ಚಳ್ಳಕೆರೆ : ನೀರಿನಲ್ಲಿ ಕೊಚ್ಚಿ‌ಹೋದ ಬೈಕ್ ಸವಾರರು : ಅಗ್ನಿಶಾಮಕ ದಳದಿಂದ ಶೋಧಕಾರ್ಯ

ಚಳ್ಳಕೆರೆ : ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ತಾಲೂಕಿನ ಹಲವು ಕಡೆಗಳಲ್ಲಿ ಕೆರೆ‌ಕಟ್ಟೆಗಳು ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ರಸ್ತೆ‌ಮೇಲೆ ನೀರು ಹರಿಯುವುದರಿಂದ ವಾಹನ ಸಾವಾರಾರು ಇಬ್ಬರು ಕೊಚ್ಚಿ ಹೊದ ಘಟನೆ ನಡೆದಿದೆ.

ತಾಲೂಕಿನ ಪರುಶುರಾಂಪುರ ಹೋಬಳಿಯ ಕೊರ್ಲಂಕುಟೆ ಗ್ರಾಮದ ಓಬಳೇಶ್, ಹಾಗೂ ಕುಮಾರ್ ಎಂಬ ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಇನ್ನೂ ಪರುಶುರಾಂಪುರ ಮಾರ್ಗದಿಂದ ಕೊರ್ಲಕುಂಟೆ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಹಳ್ಳ ದಾಟುವಾಗ ಮೂವರು ಯುವಕರು ಸೋಮವಾರ ತಡ ರಾತ್ರಿ ೮ ಗಂಟೆ ಸಮಯದಲ್ಲಿ ಬೈಕ್ ನಲ್ಲಿ ವಾಪಸ್ಸ್ ಬಾರುವಾಗ ಈ ದುರ್ಘಟನೆ ಸಂಭವಿಸಿದೆ.

ಆದರೆ ಅದರಲ್ಲಿ ಒರ್ವ ವ್ಯಕ್ತಿ ಮಾತ್ರ ಜೀವಂತವಾಗಿ ಮನೆಗೆ ಹಿಂತುರುಗಿದ್ದಾರೆ.

ನೀರಿನಲ್ಲಿ‌ ಕೊಚ್ಚಿ ಹೋದ ಯುವಕರಿಗಾಗಿ ಹುಟುಕಾಟದ ಶೋಧ ಕಾರ್ಯ ನಡೆಯುತ್ತಿದೆ.

ಇನ್ನೂ ಸ್ಥಳದಲ್ಲಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ಶೋಧ ಕಾರ್ಯ ನಡೆಸುತ್ತಿದ್ದಾರೆ.

About The Author

Namma Challakere Local News
error: Content is protected !!