ನೀರಿನಿಂದ ಅವಘಡಗಳು ಜರುಗದಂತೆ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಕಟ್ಟೆಚ್ಚರ
ಚಳ್ಳಕೆರೆ : ಪರುಶುರಾಂಪುರ ತಾಲೂಕಿನ ಕರ‍್ಲಕುಂಟೆ ಗ್ರಾಮದ ಕಾರೆ ಹಳ್ಳದ ನೀರಿನಲ್ಲಿ ಬೈಕ್ ಸಾವರರು ಇಬ್ಬರು ನೀರಿನಲ್ಲಿ ಕೊಚ್ಚಿಹೊಗಿ ಸಾವಿನಪ್ಪಿರುವ ಕರ‍್ಲಕುಂಟೆ ಗ್ರಾಮಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಬೇಟಿ ನೀಡಿ ಕುಟುಂಬಸ್ಥರಗೆ ಸಾಂತ್ವನ ನೀಡಿ ಸರಕಾರದಿಂದ ನೀಡುವ ಪರಿಹಾರವನ್ನು ಅತೀ ತುರ್ತಾಗಿ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ನಂತರ ಇರದ ಕ್ಷೇತ್ರದಲ್ಲಿ ಎಲ್ಲಿಯೂ ಕೂಡ ಜರುಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೋಳ್ಳಬೇಕು, ಮನುಷ್ಯನ ಜಿವನ ಅಮೂಲ್ಯವಾದದದು ಅದರೆ ಇಂತಹ ಸ್ವಗ್ರಾಮಕ್ಕೆ ಮರುಳೂವಾಗ ದಾರಿಯಲ್ಲಿ ಇಂತಹ ದುರ್ಘಟನೆ ಜರುಗಿದರೆ ಯಾರು ಹೊಣೆ ಅದ್ದರಿಂದ ಯಾವುದೇ ಇತಂಹ ಪ್ರಕರಣಗಳು ಮುಂದೆ ನಡೆಯದಂತೆ ಅಧಿಕಾರಿಗಳು ಪರುಶುರಾಮಪುರ ವ್ಯಾಪ್ತಿಯ ಎಲ್ಲಿ ಎಲ್ಲಿ ರಸ್ತೆಗೆ ಅಡ್ಡವಾಗಿ ನೀರು ಹರಿದು ಹೋಗುತ್ತದೆ ಅಂತಹ ಕಡೆಗಳಲ್ಲಿ ಸುಗಮ ರಸ್ತೆ ಇದೆ ಎಂಬುದನ್ನು ಈ ಕೂಡಲೇ ಅಧಿಕಾರಿಗಳು ಪರೀಶಿಲಿಸಿ ಮುಂದಿನ ಕ್ರಮಕ್ಕೆ ಕಾಮಗಾರಿ ಪ್ಲಾನ್ ಮಾಡಿ ಎಂದು ಸೂಚಿಸಿದರು.
ಈದೇ ಸಂದರ್ಭದಲ್ಲಿ ಮುಖಂಡರುಗಳಾದ ರೇವಣ್ಣ, ಕೃಷ್ಣಮೂರ್ತಿ, ತಿಮ್ಮಣ್ಣ, ಜನಾರ್ಧನ, ಕರ‍್ಲಕುಂಡೆ ತಿಪ್ಪೆಸ್ವಾಮಿ, ರಂಗಸ್ವಾಮಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ ಸ್ವಾಮೀ, ಜಿಲ್ಲಾಧ್ಯಕ್ಷರಾದ ನಾಗರಾಜ್ ಹಾಗೂ ಮುಖಂಡರು ಮತ್ತು ಕಾರ್ಯಕರ್ತರು, ಸಾರ್ವಜನಿಕರ ಉಪಸ್ಥಿತರಿದ್ದರು.