ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಕ್ರೀಡೆಯಲ್ಲಿ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ನಗರದ ಬಿಎಂಜಿಹೆಚ್‌ಎಸ್ ಕ್ರೀಡಾಂಗಣದಲ್ಲಿ ನಡೆದ ಸರಕಾರಿ ಶಾಲೆಗಳ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಕ್ರೀಡಾ ಪಟುಗಳನ್ನು ಕುರಿತು ಮಾತನಾಡಿದರು, ವಲಯ ಮಟ್ಟದಿಂದ ತಾಲೂಕಿಗೆ ಆಯ್ಕೆಯಾಗಿ ಬಂದ ಕ್ರೀಡಾ ಪಟುಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕು, ಉತ್ತಮ ಕ್ರೀಡಾ ಪ್ರದರ್ಶನ ನೀಡುವ ಮೂಲಕÀ ಉತ್ತಮವಾಗಿ ತಾಲೂಕಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಕ್ರೀಡೆಯನ್ನು ಪ್ರದರ್ಶಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ಕ್ರೀಡೆಯಲ್ಲಿ ಮಕ್ಕಳು ಸಕ್ರಿಯಾಗಿ ಪಾಲ್ಗೋಂಡಿರುವುದು ಸಂತಸ ತಂದಿದೆ, ನಾಲ್ಕು ಹೋಬಳಿಯಿಂದ 14 ವಲಯಗಳ ಮೂಲಕ ತಾಲೂಕು ಮಟ್ಟದ ಈ ಕ್ರೀಡೆಯಲ್ಲಿ ಸುಮಾರು ತಂಡಗಳು ಆಗಮಿಸಿರುವುದು ಹಾಗೂ ವಿವಿಧ ಕ್ರೀಡಾ ವಿಭಾಗದಲ್ಲಿ ಅತ್ಯುತ್ತಮ್ಮ ಪ್ರದರ್ಶನ ನೀಡುವ ಮೂಲಕ ಮಕ್ಕಳು ಕ್ರೀಡೆಯಲ್ಲಿ ತೋಡಗಬೇಕು ಎಂದರು.
ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಕವಿತಾ ಬಾರಯ್ಯ, ರಮೇಶ್ ಗೌಡ, ಬಿಇಓ ಸುರೇಶ್, ಅಕ್ಷರ ದಾಸೋಹ ಅಧಿಕಾರಿ ತಿಪ್ಪೆಸ್ವಾಮಿ, ದೈಹಿಕ ಶಿಕ್ಷಕ ಶಿವಮೂರ್ತಿ, ಸಿದ್ದೇಶ್, ಭಿಮಣ್ಣ, ದೊಡ್ಡ ರಂಗಪ್ಪ, ಪಾಲಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಅಧ್ಯಕ್ಷ ಮಾರುತೇಶ್, ತಾಲೂಕು ಅಧ್ಯಕ್ಷ ಬಿ.ವೀರಣ್ಣ, ಪ್ರಧಾನ ಕಾರ್ಯದರ್ಶಿ ಹೆಚ್.ಹನುಮಂತಪ್ಪ, ಸಹ ಕಾರ್ಯದರ್ಶಿ ಎನ್.ಹೇಮಲತಾ, ಚನ್ನಕೇಶವ, ತಿಪ್ಪೆಸ್ವಾಮಿ, ಸಹ ಶಿಕ್ಷಕಿ ಜಿ.ವಿಜಯ್‌ಲಕ್ಷಿö್ಮÃ, ಇತರರು ಪಾಲ್ಗೊಂಡಿದ್ದರು.