ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ
ನೀಡುವಂತೆ ಸರಕಾರಕ್ಕೆ ಒತ್ತಾಯ
ಶ್ರೀಯೋಗಿ ನಾರೇಯಣ ಯತೀಂದ್ರ ಬಲಿಜ
ಸಂಘದಿAದ ತಹಶೀಲ್ದಾರ್ ಎನ್.ರಘುಮೂರ್ತಿಗೆ ಮನವಿ
ಚಳ್ಳಕೆರೆ : ಈಡೀ ರಾಜ್ಯದಲ್ಲಿ 40ರಿಂದ 46ಲಕ್ಷ ಜನಸಂಖ್ಯೆ ಇದೆ. ಸಮುದಾಯದ ಜನರು ಬಳೆ, ಹೂವು, ಮತ್ತು ಅರಿಶಿನಿ ಕುಂಕುಮ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಾರೆ, ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದ 2ಎ ಮೀಸಲಾತಿ ನೀಡುವಂತೆ ಶ್ರೀಯೋಗಿ ನಾರೇಯಣ ಯತೀಂದ್ರ ಬಲಿಜ ಸಂಘದಿAದ ತಹಶೀಲ್ದಾರ್ ಎನ್.ರಘುಮೂರ್ತಿಗೆ ಮನವಿ ಸಲ್ಲಿಸಿದರು.
ನಗರದ ತಾಲೂಕು ಕಚೇರಿಗೆ ಆಗಮಿಸಿದ ಬಲಿಜ ಸಮುದಾಯದ ಮುಖಂಡರು ಮನವಿ ಸಲ್ಲಿಸುವ ಮೂಲಕ ಸಂಘದ ಅಧ್ಯಕ್ಷ ಸಂಜೀವಮೂರ್ತಿ ಮಾತನಾಡಿ ಬಲಿಜ ಜನಾಂಗದಲ್ಲಿ 21 ಉಪ ಪಂಗಡಗಳನ್ನು ಒಳಗೊಂಡಿದ್ದು, 1994ಕ್ಕಿಂತ ಹಿಂದೆ ಹಿಂದುಳಿದ ಪಟ್ಟಿಯಲ್ಲಿ 2ಎ ಮೀಸಲಾತಿಯನ್ನು ಪಡೆಯುತ್ತಿದ್ದ ಬಲಿಜ ಸಮಾಜವನ್ನು ಅಂದಿನ ಸರ್ಕಾರವು ಯಾವುದೇ ಉಪಸಮಿತಿ ವರದಿ ಇಲ್ಲದೆ ಏಕಾಏಕಿ ಜನಾಂಗವನ್ನು 3ಎ ವರ್ಗಾಹಿಸಲಾಗುತ್ತು.
ಅದನ್ನು ಸಮುದಾಯ ಜನರು ಖಂಡಿಸಿದ್ದಕ್ಕೆ 2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಎಸ್. ಯಡಿಯೂರಪ್ಪ ಅವರು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಪ್ರವರ್ಗ 3ಎ ಯಿಂದ ಪ್ರವರ್ಗ 2ಎಗೆ ವರ್ಗಾಯಿಸಿದ್ದರು. ಆದರೆ ಜನಾಂಗಕ್ಕೆ ಈಹಿಂದೆ ಇದ್ದ 2ಎ ಮೀಸಲಾತಿಯನ್ನು ನಮಗೆ ನೀಡಲಿಲ್ಲ ಆದ್ದರಿಂದ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಬಲಿಜ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮನವಿ ಸ್ವೀಕರಿಸಿ ಮಾತನಾಡಿ ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳಿಸಿಕೊಡಲಾಗುವುದು, ದಿನ ನಿತ್ಯದ ಕನಿಷ್ಠ ಜೀವನ ನಡೆಸುವ ಸಮುದಾಯದ ಇತ ದೃಷ್ಠಿಯಿಂದ ಅತೀ ಶೀಘ್ರದಲ್ಲಿ ಯಥವತ್ತಾಗಿ ಮನವಿ ಕಳಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಬಲಿಜ ಸಮಾಜದ ಮುಖಂಡರಾದ ಬಿ.ವಿ.ಚಿದಾನಂದಮೂರ್ತಿ, ಬಿ.ಕೆ.ಸಂಜೀವ, ಸತೀಶ್, ಮಂಜುನಾಥ, ನರಸಿಂಹಮೂರ್ತಿ, ಡಿ.ವೆಂಕಟೇಶ್, ತರುಣ್, ನಾಗಲಕ್ಷಿö್ಮÃ ಸೇರಿದಂತೆ ಇತರರು ಪಾಲ್ಗೋಂಡಿದ್ದರು.
ಪೋಟೋ ಚಳ್ಳಕೆರೆ ನಗರದ ತಾಲೂಕು ಕಚೇರಿಗೆ ಆಗಮಿಸಿದ ಬಲಿಜ ಸಮುದಾಯದ ಮುಖಂಡರು ತಹಶೀಲ್ದಾರ್ ಎನ್.ರಘುಮೂರ್ತಿಗೆ ಮನವಿ ಸಲ್ಲಿಸುವ ಮೂಲಕ ಸಂಘದ ಅಧ್ಯಕ್ಷ ಸಂಜೀವಮೂರ್ತಿ ಮಾತನಾಡಿದರು.