ವಿಶ್ವಕರ್ಮ ಕಮ್ಮಾರರ ಬದುಕಿನ ಕಷ್ಟವನ್ನು ಆಲಿಸಿದ ರಾಹುಲ್…

ಚಳ್ಳಕೆರೆ : ಬಾರತ್ ಜೋಡೋ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆಯು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಬಿಜಿಕೆರೆ ಗ್ರಾಮಕ್ಕೆ ಅ.13 ನೇ ತಾರೀಖಿನಂದು ಆಗಮಿಸಿದ ಸಂಧರ್ಭದಲ್ಲಿ

ಸ್ಥಳಿಯ ನಿವಾಸಿಗಳು ವಿಶ್ವಕರ್ಮ ಕಮ್ಮಾರಿಕೆ ವೃತ್ತಿ ಬದುಕಿನಿಂದ ಜೀವನ ಸಾಗಿಸುತ್ತಿರುವ ಬಿ.ಜಿ.ಕೆರೆ ಮಂಜುನಾಥಚಾರ್ ರವರನ್ನು

ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ರವರು ಬೇಟೆಯಾಗಿ ಮಂಜುನಾಥಚಾರ್ ರವರ ಕೈಗಳಿಗೆ ಬೊಬ್ಬೆಗಳು ಬರಲು ಕಾರಣವೇನೆಂಬುದನ್ನು ತಿಳಿದುಕೊಂಡರು

ಈ ಬಗ್ಗೆ ಮಾತಾನಾಡಿದ ರಾಹುಲ್ ಗಾಂಧಿ … ಈಗಿನ ಆಧುನಿಕ ಪ್ರಪಂಚದಲ್ಲಿ ಕೂಡ ಈ ರೀತಿ ಕೈಗಳು ಬೊಬ್ಬೆ ಬರುವ ಹಾಗೆ ಕಾಯಕ ಮಾಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ..

ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ರಾಜ್ಯ ಹಾಗು ಕೇಂದ್ರ ಸರ್ಕಾರಗಳು ಒದಗಿಸುವ ಮೂಲಕ ಅತ್ಯಂತ ನೈಪುಣ್ಯತೆಯನ್ನು ಹೊಂದಿರುವ

ವಿಶ್ವಕರ್ಮ ಸಮಾಜದ ಅಸಂಘಟಿತರಿಗೆ ಸೂಕ್ತ ಸವಲತ್ತುಗಳನ್ನು ಒದಗಿಸುವುದರ ಬಗ್ಗೆ ಮಾತನಾಡಿದರು..

ಈದೇ ಸಂಧರ್ಭದಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸದಸ್ಯರಾದ ಮೆಹಬೂಬ್ ಪಾಷಾ, ಅಖಿಲಭಾರತ ವಿಶ್ವಕರ್ಮ ಪರಿಷತ್ ರಿ. ನವದೆಹಲಿಯ ಕರ್ನಾಟಕ ರಾಜ್ಯಾದ್ಯಕ್ಷರಾದ ಆರ್.ಪ್ರಸನ್ನಕುಮಾರ್, ಉಪಾಧ್ಯಕ್ಷ ರಾದ ಬಿ.ಜಿ.ಕೆರೆ ನಾಗೇಂದ್ರಚಾರ್ ಭಾಗಿಯಾದರು….

About The Author

Namma Challakere Local News
error: Content is protected !!