ಪರಶುರಾಮಪುರ ಹೋಬಳಿಯ ವಿವಿದೆಡೆಗಳಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಬಿಜೆಪಿ ಮುಖಂಡ ಎಂಎಸ್.ಜಯರಾA ಸಮಾಲೋಚನಾ ಸಭೆ
ರಾಷ್ಟç ಮತ್ತು ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ, ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಮಂಡಲ, ಬೂತ್ ಸಮಿತಿ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಬಿಜೆಪಿಗೆ ಹೆಚ್ಚು ಬೆಂಬಲಿಸುವ ಕೆಲಸ ಮಾಡಬೇಕು ಎಂದು ಚಳ್ಳಕೆರೆ ವಿಧಾನಸಭಾ ಬಿಜೆಪಿ ಮುಖಂಡ ಎಂ ಎಸ್ ಜಯರಾಂ ಹೇಳಿದರು
ಗ್ರಾಮದ ವಿವಿಧ ಜನವಸತಿ ಪ್ರದೇಶಗಳು, ಜುಂಜರಗುAಟೆ, ಪರ್ಲೆಹಳ್ಳಿ ಚಟ್ಟೇಕಂಬ ಮತ್ಸಮುದ್ರ ಗ್ರಾಮಗಳಲ್ಲಿ ಶುಕ್ರವಾರ ಚಳ್ಳಕೆರೆ ತಾಲೂಕು ಬಿಜೆಪಿ ಕಾರ್ಯಕರ್ತರು, ಪಿಆರ್ಪುರ ಹೋಬಳಿಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳೊಂದಿಗೆ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಪಕ್ಷವನ್ನು ಬಲಪಡಿಸುವ ಸಲುವಾಗಿ ಹಲವು ಸಭೆಗಳನ್ನು ನಡೆಸಿ ಮಾತನಾಡಿದರು
ಭಾರತ ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ ಕಾರ್ಯಕರ್ತರ ಕುಂದು ಕೊರತೆಗಳು ಪಕ್ಷವನ್ನು ಸಂಘಟಿಸಲು ಅಗತ್ಯ ಕಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು
ಬಿಜೆಪಿ ಮುಖಂಡ ಎಂ ಎಸ್ ಶ್ರೀನಿವಾಸ ಪ್ರಾಸ್ತಾವಿಕ ಮಾತನಾಡಿ ಈ ಬಾರಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಗೆಲ್ಲುಕೊಳ್ಳುವಲ್ಲಿ ಯವ ಸಂದೇಹವಿಲ್ಲ ರೈತರ ಪರ ಕಾಳಜಿ, ಸವ್ ಜನರ ಅಭಿವೃಧ್ದಿಗೆ ಶ್ರಮಿಸಿದ ಬಿ ಎಸ್ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಜನರಿಗೆ ನಂಬಿಕೆಯಿದೆ ಎಂದರು
ಬಿಜೆಪಿ ಕಾರ್ಯಕರ್ತ ಉಪ್ಪಾರಹಟ್ಟಿ ಶ್ರೀನಿವಾಸ ಪರಶುರಾಮಪುರ ಹೋಬಳಿಯ ಬಿಜೆಪಿ ಕಾರ್ಯಕರ್ತರು ಪ್ರತೀ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಹೆಚ್ಚು ಮತ ಗಳಿಸುವಲ್ಲಿ ನೆರವಾಗಿದ್ದಾರೆ ಈ ಬಾರಿಯೂ ಪಕ್ಷ ಗುರ್ತಿಸುವ ವ್ಯಕ್ತಿಗೆ ಬೆಂಬಲಿಸಬೆಕು ಎಂದರು
ಇದೇ ವೇಳೆ ಕೆಲ ಕಡೆಗಳಲ್ಲಿ ಕಾರ್ಯಕರ್ತರಿಗೆ ಶ್ರೀರಾಮನ ಭಾವಚಿತ್ರ ಮತ್ತು ಕೇಸರಿ ಟವಲ್ ನೀಡಿ ಯುವಕರನ್ನು ಪಕ್ಷದತ್ತ ಸೆಳೆದರು
ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಂ ಎಸ್ ಶ್ರೀನಿವಾಸ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗ್ಯಮ್ಮ, ಉಪ್ಪಾರಹಟ್ಟಿ ಕೆ ಶ್ರೀನಿವಾಸ, ಚಿತ್ರಯ್ಯನಹಟ್ಟಿ ನಾಗರಾಜು, ಹನುಮಂತರಾಯ, ಗೌಡ್ರುನಾಗರಾಜು, ಭಗವಂತಪ್ಪ, ಸಿದ್ದೇಶಣ್ಣ, ತಿಪ್ಪೆಸ್ವಾಮಿ, ನಾಗರಾಜು, ವಿಶುಕುಮಾರ, ಇಂದ್ರಕುಮಾರ, ಲೋಕೇಶ, ಹೊರಕೇರಿ ನಾಗರಾಜು, ಪಿಆರ್ಪುರ ಹೋಬಳಿಯ ಬಿಜೆಪಿ ಕಾರ್ಯಕರ್ತರು ಇದ್ದರು
ಪೋಟೋ (ಪಿಆರ್ಪುರ ಬಿಜೆಪಿ 14)
ಪರಶುರಾಮಪುರ ಹೋಬಳಿ ಕೇಂದ್ರದ ವಿವಿಧ ಜನವಸತಿ ಪ್ರದೇಶಗಳೂ ಸೇರಿದಂತೆ ಕೆಲ ಅಂಗಡಿ ಮುಗ್ಗಟ್ಟುಗಳಿಗೆ ಶುಕ್ರವಾರ ಬಿಜೆಪಿ ಕಾರ್ಯಕರ್ತರೊಂದಿಗೆ ಬಿಜೆಪಿ ಮುಖಂಡ ಎಂ ಎಸ್ ಜಯರಾಂ ಸಮಾಲೋಚನಾ ಸಭೆ ನಡೆಸಿ ಕಾರ್ಯಕರ್ತರಿಗೆ ಬಿಜೆಪಿ ಪಕ್ಷವನ್ನು ಬಲಪಡಿಸುವ ಕುರಿತು ತಿಳಿವಳಿಕೆ ನೀಡಿದರು ಬಿಜೆಪಿ ಮುಖಂಡರಾದ ಎಂ ಎಸ್ ಶ್ರೀನಿವಾಸ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗ್ಯಮ್ಮ, ಉಪ್ಪಾರಹಟ್ಟಿ ಕೆ ಶ್ರೀನಿವಾಸ, ಚಿತ್ರಯ್ಯನಹಟ್ಟಿ ನಾಗರಾಜು, ಹನುಮಂತರಾಯ, ಗೌಡ್ರುನಾಗರಾಜು, ಭಗವಂತಪ್ಪ, ಸಿದ್ದೇಶಣ್ಣ, ತಿಪ್ಪೆಸ್ವಾಮಿ, ನಾಗರಾಜು, ವಿಶುಕುಮಾರ, ಇಂದ್ರಕುಮಾರ, ಲೋಕೇಶ, ಹೊರಕೇರಿ ನಾಗರಾಜು, ಪಿಆರ್ಪುರ ಹೋಬಳಿಯ ಬಿಜೆಪಿ ಕಾರ್ಯಕರ್ತರು ಇದ್ದರು