ಚಳ್ಳಕೆರೆ : ಪ್ರಕೃತಿ ವಿಕೋಪಕ್ಕೆ ಅಂದಾಜು-90 ಕೋಟಿ ರೂ.ನಷ್ಟ : ಶಾಸಕ ಟಿ.ರಘುಮೂರ್ತಿಯಿಂದ ಸರಕಾರಕ್ಕೆ ಪ್ರಸ್ತಾವನೆ

ಚಳ್ಳಕೆರೆ: ಕಳೆದ ಒಂದು ವಾರದ ಹಿಂದೆ ಸುರಿದ ಭಾರೀ ಮಳೆಗೆ ತಾಲೂಕಿನ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ ಜೊತೆಗೆ ಅಪಾರ ಹಾನಿಯಾಗಿದೆ ಅದ್ದರಿಂದ ಅತೀ ತುರ್ತಾಗಿ ಅತೀವೃಷ್ಠಿಯಿಂದ ಹಾನಿಯಾದ ಪ್ರಕರಣಗಳಿಗೆ ಸಂಬAಧಿಸಿದAತೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಸನ್ನದರಾಗಬೆಕು ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.


ಅವರು ನಗರದ ತಾಲೂಕು ಕಚೇರಿಯಲ್ಲಿ ಪ್ರಕೃತಿ ವಿಕೋಪದಿಂದ ಹಾದ ಅತಿವೃಷ್ಠಿಯ ಬೆಳೆ ಹಾನಿಗೆ ಸಂಬAಧಿಸಿದAತೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ತಾಲೂಕಿನ ಯಾವುದೇ ಗ್ರಾಮದಲ್ಲಿ ಬೆಳೆ ಹಾನಿ, ಹಾಗೂ ವೇದಾವತಿ ನೀರಿನಿಂದ ಹಾನಿಯಾದ ಕೃಷಿ ಬೆಳೆಗಳು ಹಾಗೂ ತೋಟಗಾರಿಕೆ ಬೆಳೆಗಳ ಹಾಗೂ ಮನುಷ್ಯನ ಪ್ರಾಣ ಹಾನಿಗೆ ಸಂಬAಧಿಸಿದAತೆ ಅಧಿಕಾರಿಗಳು ಅತೀ ತುರ್ತಾಗಿ ಪರಿಹಾರ ನೀಡಲು ಸಿದ್ದತೆ ಮಾಡಿಕೊಳ್ಳಬೇಕು ಎಂದರು.


ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ರೈತರು ಈಗಾಗಲೇ ಹೈರಾಣಾಗಿದ್ದಾರೆ, ನಿಮ್ಮ ವರದಿ ಮೇಲೆ ನಷ್ಟ ಪರಿಹಾರ ನಿಗಧಿಯಾಗುತ್ತದೆ ಆದ್ದರಿಂದ ಯಾವುದೇ ರೈತನಿಗೆ ತೊಂದರೆ ಯಾಗದ ರೀತಿಯಲ್ಲಿ ಪರಿಹಾರ ನೀಡಬೇಕು, ಆಶ್ರಯ ಇಲ್ಲದೆ ಹಾಲುಗೊಂಡನಹಳ್ಳಿ, ಸೂರನಹಳ್ಳಿ ಗ್ರಾಮದ ಜನರು ನಿತ್ರಣರಾಗಿದ್ದಾರೆ ಆದ್ದರಿಂದ ಪ್ರಕೃತಿ ವಿಕೋಪದಿಂದ ಪರಿಹಾರ ಇದೆ ಅದನ್ನು ಸರಿಯಾದ ರೀತಿಯಲ್ಲಿ ದೊರಕಿಸಿಕೊಡಬೇಕು ಎಂದರು.
ಈಗಾಗಲೇ ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಟೋಮೋಟೋ, ಅಡಕೆ, ದಾಳಿಂಬೆ, ಪಪ್ಪಾಯಿ ಈಗೇ ವಿವಿಧ ತೋಟಗಾರಿಕೆ ಬೆಳೆಗಳು ಅತೀವೃಷ್ಠಿಯಿಂದ ಹಾನಿಯಾಗಿ ಕಳೆದ ವರ್ಷದಿಂದ ಪ್ರಸ್ತುವ ದಿನದವರೆಗೆ ಅಂದಾಜು 50 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ, ಅದರಲ್ಲಿ ಈಗಾಗಲೇ 13 ಕೋಟಿ 50 ಲಕ್ಷ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಸಹಯಾಕ ಅಧಿಕಾರಿ ಆರ್.ವಿರುಪಾಕ್ಷಪ್ಪ ಮಾಹಿತಿ ನೀಡಿದರು.
ಅದರಂತೆ ಕೃಷಿ ಬೆಳೆಗಳಾದ ಶೇಂಗಾ, ತೊಗರಿ, ಹತ್ತಿ, ಸೋಯಾಬಿನ್, ಮುಸುಕಿನ ಜೋಳ, ಸೂರ್ಯಕಾಂತಿ ಈಗೇ ವಿವಿಧ ಬೆಳೆಗಳು ನೀರಿನ ಅವೃತವಾಗಿ ನದಿ ಪಾತ್ರದ ವೇದಾವತಿ ಹಾಗೂ ಚಳ್ಳಕೆರೆ ಕಸಬಾದಲ್ಲಿ ಅತೀ ಹೆಚ್ಚನದಾಗಿ ನಷ್ಟವಾಗಿದೆ, ತಾಲೂಕಿನಲ್ಲಿ ಅಂದಾಜು 1447 ಹೆಕ್ಟೆರ್ ಹಾನಿಯಾಗಿದೆ, ಸುಮಾರು 1 ಕೋಟಿ 96 ಲಕ್ಷ ನಷ್ಟ ಪರಿಹಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೆವೆ ಎಂದು ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ಜೆ.ಅಶೋಕ್ ಮಾಹಿತಿ ನೀಡಿದರು.


