ಪ್ರಗತಿಪರ ರೈತ ದಯಾನಂದಮೂರ್ತಿ ತೋಟಕ್ಕೆ ವಿದೇಶದ ವಿದ್ಯಾರ್ಥಿಗಳಿಂದ ಕೃಷಿ ಅಧ್ಯಯನ
ಚಳ್ಳಕೆರೆ : ಕೇವಲ ಒಂದೂವರೆ ಇಂಚು ನೀರಿನಲ್ಲಿ ಸುಮಾರು ಹತ್ತು ಎಕರೆ ಭೂಮಿಯಲ್ಲಿ ಬೆಳೆ ಬೆಳೆಯುವುದು ಕಷ್ಟ ಸಾದ್ಯ ಆದರೆ ಪ್ರಗತಿ ಪರ ರೈತನಾದ ಆರ್.ಎ.ದಯಾನಂದ ಮೂರ್ತಿ ಅತೀ ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವುದನ್ನು ತೋರಿಸಿಕೊಟ್ಟಿದ್ದಾರೆ.
ಅವರು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದ ಚೆನ್ನಮ್ಮನಾಗತಿಹಳ್ಳಿ ಕಾವಲ್ ಪಕ್ಕದಲ್ಲಿ ಇರುವ ಸುಮಾರು ಹತ್ತು ಎಕರೆ ಭೂಮಿಯಲ್ಲಿ ವಿವಿಧ ತರೆಹವಾರೆ ಮರಗಿಡಗಳ, ಜೊತೆಗೆ ವಿವಿಧ ರೀತಿಯ ಬೆಳೆಗಳನ್ನು ಯಾವ ರೀತಿಯಲ್ಲಿ ಬೆಳೆಯಬಹುದು ಎಂಬುದು ತೋರಿಸಿಕೊಟ್ಟಿದ್ದಾರೆ
ಇಂತಹ ಅಪರೂಪದ ಗ್ರಾಮೀಣ ಪ್ರದೇಶದ ಕೃಷಿಕನ ತೋಟಕ್ಕೆ ವಿದೇಶದಿಂದ ಸಂಶೋಧನೆಯ ತಂಡ ಬರುವುದು ವಿಪರ್ಯಾಸವೇ ಸರಿ, ಇಂತಹ ರೈತ ದಯಾನಂದ ಮೂರ್ತಿ ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ ಮೂಲಕ ಅತೀ ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವುದನ್ನು ನೋಡಲು ಹೊರದೇಶದ ಜರ್ಮಿನಿಯ ವಿದ್ಯಾರ್ಥಿಗಳಾದ ಹನುಜರ್ಮುನಿ, ಮೇರಿಯಂ ಜರ್ಮುನಿ, ಮುಕುಲ್‌ವೆಸ್ಟ್ ಬೆಂಗಾಲ್, ಅಲಿನಿಯ ಕೇರಳ, ಮತ್ತು ವಿಜಯಕುಮಾರ್ ಇಂಡಿಯಾ ಇವರು ಸುಮಾರು ಹತ್ತು ದೇಶಗಳ ವಿದ್ಯಾರ್ಥಿಗಳ ತಂಡ ಪ್ರಗತಿಪರ ರೈತ ಆರ್‌ಎ.ದಯಾನಂದಮೂರ್ತಿ ತೋಟಕ್ಕೆ ಅಧ್ಯಯನ ನಡೆಸಿದ್ದಾರೆ.
ಇನ್ನೂ ಈ ಕುರಿತು ಪ್ರಗತಿಪರ ರೈತ ಆರ್.ಎ.ದಯಾನಂದ ಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ದಯಾನಂದ ಮೂರ್ತಿಯ ತಾಯಿಯಾದ ಕೆಂಚಮ್ಮ, ಸಹೋದರಿಯಾದ ಆರ್‌ಎ.ಶಿವನುಪೂರ್ಣ, ಎಸ್ ಬಾನು ಪ್ರಕಾಶ್, ಮೋಹನ್, ಚಿತ್ತಪ್ಪ ಇತರರು ಇದ್ದರು.