ಜಾನುವಾರಗಳಲ್ಲಿ ಚರ್ಮಗಂಟು ರೋಗ : ಪಶು ಇಲಾಖೆಯಿಂದ ಸೂಕ್ತ ಚಿಕಿತ್ಸೆ
ಚಳ್ಳಕೆರೆ: ವೈರಸ್ ನಿಂದ ಹರಡುವ ಚರ್ಮದ ಖಾಯಿಲೆ ಜಾನುವಾರುಗಳನ್ನು ಬಾಧಿಸುತ್ತದೆ ಇದರಿಂದ ಗ್ರಾಮೀಣ ಪ್ರದೇಶದ ರೈತರು ಜಾನುವಾರುಗಳಿಗೆ ರೋಗದ ಲಕ್ಷಣ ಕಂಡುವ ಬಂದರೆ ಮುಂಜಾಗ್ರತ ಕ್ರಮವಾಗಿ ಲಸಿಕೆ ಪಡೆಯಬೇಕು ಎಂದು ಪಶುವೈಧ್ಯಾಧಿಖಾರಿ ಡಾ.ರೇವಣ್ಣ ಹೇಳಿದ್ದಾರೆ.
ತಾಲೂಕಿನಲ್ಲಿ ಕಾಣಿಸಿಕೊಂಡ ಚರ್ಮದ ರೋಗಕ್ಕೆ ತುರ್ತಾ ಅಗತ್ಯ ಕ್ರಮಗಳನ್ನು ಕೈಕೊಂಡು ರೋಗ ನಿಯಂತ್ರಣಕ್ಕೆ ಗ್ರಾಮೀಣ ಭಾಗದಲ್ಲಿ ಕ್ರಮ ವಹಿಸುತ್ತಿದ್ದಾರೆ.
ಇನ್ನೂ ತಾಲೂಕಿನಲ್ಲಿ 348 ಚರ್ಮಗಂಟು ರೋಗವಿರುವ ಜಾನುವಾರುಗಳನ್ನು ಪತ್ತೆ ಮಾಡಿದ್ದು, ಅಗತ್ಯ ಚಿಕಿತ್ಸೆಯಿಂದ 74 ಜಾನುವಾರುಗಳು ರೋಗದಿಂದ ಗುಣ ಮುಖವಾಗಿದ್ದು, ಗರ‍್ಲಕಟ್ಟೆ ಗ್ರಾಮದಲ್ಲಿ 1 ಜಾನುವಾರು ಮೃತಪಟ್ಟಿದ್ದು ಇಲಾಖೆಯಿಂದ 20 ಸಾವಿರ ರೂ ಪರಿಹಾರ ಬರಲಿದ್ದು ಸರಕಾರಕ್ಕೆ ವರದಿ ಕಳಿಸಲಾಗಿದೆ ಎಂದರು.
ದನಗಳ ಸಂತೆ ರದ್ದು :
ಜಾನುವಾರುಗಳ ಚರ್ಮ ರೋಗದ ಖಾಯಿಲೆ ಎಲ್ಲೆಡೆ ವ್ಯಾಪಕವಾಗಿ ಹರಡಿರುವುದರಿಂದ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಾನುವಾರುಗಳ ಸಂತೆಯನ್ನು ಸಂಪೂರ್ಣವಾಗಿ ನೀಷೇಧ ಮಾಡಲಾಗಿದೆ, ಅದರಂತೆ, ಹೊರ ರಾಜ್ಯದಿಂದ ಬರುವ ಜಾನುವಾರಗಳ ತಡೆಗೆ ಆಂದ್ರಗಡಿ ಭಾಗದಲ್ಲಿ ಪೊಲೀಸ್ ಹಾಗೂ ಪಶುಸಂಗೋಪನೆ ಇಲಾಖೆ ಜಂಟಿಯಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆದೆ ಕಡಿವಾಣ ಹಾಕಲಾಗುತ್ತದೆ.
ಜಾನುವಾರುಗಳ ತಪಾಸಣೆ :
ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ನಿತ್ಯ ಬೆಳಿಗ್ಗೆ ವಿವಿಧ ಗ್ರಾಮಗಳಿಗೆ ತೆರಳಿ ರೋಗದ ವಿರುದ್ಧ ಚಿಕಿತ್ಸೆ ನೀಡುತ್ತಿದ್ದಾರೆ. ರೋಗ ನಿಯಂತ್ರಣದಲ್ಲಿದ್ದು, ರೈತರು ಆತಂಕಪಡುವ ಅವಶ್ಯಕತೆ ಇಲ್ಲ, ಗ್ರಾಮೀಣ ಭಾಗದ ಪ್ರತಿ ಹಳ್ಳಿಗಳಿಗೆ ಹೋಗಿ ಜಾನುವಾರುಗಳ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು, ಈಗಾಗಲೆ ಅಗತ್ಯ ಔಷಧಿ ಸರಬರಾಜಿಗೆ ಸರಕಾರಕ್ಕೆ ಕಳಿಸಿದ್ದು ಸರಕಾರವು ಸಹ ಜಾನುವಾರುಗಳ ರಕ್ಷಣೆಗೆ ಅಗತ್ಯ ಔಷಧಿ ಚುಚ್ಚುಮದ್ದು ನೀಡಲಾಗುವುದು.
ರೋಗ ಲಕ್ಷಣಗಳು ಈ ರೋಗ ಹೊಸದಾಗಿ ಕಾಣಿಸಿಕೊಂಡಿದ್ದು ವೈರಸ್‌ನಿಂದ ಹಸುಗಳು ಸೇರಿದಂತೆ ಎಲ್ಲ ಜಾನುವಾರುಗಳಿಗೆ ಬರುತ್ತದೆ. ಜಾನುವಾರುಗಳಿಗೆ ಕಚ್ಚುವ ಹಾಗೂ ಉಣ್ಣೆಗಳಿಂದ ಮತ್ತು ರೋಗವಿರುವ ಪ್ರಾಣಿಗಳ ನೇರ ಸಂಪರ್ಕದಿAದಲೂ ಈ ರೋಗ ಪ್ರಾಣಿಗಳಲ್ಲಿ ಹರಡುತ್ತದೆ. ಕಲುಷಿತ ನೀರು, ಮೇವಿನಿಂದಲೂ ಹರಡುತ್ತದೆ. ಆದರೆ, ಈ ರೋಗ ಮನುಷ್ಯರಿಗೆ ಹರಡುವುದಿಲ್ಲ ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ಪ್ರಾಣಿಗಳಲ್ಲಿ ಜ್ವರ ಕಾಣಿಸಿಕೊಂಡು ನಂತರ ಚರ್ಮದ ಮೇಲೆ ಗಂಟುಗಳಾಗಿ ಒಡೆದು ಗಾಯಗಳಾಗುತ್ತವೆ. ಇದರಿಂದ ಹಸುಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಎತ್ತು ಮತ್ತು ಹೋರಿಗಳಲ್ಲಿ ಹೂಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದಕಾರಣ ರೈತರು ಕೂಡಲೇ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕ ಮಾಡಿ ಮುಂಜಾಗ್ರತೆಯಾಗಿ ರೈತರು ಸಮೀಪದ ಪಶು ವೈದ್ಯಾಧಿಕಾರಿಗಳ ಸಲಹೆ ಪಡೆಯುವಂತೆ ರೈತರಿಗೆ ಸಲಹೆ ನೀಡಿದ್ದಾರೆ.