ಚಳ್ಳಕೆರೆ :ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವೃದ್ದ : ಸ್ಥಳೀಯರಿಂದ ರಕ್ಷಣೆ
ರಾಜಕಾಲುವೆ ದುರಸ್ಥಿ ಕಾರ್ಯ ಯಾವಾಗ
ಅಜ್ಜನಗುಡಿ ಕೆರೆಕೊಡಿ ನೀರು ನಗರದೊಳಗೆ
ರಸ್ತೆ ಸಂಚಾರ ಬಂದ್ : ವಾಹನ ಸಾವಾರರ ಪರದಾಟ
ರಾಮುದೊಡ್ಮನೆ
ಚಳ್ಳಕೆರೆ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ವರಣರಾಯನಿಗೆ ಬಯಲು ಸೀಮೆಯ ಹಳ್ಳ ಕೊಳ್ಳಗಳು ಭರ್ತಿಯಾಗಿ ಕೆರೆಗಳು ಕೊಡಿ ಬಿದ್ದಿವೆ.
ಇನ್ನೂ ಸುಮಾರು ವರ್ಷಗಳ ಕಾಲ ಬಿಸಿಲಿಗೆ ಬಾಯಿತೆರೆದ ನಗರದ ಜಲಮೂಲ ಅಜ್ಜನಗುಡಿ ಕೆರೆ ಕೂಡ ತುಂಬಿ ಕೊಡಿ ಬಿದ್ದಿದೆ
ಕೆರೆಕೊಡಿ ಬಿದ್ದ ನೀರು ನಗರದ ಒಳಗೆ ರಾಜ ಕಾಲುವೆ ಮೂಲಕ ಹರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ ಆದರೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಾದ ನಗರಸಭೆ ಮಾತ್ರ ನಿದ್ದೆಯ ಮಂಪರಲಿನಲ್ಲಿದೆ
ಕೆರೆನೀರು ಹೊರ ಹೊಗಲು ರಾಜ ಕಾಲುವೆಗಳು ದುರಸ್ಥಿ ಕಾರ್ಯ, ಕೆಳಸೆತುವೆಗಳ ಸುಗಮ ಮಾರ್ಗ ಮಾಡಬೇಕಾದ ನಗರಸಭೆ ಜಾಣ ಕುರುಡುತನ ಪ್ರದರ್ಶನ ತೋರುತ್ತಿದೆ.
ಇತ್ತ ಅಜ್ಜನಗುಡಿ ಕೆರೆಯಿಂದ ನೆರವಾಗಿ ರಹಿಂನಗರದ ಮೂಲಕ ಹಾದು ಹೊಗುವ ರಾಜಕಾಲುವೆ ಮಾರ್ಗದ ರಸ್ತೆಯ ಕೆಳ ಸೆತುವೆಗಳು ಹೂಳು ತುಂಬಿದ್ದು ನೀರು ರಸ್ತೆ ಮೇಲೆ ಹರಿಯುವುದರಿಂದ ವಾಹನ ಸಾವರರಿಗೆ ನಗರದಿಂದ ಸ್ವಗ್ರಾಮಗಳಿಗೆ ತೆರಳಲು ಹರಸಾಹಸ ಪಡುವಂತಾಗಿದೆ.
ತಡೆಗೋಡೆ ರಕ್ಷಣೆ ಯಾವಾಗ..?
ಇನ್ನೂ ವಾಹನ ಸಾವಾರರ ದುಸ್ಸಾಹಸಕ್ಕೆ ಬೈಕ್‌ಗಳು ನೀರಿನಲ್ಲಿ ಕೊಚ್ಚಿಹೊಗಿವೆ ಇನ್ನೂ ವಯಸ್ಸಾದ ವೃದ್ದರೊಬ್ಬ ಕೂಡ ನೀರಿನಲ್ಲಿ ಕೊಚ್ಚಿ ಹೋಗುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಹಾಗುತ್ತಿದೆ, ಆದರೆ ಪ್ರಮುಖ ರಸ್ತೆಗಳ ರಾಜ ಕಾಲುವೆ ಮಾರ್ಗಕ್ಕೆ ತಡೆಗೋಟೆ ನಿರ್ಮಿಸಬೇಕಾದ ಲೋಕಪಯೋಗಿ ಇಲಾಖೆ ಮಾತ್ರ ನಮಗೆ ಸಂಬAದವಿಲ್ಲವೆAಬAತೆ ಮೌನವಾಗಿದೆ.
