ವಾಲ್ಮೀಕಿ ಜಯಂತಿಗೆ ಮಿಸಲಾತಿಯ ಸಿಹಿಸುದ್ದಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ; ರಾಮಾಯಣ ಕೇವಲ ಧಾರ್ಮಿಕ ಗ್ರಂಥ ಮಾತ್ರವಷ್ಟೇ ಅಲ್ಲದೇ ಕಾವ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ ಜೀವನದ ಉದ್ದಕ್ಕೂ ಉತ್ತಮ ಮಾರ್ಗದರ್ಶನ ತೋರುವ ಮೂಲಕ ಸಾರ್ಥಕ ಜೀವನ ನಡೆಸಿದ ದಿಮಂತ ಯುಗ ಪುರುಷ ಮಹರ್ಷಿ ವಾಲ್ಮೀಕಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ವಾಲ್ಮೀಕಿ ವೃತ್ತದಲ್ಲಿ ಪುತ್ಥಳಿಗೆ ಹೂವಿನ ಹಾರ ಹಾಕುವುದರ ಮೂಲಕ ತಾಲೂಕು ಕಚೇರಿಯಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಸರಳ ವಾಲ್ಮೀಕಿ ಜಯಂತೋತ್ಸವ ಕಾರ್ಯಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತೋತ್ಸವ ಆಚರಣೆಗೆ ಅರ್ಥ ಬರುತ್ತದೆ. ಮಹಾನಿಯರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಯುವ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಹನೀಯರ ಜಯಂತಿಗಳು ಅರ್ಥಪೂರ್ಣವಾಗಿವೆ ಎಂದರು.

ಪ್ರಾಸ್ತವಿಕವಾಗಿ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ವಾಲ್ಮೀಕಿ ಜಯಂತಿಯನ್ನು ಕೇವಲ ಒಂದು ಜಾತಿಗೆ ಸೀಮಿತವಾಗದೆ ಎಲ್ಲಾ ಸಮುದಾಯದವರು ಸೇರಿ ಆಚರಣೆ ಮಾಡಿದಾಗ ಜಯಂತಿಗೆ ಅರ್ಥ ಬರುತ್ತದೆ, ಈಡಿ ಜಗತ್ತಿಗೆ ರಾಮಾಯಣದಂತಹ ಮಹಾ ಕಾವ್ಯವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರ ಇಡೀ ಮನುಕುಲದ ಆಸ್ತಿ ಎಂದು ಎಂದು ಕಿವಿಮಾತು ಹೇಳಿದರು.

ಬಿಜೆಪಿ ಮುಖಂಡ ಜಯಪಾಲಯ್ಯ ಮಾತನಾಡಿ, ಮಾನವನ ಸಮಾಜ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಸಮಾಜದ ಒಳಿತಿಗೆ ಮಹನೀಯರು ನೀಡಿರುವ ಮಾರ್ಗಗಳ ಬಗ್ಗೆ ಚಿಂತನೆ ಮಾಡಿ, ಸಮಾಜದ ಪರಿವರ್ತನೆಯ ನಿಟ್ಟಿನಲ್ಲಿ ಕಾರ್ಯಕ್ರಮಗಳು ಸಾರ್ಥಕವಾಗಬೇಕು. ಮಹಾಕಾವ್ಯ ರಾಮಾಣ ಇಂದಿಗೂ ಪ್ರಚಲಿತವಾಗಿರುವಂತೆ ಬರೆದು ವಾಲ್ಮೀಕಿಯವರ ಸಾಧನೆ ಮಹತ್ವದಾಗಿದೆ. ಆದ್ದರಿಂದಲೇ ಇವರನ್ನು ನೆನಪಿಸುವ ದೃಷ್ಟಿಯಿಂದ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ಮುಖAಡ ಕೆಟಿ ಕುಮಾರಸ್ವಾಮಿ ಮಾತನಾಡಿ, ವಾಲ್ಮೀಕಿ ಮಹರ್ಷಿ ಜಯಂತಿ ಈ ಸುಸಂಧರ್ಭದಲ್ಲಿ ರಾಜ್ಯ ಸರಕಾರ ಮಿಸಲಾತಿ ಹೆಚ್ಚಳ ಮಾಡಿರುವುದು ನಮಗೆಲ್ಲ ಸಂತಸದಾಯಕ ಇಂದು ವಾಲ್ಮೀಕಿ ಗುರುಪೀಠದ ಸ್ವಾಮೀಜಿಯ ಪರಿಶ್ರಮ ಹಾಗೂ ಮಠದ ಸ್ಥಾಪನೆಗೆ ಕಾರಣಕರ್ತರಾದ ದಿವಂಗತ ಮಾಜಿ ಸಚಿವ ತಿಪ್ಪೆಸ್ವಾಮಿಯವರನ್ನು ಸ್ಮರಣೆ ಮಾಡುವ ಅನಿವಾರ್ಯವಿದೆ ಎಂದರು.

