ಭಾರತ್ ಜೋಡೋ ಯಾತ್ರೆಗೆ : ಚಳ್ಳಕೆರೆ ಕ್ಷೇತ್ರ ಸಜ್ಜು : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಹೇಳಿಕೆ
ಚಳ್ಳಕೆರೆ : ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೆ.7ರಿಂದ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆಗೆ ಈಗಾಗಲೇ ತಯಾರಿ ನಡೆದಿದೆ ಅದರಂತೆ ