಕಾಂತ , ಗಣೇಶ್ ಟಿ.ಸುರೇಶ್, ಸಿದ್ದೇಶ, ರವಿ, ದ್ಯಾಮಣ್ಣ, ಸಿಟಿ.ವಿರೇಶ್ ಬಸವರಾಜ್, ತಿಪ್ಪೇಸ್ವಾಮಿ ,ಮಮತ, ಆಶಾ , ವಿಜಯಲಕ್ಷ್ಮಿ, ರಾಜಮ್ಮ ಶ್ರೀನಿವಾಸ್, ಟಿ.ಸುರೇಶ್ ಪ್ರಾಥಮಿಕ ಅನಯದಾನ ಶಾಲೆಗಳ ಅಧ್ಯಕ್ಷ ವೀರಣ್ಣ ಇತರರು ಪಾಲ್ಗೊಂಡಿದ್ದರು
ಪೋಟೋ ಚಳ್ಳಕೆರೆ ತಾಲೂಕಿನ ಶಿಕ್ಷಕರು ಓಪಿಎಸ್ ಸಂಕಲ್ಪ ಯಾತ್ರೆ ಚಿತ್ರದುರ್ಗ ಆಗಮಿಸಿದ ಹಿನ್ನಲೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.