ಅಂದು ಸ್ವಾತಂತ್ರಕ್ಕಾಗಿ ಇಂದು ಸಂವಿಧಾನ ಉಳಿವಿಗಾಗಿ
ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲು ಬನ್ನಿ : ಶಾಸಕ ಟಿ.ರಘುಮೂರ್ತಿ ಕರೆ
ಚಳ್ಳಕೆರೆ : ಭಾರತ ದೇಶದ ಐಕ್ಯಾತಾ ಉದ್ದೆಶದಿಂದ ಸಂಸದ ರಾಹುಲ್ ಗಾಂಧಿಯವರು ಕೈಗೊಂಡ ಪಾದಯಾತ್ರೆಗೆ ಈಡೀ ದೇಶದಲ್ಲಿ ಉತ್ತಮ ಸ್ಪಂಧನೆ ಸಿಕ್ಕಿದೆ, ಕಾಂಗ್ರೇಸ್ ಕೇವಲ ಒಂದು ಪಕ್ಷವಲ್ಲ, ಕಾಂಗ್ರೇಸ್ ಅನ್ನುವುದೇ ಒಂದು ಸಿದ್ಧಾಂತ ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಸಮಾನತೆ ಮತ್ತು ಸ್ವಾಭಿಮಾನದಿಂದ ಮುಕ್ತವಾಗಿ ಜೀವಿವುದು ಈ ನೆಲದ ನೈಜ ಸ್ವಾತಂತ್ರö್ಯ, ವಿಶ್ವದಲ್ಲೆ ಅತ್ಯುನ್ನತ ಸಂವಿಧಾನ ಭಾರತದ್ದು, ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ಪತ್ರಿಕೆಯೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಮನಸ್ಸುಗಳನ್ನು ಒಡೆಯಲಾಗುತ್ತಿದೆ. ಸೌಹಾರ್ದದ ಭಾವನೆ ಹೊರಟುಹೋಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅಪಾಯದಲ್ಲಿದೆ. ಭಾರತದ ಸಂವಿಧಾನಕ್ಕೆ ಬೆಲೆಯನ್ನೇ ನೀಡಲಾಗುತ್ತಿಲ್ಲ. ನಾಗರೀಕತೆಯ ಅಡಿಪಾಯದ ಮೇಲೆ ದಾಳಿ ನಡೆಯುತ್ತಿದೆ. ಇಡೀ ದೇಶ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ.
ದೇಶದಲ್ಲಿ ಈಗ ನಿರುದ್ಯೋಗ ಹೆಚ್ಚಾಗುತ್ತಿದೆ. ಬಡತನವೂ ಏರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಬಡಜನರ ನೋವನ್ನು ಕೇಳುವ ಕಿವಿಗಳು ಇಲ್ಲ. ಅವರ ಕಣ್ಣೀರು ಒರೆಸುವವರು ಕಾಣುತ್ತಿಲ್ಲ. ಬದುಕು ದುಸ್ತರವಾಗಿದೆ.ಇಂತಹ ಸಂದರ್ಭದಲ್ಲಿ ಒಡೆದ ಮನಸ್ಸುಗಳನ್ನು ಒಟ್ಟುಗೂಡಿಸುವ ದೃಷ್ಟಿಯಿಂದ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಈ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಎಲ್ಲ ಜಾತಿ, ಧರ್ಮ, ಪಂಥ, ಭಾಷೆಯ ಜನರನ್ನೂ ಭೇಟಿ ಮಾಡುತ್ತಿದ್ದಾರೆ. ಅವರ ನೋವುಗಳಿಗೆ ಸ್ಪಂದಿಸುತ್ತಿದ್ದಾರೆ. ದೇಶ ಸಂಕಟದಲ್ಲಿರುವ ಈ ಸಮಯದಲ್ಲಿ ನಾವೆಲ್ಲರೂ ಅವರ ಜೊತೆಗೆ ಹೆಜ್ಜೆ ಹಾಕಬೇಕಿದೆ. ಹೊಸ ನಾಡೊಂದನ್ನು ಕಟ್ಟಬೇಕಿದೆ. ಈ ಮಹತ್ತರ ಕಾರ್ಯದಲ್ಲಿ ತಾವೆಲ್ಲರೂ ಭಾಗಿಯಾಗಬೇಕು. ಭಾರತದ ಭವಿಷ್ಯದ ನಾಯಕ ರಾಹುಲ್ ಗಾಂಧಿ ಅವರ ಜೊತೆಗೆ ಹೆಜ್ಜೆ ಹಾಕಬೇಕು ಎಂದು ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದ್ದಾರೆ.
