ಅಂಬೇಡ್ಕರ್ ದೀಕ್ಷಾ ಭೂಮಿಗೆ ಚಳ್ಳಕೆರೆ ದಲಿತ ಮುಖಂಡರು ಬಾಗಿ
ಚಳ್ಳಕೆರೆ : ಅಂಬೇಡ್ಕರ್ ಕೇವಲ ನಿಮ್ನ ವರ್ಗಗಳಿಗೆ ಸಂವಿಧಾನ ರೂಪಿಸದೆ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಅನ್ವಯವಾಗುವ ರೀತಿಯಲ್ಲಿ ಸಂವಿಧಾನ ಬರೆದಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ.ವಿಜಯ್‌ಕುಮಾರ್ ಹೇಳಿದ್ದಾರೆ.
ಅವರು ನಗರದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕಿನಿಂದ ದೀಕ್ಷಾ ಭೂಮಿಗೆ ತೆರಳುತ್ತಿರುವ ದಲಿತ ಮುಖಂಡರನ್ನು ಬಿಲ್ಕೊಟ್ಟು ಮಾತನಾಡಿದರು.
ಮಹಾರಾಷ್ಟ್ರದ ನಾಗಪುರ ದಿಕ್ಷಾ ಭೂಮಿಯಲ್ಲಿ ನಡೆಯಲಿರುವ ಧಮ್ಮ ಪ್ರವರ್ತನಾ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಆಯೋಜನೆ ಮಾಡಿದ ಆಹ್ವಾನದಂತೆ ಮುಖಂಡರನ್ನು ಬಿಲ್ಕೊಟ್ಟರು. ದೇಶದಲ್ಲಿ ಎಲ್ಲಾ ವರ್ಗದ ಜನರಿಗೂ ಸ್ವಾತಂತ್ರ‍್ಯ ಸರ್ವರಿಗೂ ಸಮಾನತೆ ದೊರೆಯಬೇಕಿದೆ, ಇದನ್ನು ಈಡೇರಿಸಲು ಸಂವಿಧಾನದ, ಆಶಯದಂತೆ ಆಡಳಿತ ಜಾರಿ ಆಗಬೇಕು ಎಂದು ಕನಸು ಕಂಡ ಅಂಬೇಡ್ಕರ್ ಅವರ ಬದುಕಿನ ಆದರ್ಶ ಸಮಾಜದಲ್ಲಿ ಉಳಿಯಬೇಕಿದೆ ಎಂದರು.

ನಗರಸಭಾ ಮಾಜಿ ಸದಸ್ಯ ಎಂ.ಶಿವಮೂರ್ತಿ ಮಾತನಾಡಿ, ಅಂಬೇಡ್ಕರ್ ಬದುಕಿನ ಹೋರಾಟ ಮತ್ತು
ನಿರ್ಣಯಗಳ ಮಾರ್ಗವನ್ನು ತಿಳಿದುಕೊಳ್ಳಬೇಕು ಎಂದು
ಹೇಳಿದರು.

ಈದೇ ಸಂಧರ್ಭದಲ್ಲಿ ಎಂ.ಶಿವಮೂರ್ತಿ, ಟಿ.ವಿಜಯಕುಮಾರ್, ಭೀಮನಕೆರೆ ಶಿವಮೂರ್ತಿ, ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆ ಸಂಚಾಲಕ ‘ಭೀಮನಕೆರೆ ಶಿವಮೂರ್ತಿ, ಎನ್.ಪ್ರಕಾಶ್, ಪಿ.ರೇಣುಕಮ್ಮ, ಎಲ್.ತಿಮ್ಮಕ್ಕ ಯತ್ತಿನಹಟ್ಟಿ ಓಬಳೇಶ, ಕೆ.ಬಿ.ನಾಗರಾಜ, ಎಂ.ಮಲ್ಲಿಕಾರ್ಜುನ ನಾಗಪುರಕ್ಕೆ ತೆರಳಿದರು.
ಪೋಟೋ ಚಳ್ಳಕೆರೆ ನಗರದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕಿನಿಂದ ದೀಕ್ಷಾ ಭೂಮಿಗೆ ತೆರಳುತ್ತಿರುವ ದಲಿತ ಮುಖಂಡರು.

Namma Challakere Local News
error: Content is protected !!