ಇತ್ತ ನಗರಸಭೆ ಅಧಿಕಾರಿಗಳು ರಾಜ ಕಾಲುವೆ ಕೆಳ ಸೆತುವೆಗಳ ಮೂಲಕ ಹಾದು ಹೋಗುವ ಕೆರೆಕೊಡಿ ನೀರು ರಸ್ತೆ ಮೇಲೆ ಹರಿಯುತ್ತಿವೆ ಇನ್ನೂ ರಸ್ತೆ ಮೇಲೆ ಹರಿಯುವ ನೀರು ನಿಖರವಾಗಿ ವಾಹನ ಸಾವಾರರಿಗೆ ಗೋಚರಿಸದೆ ಇರುವುದರಿಂದ ಕೆಲವು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ, ಈಗೇ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿಲ್ಯಕ್ಷö್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲೆಲ್ಲಿ ಸೂಕ್ಷö್ಮ ರಸ್ತೆಗಳು :
ನಗರದ ರಹಿಂನಗರದ ಸಾಯಿಚೇತನ ಶಾಲೆಸಮೀಪದ ರಸ್ತೆ ಕೆಳಸೆತುವೆ, ಹಾಗೂ ರಹಿಂನಗರದ ಸಮೀಪದ ನನ್ನಿವಾಳ ಪ್ರಮುಖ ರಸ್ತೆ ಕೆಳಸೆತುವೆ, ಬಳ್ಳಾರಿ ರಸ್ತೆ ಕೆಳಸೆತುವೆ, ನಂತರ ಕಾಟಪನಹಟ್ಟಿ ಸಮೀಪದ ಕೆಳಸೆತುವೆ, ಮತ್ತು ಪಾವಗಡ ಮುಖ್ಯರಸ್ತೆ ಕೆಳಸೆತುವೆ, ಹಾಗೂ ರೈಲ್ವೆ ಸ್ಟೆಷನ್ ಪ್ರಮುಖ ರಸ್ತೆಯ ಕೆಳಸೆತುವೆಯನ್ನು ಗುರುತಿಸಲಾಗಿದೆ,
ಬಾಕ್ಸ ಮಾಡಿ :
1.ನಗರಸಭೆ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಹಾದು ಹೋಗಿರುವ ರಾಜಕಾಲುವೆ ಒತ್ತುವರಿ ತೆರುವು ಮಾಡಿ ದುರಸ್ಥಿ ಕಾರ್ಯ ಮೂಲಕ ನಗರದ ಪ್ರಮುಖ ರಸ್ತೆ ಕೆಳಸೆತುವೆಗಳ ದುರಸ್ಥಿ ಕಾರ್ಯ ಮಾಡಬೇಕಾಗಿದೆ ,–ಕೆ.ಪಿ.ಭೂತಯ್ಯ ರಾಜ್ಯ ರೈತ ಸಂಘ
ಸುಜಾತಾ ಪ್ರಹ್ಲಾದ್ ನಗರಸಭೆ ಸದಸ್ಯೆ
2.ಜನವಸತಿ ಪ್ರದೇಶಗಳಿಗೆ ನೀರು ನುಗ್ಗದಂತೆ ಮುಂಜಾಗ್ರತಾ ಕ್ರಮವಾಗಿ ನಗರಸಭೆ ಕ್ರಮವಹಿಸಬೇಕು ನೀರು ನುಗ್ಗಿದ ಮೇಲೆ ಕ್ರಮ ವಹಿಸುವುದಕ್ಕೂ ಮುನ್ನ ಸೂಕ್ಷö್ಮಜನವಸತಿ ಪ್ರದೇಶಗಳಿಗೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ಅಗತ್ಯ ಜನರ ರಕ್ಷಣೆ ಮುಖ್ಯ.–
3.ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ರಾಜಕಾಲುವೆ ದುರಸ್ಥಿ ಕಾರ್ಯ ಸಂಪೂರ್ಣವಾಗಿ ಮಾಡಿದೆ, ಆದರೆ ಅತೀ ಹೆಚ್ಚು ಮಳೆ ಬಂದ ಕಾರಣ ಕೆರೆಯಲ್ಲಿ ನೀರಿನ ಹೊರಹರಿವು ಹೆಚ್ಚಾಗಿದೆ ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜನವಸತಿ ಪ್ರದೇಶಗಳಿಗೆ ಹೆಚ್ಚಿನ ನೀರು ಬಂದಲ್ಲಿ ಸ್ಥಳಾಂತರ ಮಾಡಲು ಧ್ವನಿ ವರ್ಧಕ ಮೂಲಕ ಜನವಸತಿ ಪ್ರದೇಶಗಳಿಗೆ ತಿಳಿಸಲಾಗಿದೆ, ಕೆಳ ಸೆತುವೆಗೆ ಮಳೆನೀರು ಕೊಂಚ ಕಡಿಮೆ ಆದ ಮೇಲೆ ಕಾಮಗಾರಿ ದುರಸ್ಥಿ ಮಾಡಲಾಗುವುದು ಜನಗಳು ದುಸ್ಸಾಹಕ್ಕೆ ಇಳಿಯದೆ ಪರ್ಯಾಯ ದಾರಿ ಮೂಲಕ ಓಡಾಡಬೇಕು — ಸಿ.ಚಂದ್ರಪ್ಪ, ಪೌರಾಯುಕ್ತ ನಗರಸಭೆ ಚಳ್ಳಕೆರೆ
ಪೋಟೋ1 ಚಳ್ಳಕೆರೆ ನಗರದ ಪಾವಗಡ ರಸ್ತೆಯ ಕೆಳಸೆತುವೆ ಮುಚ್ಚಿರುವುದರಿಂದ ಕೊಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು.
2.ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿ ವೃದ್ದನೊಬ್ಬ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದು.
3.ಚಳ್ಳಕೆರೆ ನಗರದ ರಹಿಂ ನಗರದ ಬಳಿ ಪ್ಲಾಸ್ಟಿಕ್ ಮಿಶ್ರಣಗೊಂಡ ವಿಷಪೂರಿತ ಕೊಳಚೆ ನೀರು ಹರಿಯುತ್ತಿರುವುದು.
4.ಚಳ್ಳಕೆರೆ ನಗರದ ರಹಿಂ ನಗರದ ಹತ್ತಿರ ಕೆರೆಕೊಡಿ ನೀರು ಹರಿಯುತ್ತಿರುವುದರಿಂದ ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನಕುಮಾರ್ ಜನರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವುದು