ನಂಬಿಕೆ ಇಟ್ಟ ಜನರ ಆಶಾಭಾವನೆಗೆ ಅಧಿವೇಶನದಲ್ಲಿ ಶಾಸಕ ಟಿ.ರಘುಮೂರ್ತಿ ಸಮಸ್ಯೆಗಳ ಸುರಿಮಳೆ
ಚಳ್ಳಕೆರೆ : ಅಧಿವೇಶನ ಪ್ರಾರಂಭವಾದಗಿನಿAದ ದಿನಕ್ಕೊಂದು ಸಮಸ್ಯೆಗಳನ್ನು ಅಧಿವೇಶನದ ಕಲಾಪದಲ್ಲಿ ಪ್ರಸ್ತಾಪ ಮಾಡುವ ಮೂಲಕ ಶಾಸಕ ಟಿ.ರಘುಮೂರ್ತಿ ಬಯಲು ಸೀಮೆಯ ಜನರ ಜೀವನಾಡಿಯ ಜನನಾಯಕರಾಗಿದ್ದಾರೆ.


ಹೌದು ನಿಜಕ್ಕೂ ಸಂತಸದಾಯಕ ವಿಧಾನಸಭಾ ಅಧಿವೇಶನದ ಕಲಾಪದಲ್ಲಿ ಪಾಲ್ಗೊಂಡು ಚಿತ್ರದುರ್ಗ ಜಿಲ್ಲೆಯ ಜೀವನಾಡಿ ವೇದಾವತಿ ನದಿಯು ತುಂಬಿ ಹರಿಯುತ್ತಿರೋ ಪರಿಣಾಮವಾಗಿ, ಚಳ್ಳಕೆರೆಯ 32ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದಿವೆ, ಜೊತೆಯಲ್ಲಿ ಭರ್ತಿಯಾಗಿ ಹರಿಯುತ್ತಿರೋ ನದಿಯಿಂದ ಕೆಲವು ಗ್ರಾಮಗಳು ಮುಳುಗಡೆಯಾಗಿ ಮನೆಗಳನ್ನು ಕಳೆದುಕೊಂಡರೆ, ಮತ್ತಷ್ಟು ಗ್ರಾಮಗಳು ರಸ್ತೆ ಸಂಪರ್ಕ ಕಡಿತಗೊಂಡು ಜಮೀನುಗಳು ಜಲಾವೃತವಾಗಿವೆ, ಇನ್ನು ರೈತರು ಬೆಳೆದಿರುವ ಈರುಳ್ಳಿ ಬೆಳೆ ಬಹುಪಾಲು ನಷ್ಟವಾಗಿದೆ,

ಅತಿವೃಷ್ಟಿಯಿಂದ ಸುಮಾರು 200ಕೋಟಿಗೂ ಹೆಚ್ಚು ನಷ್ಟವಾಗಿದ್ದು, 324 ಮನೆಗಳು ಬಿದ್ದಿವೆ, ಈಗೇ ಸರ್ಕಾರ ಕೂಡಲೇ ನೆರವು ನೀಡಬೇಕೆಂದು ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿರುವುದು ಬಯಲು ಸೀಮೆಯ ಜನರ ಮನಗೆದ್ದ ಶಾಸಕನಾಗಿದ್ದಾರೆ.
ಇನ್ನೂ ಶಾಸಕರು ಅಧಿವೇಶನದಲ್ಲಿ ಸಮಸ್ಯೆಗಳ ಸುರಿಮಳೆ ಸುರಿಸುತ್ತಿದಂತೆ ಕ್ಷೇತ್ರದ ಜನರ ಮನಸ್ಸಲ್ಲಿ ಆಶಾಭಾವನೆ ಮೂಡಿದೆ.

About The Author

Namma Challakere Local News
error: Content is protected !!