ಗೋಪನಹಳ್ಳಿ ಗ್ರಾಮ ಪಂಚಾಯತಿಗೆ ನಿಜವಾಗ್ಲೂ ಶೌಚಾಲಯ ಬೇಕಾ..?
ಚಳ್ಳಕೆರೆ : ಸರಕಾರ ಎಷ್ಟೆ ವ್ಯವಸ್ಥೆ ಬದಲಾಯಿಸಿದರು ಆದರೆ ಕೆಲ ಅಧಿಕಾರಿಗಳ ಮನಸ್ಸು ಮಾತ್ರ ಬದಲವಾಣೆ ಮಾಡುವಲ್ಲಿ ವಿಫಲವಾಗಿದೆ.


ಹೌದು ನಿಜಕ್ಕೂ ಗಡಿ ಭಾಗದ ಜನರ ಗೋಳು ಕೇಳುವರ‍್ಯಾರು ಎಂಬ ಯಕ್ಷ ಪ್ರಶ್ನೇ ಜನರಲ್ಲಿ ಮೂಡುವುದು ಸಹಜ ಆದರೆ ಅದನ್ನು ಜಾರಿಗೆ ತರುವ ಮೇಲಾಧಿಕಾರಿಗಳ ಕಾರ್ಯವೈಖರಿಯೂ ಕೂಡ ಅಷ್ಟೆ ಜವಾಬ್ದಾರಿಯುತವಾಗಿದೆ ಆದರೆ ಯಾಕೋ ಹರಿವು ಮೂಡಿಸುವ ಕೆಲ ಇಲಾಕೆಗಳಿಗೆ ಮೊದಲು ಹರಿವು ಮೂಡಿಸಿ ತದ ನಂತದ ಅನ್ಯ ಇಲಾಖೆಗಳಿಗೆ ನೀತಿ ಪಾಠ ಹೇಳುವ ಅನಿವಾರ್ಯತೆ ಇಂದಿನ ಕಾಲದಲ್ಲಿ ಇದೆ.
ಈಡೀ ಗ್ರಾಮದ ಅಭಿವೃದ್ದಿಗೆ ಕಂಕಣ ಬದ್ದರಾಗಿರಬೇಕಾದ ಗ್ರಾಮ ಪಂಚಾಯಿತಿ ಪಿಡಿಓಗಳು ಮಾತ್ರ ಇದಕ್ಕೆ ಕ್ಯಾರೆ ಎನ್ನುತಿಲ್ಲವಾಗಿದೆ.


ಗ್ರಾಮದ ಪ್ರತಿಯೊಂದು ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಿ ಅದನ್ನು ಬಳಸಿಕೊಳುವ ವಿಧಾನ ಕೂಡ ಹೇಳುವ ಮೂಲಕ ಹರಿವು ಮೂಡಿಸಬೇಕಾದ ಇಲಾಖೆ ಇಂದು ಕರುಡಾಗಿದೆ.
ತಾಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶೌಚಾಲಯ ಇದ್ದು ಇಲ್ಲವಾಗಿದೆ. ಶೌಚಾಲಯ ಇದ್ದರೆ ನೀರೆ ಇಲ್ಲ, ನೀರು ಇದ್ದರೆ ಸ್ವಚ್ಚತೆ ಇಲ್ಲ ಈಗೇ ಸಮಸ್ಯೆಗಳು ತಾಂಡವಾಡುತ್ತಿವೆ.


