ವರುಣರಾಯನ ಕೃಪೆ ಬಯಲು ಸೀಮೆಗೆ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ವರುಣರಾಯನ ಕೃಪೆಯಿಂದ ಚಳ್ಳಕೆರೆ ಬಯಲು ಸೀಮೆಯ ಹಣೆಪಟ್ಟಿ ಕಳಚಿದೆ, ಈ ಭಾಗದ ರೈತನ ಮೊಗದಲ್ಲಿ ಮಂದಹಾಸದ ನಗುವಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕಿನ ಪರುಶುರಾಂಪುರ ಹೋಬಳಿಯ ಬೊಮ್ಮನಕುಂಟೆ ಗ್ರಾಮದ ಕೆರೆ ಕೋಡಿ ಬಿದ್ದಿರುವ ನಿಮಿತ್ತ ಕೆರೆಗೆ ಬಾಗಿನ ಆರ್ಪಿಸಿ, ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ನೆರೆದಿದ್ದ ಜನರೊಂದಿಗೆ ಸಂತಸ ಹಂಚಿಕೊAಡರು.
ಕಳೆದ ಹಲವು ದಿನಗಳಿಂದ ನೀರಿಗಾಗಿ ಪರಿತಪ್ಪಿಸುವ ಕಾಲ ದೂರವಾಗಿ ಈಗ ಎಲ್ಲಿ ನೋಡಿದರೂ ನೀರಿನ ಚಿಲುಮೆಗಳು ಕಾಣುತ್ತಿವೆ, ಸುಮಾರು ಕೆರೆಗಳು ತುಂಬಿ ಕೋಡಿ ಬಿದ್ದಿವೆ ಇನ್ನೂ ಹಳ್ಳ ಕೊಳ್ಳಗಳು ಭರ್ತಿಯಾಗಿ ರೈತರ ಕೃಷಿ ಜಮೀನುಗಳು ಹಸಿರಾಗಿವೆ ಈಗೇ ಬಯಲು ಸೀಮೆ ಹಸಿರುಕರಣಕ್ಕೆ ಮಳೆರಾಯನ ಆರ್ಶಿವಾದ ಅಗತ್ಯ ಎಂದರು,
ಈದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ರೈತರು ಇತರರು ಪಾಲ್ಗೊಂಡಿದ್ದರು.
ಪೋಟೋ ಚಳ್ಳಕೆರೆ ತಾಲೂಕಿನ ಬೊಮ್ಮನಕುಂಟೆ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಟಿ.ರಘುಮೂರ್ತಿ