ಈ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ಕೆ.ವೀರಭದ್ರಯ್ಯ, ರಮೇಶ್, ಪ್ರಕಾಶ್, ರಾಘವೇಂದ್ರ, ವೆಂಕಟೇಶ್, ಸುಮಾ, ಸುಜಾತಾ, ಜೈ ತುನ್‌ಬಿ, ಮಾಜಿ ಜಿಪಂ ಸದಸ್ಯ ಜಯಪಾಲಯ್ಯ, ಕೆ.ಟಿ.ಕುಮಾರಸ್ವಾಮಿ, ಜಿಪಂ.ಮಾಜಿ ಅಧ್ಯಕ್ಷ ರವಿಕುಮಾರ್, ಸದಸ್ಯ ಪ್ರಕಾಶ್‌ಮೂರ್ತಿ, ಮುಖಂಡ ಕೃಷ್ಣಮೂರ್ತಿ, ಸುರೇಶ್, ಪಾಲಯ್ಯ, ಸುರಕ್ಷಾ ಪಾಲಿಕ್ಲಿನಿಕ್ ಮಾಲೀಕ ಪರೀದ್ ಖಾನ್, ತಾಪಂ ಸಹಯಾಕ ನಿದೇರ್ಶಕ ಸಂತೋಷ್, ಬಿಇಓ ಸುರೇಶ್, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ರೇಷ್ಮೆ ಇಲಾಕೆ ಕೆಂಚಾಜಿರಾವೋ, ವಲಯ ಅರಣ್ಯಾಧಿಕಾರಿ ಬಾಬು, ಪಶು ಇಲಾಕೆ ಡಾ.ರೇವಣ್ಣ, ಆರೋಗ್ಯ ಸಹಯಾಕ ತಿಪ್ಪೆಸ್ವಾಮಿ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಕೆಯ ದಿವಾಕರ್, ದಯಾನಂದ್, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಮಹಿಳಾ ಸದಸ್ಯರು, ಮುಖಂಡರು ಸೇರಿದಂತೆ ಇತರರಿದ್ದರು

ಬಾಕ್ಸ್ ಮಾಡಿ ;

ಕಳೆದ 240 ದಿನಗಳ ವಾಲ್ಮೀಕಿ ಗುರು ಪೀಠದ ಶ್ರಿ ಪ್ರಸನ್ನಂದ ಪುರಿ ಸ್ವಾಮೀಜಿಯ ಹೋರಾಟದ ಫಲವಾಗಿ ಇಂದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಟಕ್ಕೆ ಮೀಸಲಾತಿ ಹೆಚ್ಚಳಕ್ಕೆ ಶಿಪರಾಸ್ಸು ಮಾಡಿರುವುದು ಸಂತಸದಾಯಕ, ಈ ಸಂಧರ್ಭದಲ್ಲಿ ಸರ್ವ ಪಕ್ಷದ ಶಾಸಕರುಗಳು ಹಾಗೂ ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾಗಳು ಅರ್ಪಿಸುತ್ತೆನೆ, ನಮ್ಮ ಚಳ್ಳಕೆರೆ ಕ್ಷೇತ್ರದ ದಿವಂಗತ ಮಾಜಿ ಸಚಿವ ತಿಪ್ಪೆಸ್ವಾಮಿಯ ಅಂದು ಸತತ ಐದು ವರ್ಷಗಳ ಕಾಲ ಗುರುಪೀಠ ಸ್ಥಾಪಿಸಲು ಶ್ರಮಿಸಿದ ಫಲ ಇಂದು ಗುರು ಪೀಠದ ಸ್ವಾಮೀಜಿಯ ಮೂಲಕ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿರುವುದು ನಮ್ಮ ಹೆಮ್ಮೆ.- — ಶಾಸಕ ಟಿ.ರಘುಮೂರ್ತಿ

1.ಫೋಟೊ, ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಸಮುದಾಯ ಸೇರಿದಂತೆ ಇತರರು ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಪ್ರತಿಮೆಗೆ ಶಾಸಕ ಟಿ.ರಘುಮೂರ್ತಿ ಮಾಲಾರ್ಪಣೆ ನೆರವೇರಿಸಿದರು.

2.ಪೋಟೋ ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ರಾಷ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.

Namma Challakere Local News
error: Content is protected !!