ಗ್ರಾಮೀಣ ಜನರ ಆರೋಗ್ಯ ರಕ್ಷಣೆಯ ಕಾಳಜಿ ಹೊಂದಿರುವ ಸಂಪೂರ್ಣ ನೈರ್ಮಲ್ಯ ಯೋಜನೆ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಹೊಂದಿರುವ ಗ್ರಾಮ ಪಂಚಾಯಿತಿ ಪತ್ರಿ ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಳ್ಳಿ, ಬಳಕೆ ಮಾಡಿ, ಬಯಲು ಮಲ ಮೂತ್ರ ವಿಜರ್ಸನೆ ತಪ್ಪಿಸಲು ಸಾರ್ವಜನಿಕರಲ್ಲಿ ಗ್ರಾಮಪಂಚಾಯತ್ ವತಿಯಿಂದ ಸಂಪೂರ್ಣ ನೈರ್ಮಲ್ಯಜಾಗೃತಿ ಮೂಡಿಸುತ್ತಿದ್ದರೂ ತಮ್ಮದೇ ಕಚೇರಿಯಲ್ಲಿ ಶೌಚಾಲಯವಿದ್ದರೂ ಬಳಕೆ ಮಾಡದೆ ಸಮಸ್ಯೆ ಎದುರಿಸುತ್ತಿದ್ದಾರೆ.


ಹಣ ದುರುಪಯೋಗ ಆರೋಪ
ಗ್ರಾಪಂ ಕಚೇರಿ ಕಟ್ಟಡಕ್ಕೆ 2020-21ನೇ ಸಾಲಿನ 15ನೆ ಹಣಕಾಸು ಯೋಜನೆಯಡಿಯಲ್ಲಿ ಗ್ರಾಪಂ ಹೊಸ ಕಚೇರಿ ಕಟ್ಟಡಕ್ಕೆ ಮಳೆನೀರು ಕೊಯ್ಲು ಅಳವಡಿಕೆಗೆ 99 ಸಾವಿರ ರೂ. ಕುಡಿಯುವ ನೀರಿನ ಪೈಪ್‌ಲೈನ್‌ಗೆ 30795 ರೂ, ಶೇ 5 ವಿಕಲ ಚೇನತನರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಕಚೇರಿಯಲ್ಲಿ ಜನಸ್ನೇಹಿ ಶೌಚಾಲಯ ನಿರ್ಮಾಣಕ್ಕೆ 1.29.795 ಲಕ್ಷ ರೂ ಖರ್ಚು ಮಾಡಿದ್ದರೂ ಸಹ ಗ್ರಾಪಂ ಕಚೇರಿಯಲ್ಲಿ ಕುಡಿಯುವ ನೀರಿಲ್ಲದೆ ದೂರದಿಂದ ಕ್ಯಾನ್ ನಲ್ಲಿ ಕುಡಿಯುವ ನೀರು ತರಲಾಗುತ್ತಿದೆ.


ಪೈಪ್ ಲೈನ್, ಶೌಚಾಲಯ ನಿರ್ಮಾಣದಲ್ಲಿ ಸುಮಾರು 3 ಲಕ್ಷರೂ ಹಣ ಖರ್ಚು ಮಾಡಿದ್ದರೂ ಸಹ ಉಪಯೋಗಕ್ಕಿಲ್ಲ ಎಂಬAತಾಗಿದ್ದು ಸಾರ್ವಜನಿಕರ ತೆರಿಗೆ ಹಣ ಅಭಿವೃದ್ಧಿ ಹೆಸರಿನಲ್ಲಿ ದುರಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದರೂ ಸಹ ಅಧಿಕಾರಿಗಳ ಮಾತ್ರ ಜಾಣ ಕುರುಡುತನ ಪ್ರದರ್ಶನ ಮಾಡಲಾಗುತ್ತಿದ್ದಾರೆ.


ಇನ್ನೂ ಶೌಚಾಯಲಾಯ ಹಾಗೂ ಕಛೇರಿ ಸುತ್ತಲು ಮುಳ್ಳಿನ ಗಿಡಗಳು ಬೆಳೆದು ನಿಂತಿವೆ ಆದರೆ ಅಧಿಕಾರಿಗಳು ಮಾತ್ರ ಮೌನ ಎಂಬುದು ಕೆಆರ್ ಎಸ್ ಪಕ್ಷದ ಕೆಲ ಮುಖಂಡರುಗಳು ಕಂಡಿಸಿದ್ದಾರೆ.
ಈಗಲಾದರೂ ಸಂಬAಧಪಟ್ಟ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವರೇ ಕಾದು ನೋಡ ಬೇಕಿದೆ.

Namma Challakere Local News
error: Content is protected !!