ಸಮಾಜದ ಒಗ್ಗೂಡುವಿಕೆಗೆ ಜಯಂತಿ ಅನಿವಾರ್ಯ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಸಮಾಜದ ಒಗ್ಗೂಡುವಿಕೆಗೆ ಜಯಂತಿ ಅನಿವಾರ್ಯವಾಗಿದೆ ಇತಂಹ ಜಯಂತಿಗಳನ್ನು ಅರ್ಥಗರ್ಭಿತವಾಗಿ ಸಮುದಾಯದ ಎಲ್ಲಾರೂ ಒಗ್ಗೂಡಿ ಆಚರಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು, ಸಮುದಾಯದ ಎಲ್ಲಾ ಭಾಂಧವರು ಸೇರಿ ಸರಕಾರದಿಂದ ಆಚರಿಸುವ ಜಯಂತಿಯನ್ನು ಸರಳವಾಗಿ 17ಕ್ಕೆ ಆಚರಿಸೊಣ ತದನಂತರ ಮತ್ತೊಂದು ದಿನ ವಿಜೃಂಭಣಿಯಿAದ ಅರ್ಥಗರ್ಭಿತವಾಗಿ ಆಚರಿಸೊಣ ಎಂದರು.
ಈದೇ ಸಂಧರ್ಭದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಯಾವುದೇ ಸಮಾಜವನ್ನು ಗೌರವಿಸುವ ಮೂಲಕ ಸಮಾಜದ ಹಿರಿಯನ್ನು ಹಾಗೂ ಸಾಧಕರನ್ನು ನೆನೆಯುವ ಮೂಲಕ ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವ ಅನಿವಾರ್ಯತೆ ಇದೆ ಎಂದರು.
ಇದೇ ಸಂಧರ್ಭದಲ್ಲಿ ಸಮುದಾಯದ ಮಹಿಳಾಪ್ರಧಾನ ಹಾಗೂ ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್, ಸದಸ್ಯ ರಮೇಶ್ ಗೌಡ, ಸಂಘದ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಸಿಇ ಪ್ರಸನ್ನ, ಮಹಿಳಾ ಘಟಕ ಅಧ್ಯಕ್ಷೆ ಕಮಲಮ್ಮ, ಮಹಿಳಾ ಜಾಗೃತಿ ಸಂಘದ ಗೌರವಾಧ್ಯಕ್ಷೆ ಸರಸ್ವತಿ, ಬಿಸಿ ವೆಂಕಟೇಶ್, ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ವರ್ತಕರಾದ ಬಿಜಿ.ಶಶಿಕುಮಾರ್, ನಾಗರಾಜ್‌ಚಾರ್, ಪದ್ಮನಾಭಚಾರ್, ಲಕ್ಷö್ಮಣಚಾರ್, ನಾಗರಾಜ್‌ಚಾರ್, ರಾಮಚಾರ್, ಲಕ್ಷಿö್ಮನಾರಾಯಾಣಚಾರ್, ಭರತ್ ರಂಜಿತ್, ಚೇತನ್, ಕಿರಣ್, ಉಮಾದೇವಿ, ಸವಿತ, ಕವಿತಾ, ಶಿವಮ್ಮ, ಲತಮ್ಮ, ರಾಜಮ್ಮ, ಮಂಜುನಾಥ್, ವಿಎ.ಶ್ರೀನಿವಾಸ್, ಆರ್.ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು.