ಅಜ್ಜನಗುಡಿಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸ್ಥಳ ಪರೀಶಿಲನೆ ನಡೆಸಿದ ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ನಗರದ ಜೀವನಾಡಿಯಾದ, ಈಡೀ ನಗರಕ್ಕೆ ಜೀವ ಜಲ ನೀಡುವ ಪುರತಾನ ಕಾಲದ ಅಜ್ಜನ ಗುಡಿ ಕೆರೆ ಸದ್ದಿಲ್ಲದೆ ಕೊಡಿ ಬಿದ್ದ ಹಿನ್ನೆಲೆಯಲ್ಲಿ ತಾಲೂಕಿನ ತಹಶೀಲ್ದಾರ್ ಎನ್.ರಘುಮೂರ್ತಿ ಬೇಟಿ ನೀಡಿ ಕೆರೆಯನ್ನು ವಿಕ್ಷಣೆ ಮಾಡಿದ್ದಾರೆ.
ಇನ್ನೂ ಪುರಾತನ ಕಾಲದ ಕೆರೆಯ ಮುನ್ಸೂಚನೆ ಮೂಲಕ ಕೆರೆ ಸುತ್ತಲು ಪರೀವೀಕ್ಷಣೆ ನಡೆಸಿ ತದ ನಂತರ ಕೆಲ ಕಾಲ ಮುಖಂಡರೊಡನೆ ಚರ್ಚೆ ನಡೆಸಿದರು.
ಇನ್ನೂ ಸ್ಥಳದಲ್ಲಿ ನಗರಸಭೆ ಸದಸ್ಯರಾದ ಬಿಟಿ.ರಮೇಶ್ ಗೌಡ, ಮಲ್ಲಿಕಾರ್ಜುನ, ಆರ್.ಪ್ರಸನ್ನ ಕುಮಾರ್, ಆಮ್ ಆದ್ಮಿ ಪಕ್ಷದ ತಾಲೂಕ ಅಧ್ಯಕ್ಷ ಪಾಪಣ್ಣ, ರಾಜಸ್ವ ನಿರೀಕ್ಷಕ ಲಿಂಗೇಗೌಡ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್, ಉಮೇಶ್ ರೊಂದಿಗೆ ಪರಿಸ್ಥಿತಿಯ ಬಗ್ಗೆ ಅವಲೋಕಿಸಿದರು.