ಶಿಕ್ಷಕರಿಗಾಗಿ ಅಂಗಲಾಚುವ : ಮಕ್ಕಳೆ ಸ್ವತಃ ವಿಡಿಯೋ ಮಾಡಿ ವೈರಲ್
ಚಳ್ಳಕೆರೆ : ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರ ಕೊರತೆ ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ತಾಂಡವಾಡುತ್ತಿದೆ.
ತಾಲೂಕಿನಲ್ಲಿ ವಗಾರ್ವಣೆ, ನಿವೃತ್ತಿ, ಹಾಗೂ ಮರಣಹೊಂದಿದ ಇತರೆ ಕಾರಣಗಳಿಂದ ಪ್ರಾಥಮಿಕ ಹಂತದಲ್ಲಿ 338 ಶಿಕ್ಷಕರ ಹುದ್ದೆಗಳು ಖಾಲಿ ಇರುವುದು ಬೆಳಕಿದೆ ಬಂದಿದೆ
ಇನ್ನೂ ಗಡಿ ಭಾಗದ ತಾಲೂಕಿನ ಬಂಜಿಗೆರೆ ಗ್ರಾಮದ ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಎಂದು ಸ್ವತಃ ಶಾಲಾ ಮಕ್ಕಳೆ ವಿಡಿಯೋ ಮಾಡುವ ಮೂಲಕ ಶಿಕ್ಷಕರಿಗಾಗಿ ಅಂಗಲಾಚುತ್ತಿರುವ ದೃಶ್ಯ ಕಾಣಬವುಹುದಾಗಿದೆ.
ಆದ್ದರಿಂದ ಈ ಬಾರಿಯಾದರು ಶಿಕ್ಷಣ ಇಲಾಕೆ ವಿಶೇಷ ಗಮನಹರಿಸಿ ರಾಜ್ಯದ ಅತೀ ಹೆಚ್ಚು ಬುಡಕಟ್ಟು ಸಮುದಾಯಗಳು ಇರುವ ಆಂದ್ರದ ಗಡಿಯನ್ನು ಹಂಚಿಕೊAಡಿರುವ ಚಳ್ಳಕೆರೆ ತಾಲೂಕಿಗೆ ಹೆಚ್ಚಿನ ಪ್ರಾಶಸ್ತö್ಯ ನೀಡಬೆಕಾಗಿ ಸ್ಥಳೀಯ ನಿವಾಸಿಗಳು ಪರಿ ಪರಿಯಾಗಿ ಕ್ಷೇತ್ರದ ಶಾಸಕರು ಹಾಗು ಸಚಿವರನ್ನು ಕೇಳಿಕೊಂಡಿದ್ದಾರೆ.
ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾಧ್ಯಮದೊಂದಿಗೆ ಮಾತನಾಡಿ, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು, ಸಹ ಶಿಕ್ಷಕರು ವಿಶೇಷ ಶಿಕ್ಷಕರ ಹುದ್ದೆಗಳ ಒಳಗೊಂಡAತೆ ಕಾರ್ಯ ನಿರ್ವಾಹಿಸಿಸಲು ಸರಕಾರ 184 ಅತಿಥಿ ಶಿಕ್ಷಕರನ್ನು ನೀಡಿದೆ, ಗಡಿ ಭಾಗದ ತ್ರೀವ ಕೊರತೆ ಇರುವ ಶಾಲೆಗಳಿಗೆ ನಿಯೋಜನೆ ಮಾಡಿ ಮಕ್ಕಳ ಶೈಕ್ಷಣಿಕ ಮಟ್ಟ ಸರಿತೂಗಿಸಿದೆ.
ತಾಲೂಕಿನ ಶೂನ್ಯ ಶಿಕ್ಷಕರ ಶಾಲೆಗಳಿಗೆ ಪಕ್ಕದ ಶಾಲೆಗಳಿಂದ ನಿಯೋಜನೆ ಮಾಡಿ ಕಾರ್ಯ ಪಾಠ ಪ್ರಾವಚನಗಳನ್ನು ನೀಡುತ್ತಿದ್ದೆವೆ ಇನ್ನೂ ಸರಕಾರ ನಿಗಧಿ ಮಾಡಿದ 15 ಸಾವಿರ ಶಿಕ್ಷಕರ ಹೊಸ ನೇಮಕಾತಿ ಪ್ರಕ್ರಿಯೆ ಹಂತದಲ್ಲಿದೆ.
ನಮ್ಮ ತಾಲೂಕಿಗೆ ಎರಡು ತಿಂಗಳ ಒಳಗೆ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿದು ಶಿಕ್ಷಕರ ನಿಯೋಜನೆ ಮಾಡಲಾಗುತ್ತದೆ ಇನ್ನೂ ಮಂಜೂರಾದ ಅತಿಥಿ ಶಿಕ್ಷಕರ ಹೊಸ ನೇಮಕಾತಿ ಹಾಗೂ ಈ ವರ್ಷದ ಕೊನೆಯ ತನಕ ಮಂದೂವರೆಸಲಾಗುತ್ತದೆ ಮಕ್ಕಳಿಗೆ ಯಾವುದೇ ಕೊರೆತ ಇಲ್ಲದಂತೆ ಭೋಧನೆಗೆ ಸಹಕಾರ ಮಾಡಲಾಗುತ್ತದೆ.