ಪ್ರಧಾನಿ ನರೇಂದ್ರ ಮೋದಿಜೀಯವರ ಜನ್ಮ ದಿನಕ್ಕೆ 15ದಿನಗಳ ನಿರಂತರ ಕಾರ್ಯಕ್ರಮ : ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್
ಚಳ್ಳಕೆರೆ : ಜನರ ಸೇವಕನಾದ ಹಾಗೂ ಈಡೀ ದೇಶ ಕಂಡ ಮಹಾನ್ ನಾಯಕ ಪ್ರಧಾನ ಮಂತ್ರಿ ಮೋದಿಜೀಯವರ 72ನೇ ವರ್ಷದ ಹುಟ್ಟುಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಲಾಗುವುದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ ಹೇಳಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿ, ಈಡೀ ಜಗತ್ ಒಪ್ಪುವಂತ ಆಡಳಿತ ನಡೆಸಿದ್ದಾರೆ ಆದೇ ರೀತಿಯಲ್ಲಿ ಮುಂಬರುವ ದಿನಗಳಲ್ಲಿ ನಿರಂತರವಾಗಿ ಅವರೆ ನಮ್ಮ ಪ್ರಧಾನ ಮಂತ್ರಿಗಳಾಗಿರುತ್ತಾರೆ ಅದ್ದರಿಂದ ಅವರ ಹುಟ್ಟು ಹಬ್ಬಕ್ಕೆ ನಾಳೆಯಿಂದ ಚಾಲನೆ ನೀಡಿಲಾಗುತ್ತದೆ ಮೊದಲ ಬಾರಿಗೆ ತಾಲೂಕಿನ ಸಾರ್ವಜನಿಕ ಆಸ್ವತ್ರೆಯಲ್ಲಿ ರೋಗಿಗಳಿಗೆ ಹಾಲು ಬ್ರೆಡ್ ವಿತರಣೆ ಮಾಡಲಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಹಲವಾರು ಅಭಿವೃದ್ಧಿ ಯೋಜನೆಗಳ ಮೂಲಕ ಉತ್ತಮ ಕಾರ್ಯಗಳನ್ನು ಮಾಡುತ್ತಾ ದಿನದ 18 ಗಂಟೆಗಳ ಕಾಲ ಜನಸೇವೆ ಮಾಡಿದ್ದಾರೆ ಇವರ ಬಗ್ಗೆ ಉತ್ತಮ ಲೇಖನ ಬರೆಯುವ ಮೂಲಕ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕೂಡ ಆಮ್ಮಿಕೊಳ್ಳಲಾಗಿದೆ ನಾಳೆಯಿಂದ ನಿರಂತವಾಗಿ ಅವರ ಜನ್ಮ ದಿನದ ಅಂಗವಾಗಿ ನಗರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಸಹ ಸಂಚಾಲಕ ಮಾತೃಶ್ರೀ ಮಂಜುನಾಥ್, ಕೆ.ಎಂ.ಯತೀಶ್, ನಾಗೇಶ್ ರಾಮರೆಡ್ಡಿ, ಹೊಟ್ಟೆಪನಹಳ್ಳಿ ಮಾರುತಿ ಪಾಲ್ಗೋಂಡಿದ್ದರು.