ಗೌರಸಮುದ್ರ ಗ್ರಾಪಂ.ಯಲ್ಲಿ ವಿಶ್ವ ಕೈತೊಳೆಯುವ ದಿನಾಚರಣೆ
ಚಳ್ಳಕೆರೆ : ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯತಿಯಲ್ಲಿ ಇಂದು ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ಆಚರಣೆ ಮಾಡಲಾಯಿತು,
ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಬಸವರಾಜ್, ಈಡೀ ವಿಶ್ವದಲ್ಲಿ ಆರೋಗ್ಯ ದೃಷ್ಠಿಯಿಂದ ಪ್ರತಿಯೊಬ್ಬರು ಸ್ವಚ್ಚತೆಯಿಂದ ಇರಲು ಕೈ ತೊಳೆಯುವ ಪದ್ದತಿ ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು, ಆರೋಗ್ಯದ ಹಿತ ದೃಷ್ಠಿಯಿಂದ ಕಾಳಜಿ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಎಂ ಓಬಣ್ಣ, ಟಿ.ಶಶಿಕುಮಾರ್ ಹಾಗೂ ಪಂಚಾಯತಿ ಕಾರ್ಯದರ್ಶಿ ಬಿ.ನಾಗರಾಜ್ ಹಾಗು ಪಂಚಾಯಿತಿ ಸಿಬ್ಬಂದಿಯಾದ ಪ್ರಕಾಶ್, ರಾಜಪ್ಪ, ಬೊಮ್ಮಣ್ಣ ಮತ್ತು ಜಿಜೆನಾಗರಾಜ ಸಾರ್ವಜನಿಕರು ಪಾಲ್ಗೊಂಡಿದ್ದರು.