ಗ್ರಾಮವಾಸ್ತವ್ಯ ನೆಪಮಾತ್ರಕ್ಕೆ ಆಗದಿರಲಿ : ಶಾಸಕಟಿ.ರಘುಮೂರ್ತಿ
ಚಳ್ಳಕೆರೆ : ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ ಕೆಲವು ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಜಾಲವೃತವಾಗಿ ಜನರು ಸಂತ್ರಸ್ತರಾಗಿದ್ದಾರೆ ಅವರಿಗೆ ಅಧಿಕಾರಿಗಳು ಸ್ಥಳದಲ್ಲಿದ್ದು ಆಶ್ರಯ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿವತಿಯಿಂದ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ನಿಖರವಾದ ವರದಿ ನೀಡಿ ಪರಿಹಾರ ಹೊದಗಿಸಬೇಕು,
ತಾಲೂಕಿನಾಧ್ಯಾಂತ ಸುರಿಯುತ್ತಿರುವ ಮಳೆಯಿಂದ ಕೆರೆಗಳು ತುಂಬಿ ಕೋಡಿ ಬಿದ್ದು ರಸ್ತೆ ಸಂಪರ್ಕಗಳು ಕಡಿತಗೊಂಡಿವೆ,
ಮಳೆಗೆ ಮೆನಗಳು,ಬೆಳೆಗಳು ಹಾನಿಯಾಗಿದ್ದು ಮಳೆಯಿಂದ ಜಲಾವೃತಗೊಂಡ ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ, ಬೆಳೆ ನಷ್ಟದ ಬಗ್ಗೆ ಸರಕಾರಕ್ಕೆ ವರದಿ ನೀಡಬೇಕು, ತಾಲೂಕಿನ ಬೆಳೆ ಹಾನಿಯಾದ ಸ್ಥಳಗಳಿಗೆ ಅಧಿಕಾರಿಗಳು ಬೇಟಿ ನೀಡಿ ತಕ್ಷಣವೇ ಪರಿಹಾರ ಹೊದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಇಡೀ ಸರಕಾರಿ ವ್ಯವಸ್ಥೆಯನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತರುವ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿಯಲ್ಲಿ ಇಪ್ಪತ್ತು ನಾಲ್ಕು ಗಂಟೆಯು ಸೇವೆ ನೀಡಲು ಸರಕಾರಿ ಅಧಿಕಾರಿಗಳು ಸನ್ನದರಾಗಿದ್ದೆವೆ
ಸರಕಾರಿ ಸೌಲಭ್ಯಗಳನ್ನು ಪಡೆಯಲು ಗ್ರಾಮೀಣ ಜನರು ನಗರದ ಸರಕಾರಿ ಕಚೇರಿಗಳಿಗೆ ಅಲೆದಾಡಬಾರದು ಎಂಬ ಉದ್ದೇಶದಿಂದ ತಾಲೂಕು ಆಡಳಿತ ಜಿಲ್ಲಾಧಿಕರಿಗಳ ನಡೆ ಹಳ್ಳಿಕಡೆ ಎಂಬ ಯೋಜನೆ ಜಾರಿಯಾಗಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ನಿಮ್ಮ ಗ್ರಾಮಕ್ಕೆ ಬಂದಿದ್ದು ಪೌತಿ ಖಾತೆ, ಪೋಡಿ ದುರಸ್ತಿ, ನಕಾಶೆ ದಾರಿ, ಸ್ಮಶಾನಗಳ ಒತ್ತುವರಿ ತೆರವು ಗೋಳಿಸಲು ಸೂಚನೆ ನೀಡಿದೆ ಅದರಂತೆ ಎಲ್ಲಾ ಗ್ರಾಮಗಳಲ್ಲಿ ಪೌತಿ ಖಾತೆ ಅದಲಾತ್ ಮಾಡಲಾಗುವುದು ಎಂದು ತಿಳಿಸಿದರು.
ಕಂದಾಯ ಇಲಾಖೆ ಸಮಸ್ಯೆಗಳಿಂದ ಗ್ರಾಮೀಣ ಜನರು ಸರಕಾರಿ ಕಚೇರಿಗಳಿಗೆ ಅಲೆದಾಡಿಸದಂತೆ ಜನಸಂಪರ್ಕ ಸಭೆಯಲ್ಲಿ ಜನರ ಸಮಸ್ಯೆಗಳಿಗೆ ಪರಹಾರ ನೀಡಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮಲ್ಲಿ ಗ್ರಾಪಂ ಅಧ್ಯಕ್ಷ,ಉಪಾಧ್ಯಕ್ಷ ,ಸದಸ್ಯರು ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು
ಗ್ರಾಮ ವಾಸ್ತವ್ಯಕ್ಕೆ ಸ್ಥಳೀಯ ಶಾಸಕರನ್ನು ಎತ್ತಿನಬಂಡಿಯಲ್ಲಿ ಹೂವಿನ ಮಳೆ ಸುರಿಸುವುದರ ಮೂಲಕ ಆತ್ಮೀಯ ವಾಗಿ, ವಿವಿಧ ಕಲಾತಂಡ, ಕುಂಭಮೇಳದೊಂದಿಗೆ ಪ್ರಮುಖ ರಸ್ತೆಯ ಮೂಲಕ ಮೆರವಣಿಗೆ ಮೂಲಕ ವೇಧಿಕೆಯತ್ತ
ಶಾಸಕ ಟಿ.ರಘುಮೂರ್ತಿಯನ್ನು ಬರಮಾಡಿಕೊಂಡರು.