ಸೇವೆ ನೀಡದ ಗ್ಯಾಸ್ ಏಜಿನ್ಸಿಗಳ ವಿರುದ್ಧ ಗ್ರಾಹಕರ ಆಕ್ರೋಶ
ಚಳ್ಳಕೆರೆ : ವಿದ್ಯುತ್ ಇಲ್ಲ, ಸರ್ವರ್ ಇಲ್ಲ ಎಂದು ನಿತ್ಯವೂ ಸಬೂಬು ಹೇಳುತ್ತಾ ಸಾರ್ವಜನಿಕರನ್ನು ಕಚೇರಿಗಳತ್ತ ಅಲೆದಾಡಿಸುವುದು ಕೆಲವು ಏಜಿನ್ಸಿಗಳ ಕಾರ್ಯವೈಖರಿ ಮಾಮೂಲಾಗಿದೆ, ದಿನದ ಇಪ್ಪತ್ತುನಾಲ್ಕು ಗಂಟೆಗಳ ಕಾಲ ಸೇವೆ ಲಭ್ಯ ಎನ್ನುವ ಮೆಡಿಕಲ್ ಔಷಧಿ ಅಂಗಡಿಗಳಿAದ ಪೆಟ್ರೋಲ್ ಡಿಸೇಲ್, ಗ್ಯಾಸ್ ಮಾಲೀಕರಿಂದ ಜನರು ರೋಸಿ ಹೋಗಿದ್ದಾರೆ ಆದರೆ ಗ್ರಾಹಕರ ವೇದಿಕೆ ಮಾತ್ರ ಮೌನವಾಗಿದೆ.


ಅದರಂತೆ ಅ.15ರಂದು ನಗರದಲ್ಲಿ ಕಾರಣಾಂಗಳಿAದ ಮುಂಜಾನೆಯೇ ವಿದ್ಯುತ್ ಇಲ್ಲದೆ ಇರುವುದರಿಂದ ಕೆಲವು ಏಜಿನ್ಸಿಗಳು ಗ್ರಾಹಕರಿಗೆ ಸರಿಯಾದ ಸೇವೆ ನೀಡದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಅದರಂತೆ ನಗರದ ಮಧ್ಯ ಭಾಗದಲ್ಲಿ ನಿರ್ಮಿತವಾಗಿರುವ ಖಾಸಗಿ ಗ್ಯಾಸ್ ಏಜಿನ್ಸಿಯಿಂದ ಬೆಳಿಗ್ಗೆಯಿಂದ ವಿದ್ಯುತ್ ಇಲ್ಲ ಎಂದು ಉತ್ತರ ನೀಡುವ ಏಜಿನ್ಸಿಗೆ ಗ್ರಾಹಕರು ತರಾಟೆ ತೆಗೆದುಕೊಂಡ ನಂತರ 12 ಗಂಟೆ ತರುವಾಯ ಸೇವೆ ನೀಡಿದ್ದಾರೆ.
ಈಗೇ ನಗರದಲ್ಲಿ ಅನೇಕ ಏಜಿನ್ಸಿಗಳ ಪರವಾನಿಗೆ ಪಡೆದು ಮೌನ ವಹಿಸಿದ್ದಾರೆ ಆದರೆ ಗ್ರಾಹಕರ ವೇದಿಕೆಯ ಉಸ್ತೂವಾರಿ ನೊಡುವ ಅಧಿಕಾರಿಗಳೂ ಕೂಡ ಮೌನವಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದರಂತೆ ಮೆಡಿಕಲ್ ಔಷಧಿ ಅಂಗಡಿಲಿಗೆ ರಾತ್ರಿ ಪಾಳಯದಲ್ಲಿ ಅಲೆದಾಡುವ ಪರಸ್ಥಿತಿ ಕೂಡ ನಿರ್ಮಾಣವಾಗಿದೆ ಆದರೆ ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಸೇವೆ ಎಂದು ಪರವಾನಿಗೆ ಪಡೆದು ಮಾಲೀಕರು ಸಂಜೆಯಾದರೆ ಬಾಗಿಲು ಹಾಕುತ್ತಾರೆ, ಇನ್ನೂ ರಾತ್ರಿಪಾಳಯದಲ್ಲಿ ರೋಗಿಗಳ ಪರದಾಟ ಹೇಳತೀರದು ಇನ್ನೂ ಮೇಲೂಸ್ತೂವಾರಿ ನೋಡುವ ಅಧಿಕಾರಗಳು ಯಾವುದಕ್ಕೆ ಮೌನವಾಗಿದ್ದಾರೆ ಎಂಬುದು ಮನಗಾಣಬೇಕಿದೆ
ಬಾಕ್ಸ್ ಮಾಡಿ :
ಸರ್ ನಾವು ಸುಮಾರು ನಾಲ್ಕು ಕಿಲೋ ಮೀಟರ್ ದೂರದಿಂದ 100 ಆಟೋ ಬಾಡಿಗೆ ಮಾಡಿಕೊಂಡು ಸಿಲಿಡಂರ್ ತರಲು ಬಂದಿದ್ದೆವೆ ಆದರೆ ಇವರು ಕರೆಂಟ್ ಇಲ್ಲ ಎಂದು ನೆಪ ಹೇಳಿಕೊಂಡರೆ, ಪ್ರತಿ ನಿತ್ಯವೂ ಏಜಿನ್ಸಿಗೆ ಬರಲು ಹೆಚ್ಚುವರಿ ಹಣ ಯಾರು ಕೊಡಬೇಕು ಇವರು ಸೇವೆ ಸರಿಯಾದ ರೀತಿಯಲ್ಲಿ ನೀಡಬೇಕು—ಮುರುಳಿ ಗ್ರಾಹಕ

Namma Challakere Local News
error: Content is protected !!