ಅದೇ ರೀತಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ತಾಲೂಕಿನ ನಾಲ್ಕು ಹೊಬಳಿಗಳಲ್ಲಿ ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಪಾವಗಡ ಹಾಗೂ ಚಳ್ಳಕೆರೆ ಮಾರ್ಗದ ರಸ್ತೆಗಳು ಸಂಪೂರ್ಣವಾಗಿ ಹಾಳಗಿ ಅಂದಾಜು 13 ಕೋಟಿ ರೂ.ನಷ್ಟು ನಷ್ಟವಾಗಿದೆ. ಇನ್ನೂ ಪರುಶುರಾಂಪುರ ಹೋಬಳಿಯ ಪಿಲ್ಲಹಳ್ಳಿ ಸಮೀಪದ ಬ್ರೀಡ್ಜ್ ನೀರಿಗೆ ಕೊಚ್ಚಿ ಹೋಗಿದೆ, 17 ಕೋಟಿ ರೂ. ಬ್ರೀಡ್ಜ್ ಗೆ ಹಾಗೂ ಕೊರ್ಲಕುಂಟೆ ದಾರಿ ಪರುಶುರಾಂಪುರ ಪಾವಗಡ ಮಾರ್ಗದ ಸೇತುವೆಗೆ 5 ಕೋಟಿ ರೂ.ಗೆ ಪ್ರಸ್ಥಾವನೆಗೆ ಶಾಸಕರು ಪ್ರಸ್ತಾಪವನೆ ಸಲ್ಲಿಸಿದ್ದಾರೆ ಎಂದು ಪಿಡ್ಲೂö್ಯಯುಡಿ ಎಇಇ ವಿಜಯ ಬಾಸ್ಕರ್ ಮಾಹಿತಿ ನೀಡಿದರು.


ಬಾಕ್ಸ್ ಮಾಡಿ : ತೋಟಗಾರಿಕೆ ಬೆಳೆಗಳು ಅತೀವೃಷ್ಠಿಯಿಂದ ಅಂದಾಜು 50 ಕೋಟಿ ನಷ್ಟವಾಗಿದೆ, ಅದರಲ್ಲಿ ಈಗಾಗಲೇ 13 ಕೋಟಿ 50 ಲಕ್ಷ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಲೋಕೋಪಯೋಗಿ ಇಲಾಖೆಯಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಅಂದಾಜು 13 ಕೋಟಿ ರೂ.ನಷ್ಟು ನಷ್ಟವಾಗಿದೆ. ಬ್ರೀಡ್ಜ್ ನೀರಿಗೆ ಕೊಚ್ಚಿ ಹೋಗಿದೆ, 17 ಕೋಟಿ ರೂ. ಬ್ರೀಡ್ಜ್ ಗೆ ಹಾಗೂ ಕೊರ್ಲಕುಂಟೆ ದಾರಿ ಪರುಶುರಾಂಪುರ ಸೇರುವೆಗೆ 5 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.— ಶಾಸಕ ಟಿ.ರಘುಮೂರ್ತಿ

ಈ ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ವನಿರ್ವಾಣಾಧಿಕಾರಿ ಹೊನ್ನಯ್ಯ, ಕೃಷಿ ಅಧಿಕಾರಿ ಜೆ.ಅಶೋಕ್. ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ, ರೇಷ್ಮೇ ಇಲಾಕೆ ಕೆಂಚಾಜಿರಾವೋ, ಪಶು ಇಲಾಕೆ ಡಾ.ರೇವಣ್ಣ, ಎಇಇ ಕಾವ್ಯ, ತಾಪಂ. ಸಹಯಾಕ ನಿದೇರ್ಶಕ ಸಂಪತ್ ಕುಮಾರ, ನೂತನ ಬಿಸಿಎಂ ಅಧಿಕಾರಿ ಲಿಲಾವತಿ, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಆರೋಗ್ಯ ಸಹಾಯಕ ಕುದಾಪರ ತಿಪ್ಪೆಸ್ವಾಮಿ, ಸಮಾಜ ಕಲ್ಯಾಣ ಇಲಾಕೆಯ ಮುಕ್ಕಣ್ಣಪ್ಪ, ನಗರ ಗ್ರಾಮ ಲೆಕ್ಕಿಗ ಪ್ರಕಾಶ್ ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!