ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ಚಳ್ಳಕೆರೆ ನಗರಕ್ಕೆ ಕ್ಷಣ ಗಣನೆ
ಚಳ್ಳಕೆರೆ : ಭಾರತ್ ಜೋಡೋ ಪಾದಯಾತ್ರೆ ಚಳ್ಳಕೆರೆ ಆಯಿಲ್ ಸಿಟಿಗೆ ಕ್ಷಣ ಗಣನೆ,
ಕೋಟೆ ನಾಡಿಗೆ ಆಗಮಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಸಲುವಾಗಿ ಚಳ್ಳಕೆರೆ ನಗರದಲ್ಲಿ ಸಕಲ ಸಿದ್ದತೆಗಳು ಭರ್ಜರಿಯಾಗಿ ನಡೆದಿವೆ.
ಚಳ್ಳಕೆರೆ ನಗರದ ತುಂಬೆಲ್ಲಾ ಪ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿವೆ ಇನ್ನೂ ಚಳ್ಳಕೆರೆ ಗಡಿಯಿಂದ ಮುಕ್ತಯಾದವರೆಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಸಾಗುವ ಪಾದಯಾತ್ರೆಗೆ ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಇನ್ನೂ ಸುಮಾರು ಮೂವತ್ತು ಕಿಲೋ ಮೀಟರ್ ಉದ್ದದವೆರೆಗೂ ಪ್ಲೆಕ್ಸ್ ಬಂಟಿAಗ್ಸ್ ಕಟೌಟ್‌ಗಳ ಮೂಲಕ ರಾಹುಲ್ ಗಾಂಧಿಜೀ ಆಗಮನಕ್ಕೆ ಕ್ಷೇತ್ರದ ಜನರು ಕಾತುರಾಗಿದ್ದಾರೆ.
ಈಡೀ ನಗರ ಮದುವಣಗಿತ್ತಿಯಂತೆ ಅಂಲಕೃತಗೊAಡಿದೆ. ದಾರಿಯುದ್ದಕ್ಕೂ ಕಾಂಗ್ರೇಸ್ ಪಕ್ಷದ ನೇತಾರ ಪ್ಲಕ್ಸ್ಗಳು ಹಾಗೂ ಕಾಂಗ್ರೇಸ್ ಬಾವುಟಗಳ ಚಪ್ಪರ ಇಡೀ ನಗರವನ್ನು ಅಂಧವಾಗಿಸಿದೆ.
ಇದಕ್ಕೆ ಈಡೀ ಕಾಂಗ್ರೇಸ್ ಪಕ್ಷದ ಮುಖಂಡರು ಕಳೆದ ಹದಿನೈದು ದಿನಗಳಿಂದ ಭಾರತ್ ಜೋಡೋ ಆಗಮನಕ್ಕೆ ಶ್ರಮಿಸಿದ್ದಾರೆ. ಅ.11 ರಂದು ನಗರದ ಹೊರ ವಲಯದಲ್ಲಿ ಬೀಡು ಬಿಟ್ಟು, ಅ.12 ರಂದು ನಗರದ ನೆಹರು ವೃತ್ತದ ಮೂಲಕ ಹಾದು ಹೋಗುವ ರಾಹುಲ್ ಗಾಂಧಿ ತಂಡಕ್ಕೆ ಕ್ಷೇತ್ರದ ಶಾಸಕರಿಂದ ಅದ್ದೂರಿ ಸ್ವಾಗತದ ಮೂಲಕ ಸಕಲ ಸಿದ್ದತೆಗಳು ನಡೆದಿವೆ.
ಇನ್ನೂ ಕ್ಷೇತ್ರದ ಜನರಿಗೆ ಕುದ್ದಾಗಿ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಭಾರತ್ ಜೋಡೋ ಪಾದಯಾತ್ರೆಗೆ ಬನ್ನಿ ಭಾಗವಹಿಸಿ ಎಂದು ಕರೆ ನೀಡಿದ್ದಾರೆ.