ಬಾಕ್ಸ್ ಮಾಡಿ :
ಅ.11ರ ಮಂಗಳವಾರ 12ನೇ ದಿನದ ಪಾದಯಾತ್ರೆ, ಬೆಳಗ್ಗೆ 6.30 ಗಂಟೆಗೆ ಹರ್ತಿಕೋಟೆ ಗ್ರಾಮದಿಂದ ಪಾದಯಾತ್ರೆ ಆರಂಭಗೊAಡು ಬೆಳಗ್ಗೆ 11 ಗಂಟೆಗೆ ಹೋಟೆಲ್ ಚೇತನ್ ಹತ್ತಿರ, ಸಾಣಿಕೆರೆಯಲ್ಲಿ ಊಟ ಮತ್ತು ವಿಶ್ರಾಂತಿ ನಂತರ ಸಿದ್ದಾಪುರದಲ್ಲಿ ಸ್ವಾಗತ, ಸಂಜೆ 4 ಗಂಟೆಗೆ ಸಾಣಿಕೆರೆಯಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಎಸ್.ಆರ್.ಎಸ್‌ಶಾಲೆ ಆವರಣ ಚಳ್ಳಕೆರೆ ಟೌನ್ ಇಲ್ಲಿ ತಂಗುವುದು.
ಅ.12ರ ಬುಧವಾರ 13 ನೇ ದಿನದ ಪಾದಯಾತ್ರೆ, ಬೆಳಗ್ಗೆ 6.30 ಗಂಟೆಗೆ ಎಸ್.ಆರ್.ಎಸ್ ಶಾಲೆ, ಚಳ್ಳಕೆರೆ ಟೌನ್‌ನಿಂದ ನೆಹರು ವೃತ್ತದ ಮೂಲಕ ಪಾದಯಾತ್ರೆ ಆರಂಭಗೊAಡು ಬೆಳಗ್ಗೆ 11 ಗಂಟೆಗೆ ಗಿರಿಯಮ್ಮನಹಳ್ಳಿ ಗೇಟ್ ಇಲ್ಲಿ ಊಟ ಮತ್ತು ವಿಶ್ರಾಂತಿ ಸಂಜೆ 4 ಗಂಟೆಗೆ ಗಿರಿಯಮ್ಮನಹಳ್ಳಿ ಗೇಟ್‌ನಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಹಿರೇಹಳ್ಳಿ ಟೋಲ್ ಪ್ಲಾಜಾ, ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಶಾಲೆ, ಹಿರೇಹಳ್ಳಿ, ಮೊಳಕಾಲ್ಮೂರು ಕ್ಷೇತ್ರ ಇಲ್ಲಿ ತಂಗುವುದು.
ಅ.13ರ ಗುರುವಾರ 14 ನೇ ದಿನದ ಪಾದಯಾತ್ರೆ, ಬೆಳಗ್ಗೆ 6.30 ಗಂಟೆಗೆ ಬಿ.ಜಿ.ಕೆರೆ ಅಂಡರ್‌ಪಾಸ್, ಬೊಮ್ಮಗೊಂಡನಕೆರೆ ಇಲ್ಲಿಂದ ಪಾದಯಾತ್ರೆ ಆರಂಭಗೊAಡು ಬೆಳಗ್ಗೆ 11ಗಂಟೆ ಕೋನಸಾಗರ ಗ್ರಾಮದ ಹತ್ತಿರ ಊಟ ಮತ್ತು ವಿಶ್ರಾಂತಿ ಸಂಜೆ 4 ಗಂಟೆಗೆ ಕೋನಸಾಗರದಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಮೊಳಕಾಲ್ಮುರು ಕಾಂಗ್ರೆಸ್ ಕಛೇರಿಯವರೆಗೆ ನಂತರ ರಾಂಪುರ ಹತ್ತಿರ ತಂಗುವುದು.
ಅ.14ರ ಶುಕ್ರವಾರ 15 ನೇ ದಿನದ ಪಾದಯಾತ್ರೆ, ಬೆಳಗ್ಗೆ 6.30 ಗಂಟೆಗೆ ರಾಂಪುರದಿAದ ಪಾದಯಾತ್ರೆ ಆರಂಭಗೊAಡು ಬೆಳಗ್ಗೆ 11 ಗಂಟೆ ಕುಂಟುಮಾರಮ್ಮ ದೇವಸ್ಥಾನ, ಟೋಲ್ ಹತ್ತಿರ, ಆಂದ್ರ ಪ್ರದೇಶ ದಲ್ಲಿ ಊಟ ಮತ್ತು ವಿಶ್ರಾಂತಿ ಸಂಜೆ 4 ಗಂಟೆಗೆ ಕುಂಟುಮಾರಮ್ಮ ದೇವಸ್ಥಾನದಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಹೆಚ್.ಪಿ ಪೆಟ್ರೋಲ್ ಪಂಪ್ ಹತ್ತಿರ, ಓಬಳಾಪುರಂ ಗ್ರಾಮ, ಹಲಕುಂದಿ ಮಠದ ಹತ್ತಿರ, ಬಳ್ಳಾರಿ ಜಿಲ್ಲೆಯಲ್ಲಿ ತಂಗುವುದು.
ಪೋಟೋ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ
ಜೋಡೋ ಯಾತ್ರೆಯ ಸ್ಥಳ ವೀಕ್ಷಣೆ