ಚಳ್ಳಕೆರೆ : ಹಿಂದೂ ಮಹಾಗಣಪತಿ ಬೃಹತ್ ಶೋಭಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕ ಮಂಗಳೂರು ಶಾಸಕ ಸಿಟಿ.ರವಿ ನೇತೃತ್ವ
ಚಳ್ಳಕೆರೆ : ವಿಶ್ವ ಹಿಂದು ಪರಿಷತ್ ಬಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಬೃಹತ್ ಶೋಭಾ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕ ಮಂಗಳೂರು ಶಾಸಕ ಸಿಟಿ.ರವಿ ನೇತೃತ್ವ ವಹಿಸಲಿದ್ದಾರೆ.
ಈದೇ ಸೆ.15ರ ಗುರುವಾರ ದಂದು ಚಳ್ಳಕೆರೆ ನಗರದಲ್ಲಿ ಈ ಬೃಹತ್ ಶೋಭಾಯಾತ್ರೆಗೆ ರಾಜ್ಯದ ವಿವಿಧ ಗಣ್ಯ ನಾಯಕರು ಈ ಭಾರಿ ಚಳ್ಳಕೆರೆ ನಗರಕ್ಕೆ ಆಗಮಿಸುವುದರಿಂದ ಬೃಹತ್ ಶೋಭಾ ಯಾತ್ರೆಗೆ ದಾಖಲೆಯಾಗುವ ನಿರೀಕ್ಷೆ ಕೂಡ ಜನರಲ್ಲಿ ಮೂಡಿದೆ.
ಇನ್ನೂ ವಿವಿಧ ಕಲಾ ತಂಡಗಳ ಮೂಲಕ ಮೆರಗು ತರುವ ಈ ಶೋಭಾಯಾತ್ರೆಗೆ ಈಡೀ ತಾಲೂಕಿನ ಸುಮಾರು 40 ಸಾವಿರ ಜನ ಸಂಖ್ಯೆ ಭಾಗವಹಿಸುವ ನಿರೀಕ್ಷೆ ಇದೆ,
ಈಗಾಗಲೇ ಪೊಲೀಸ್ ಇಲಾಕೆ ಕೂಡ ಸೂಕ್ತ ಬಂದ್ ಬಸ್ತು ನೀಡಲು ಸಿಬ್ಬಂದಿ ಆಯೋಜನೆ ಕೂಡ ತೆರೆಮರೆಯಲ್ಲಿ ನಡೆಸುತ್ತಿದೆ. ಈ ಬೃಹತ್ ಶೋಭಾ ಯಾತ್ರೆ ಈಡೀ ಜಿಲ್ಲೆಗೆ ಮೈಲುಗಲ್ಲಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಈ ಬೃಹತ್ ಶೋಭ ಯಾತ್ರೆಗೆ ಕೇಂದ್ರ ಸಚಿವ ಹಾಗೂ ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ, ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು, ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರಾದ ಪಿಸಿ.ಮೋಹನ್, ವಿಧಾನ ಪರಿಷತ್ ಬಿಜೆಪಿ ಸದಸ್ಯರಾದ ಎನ್.ರವಿಕುಮಾರ್, ಬಿಜೆಪಿ ಪ್ರಭಾರಿಗಳಾದ ಪ್ರೇಮ್‌ಕುಮಾರ್ ಜಿ, ಚಿಕ್ಕಮಗಳೂರು ನಗರಸಭೆಯ ಅಧ್ಯಕ್ಷ ವರಸಿದ್ಧಿವೆಣುಗೋಪಾಲ್ ಜಿ, ಹಾಗೂ ಬಿಜೆಪಿ ರಾಜ್ಯ ನಾಯಕರದ ತಮ್ಮಯ್ಯ, ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಮುರಳಿ, ಎಲ್ಲಾ ಬಿಜೆಪಿ ಶಾಸಕರು ಹಿರಿಯ ನಾಯಕರು ವಿವಿಧ ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಹಲವಾರು ಜನಪ್ರತಿನಿಧಿಗಳು ಈ ಶೋಭ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

About The Author

Namma Challakere Local News
error: Content is protected !!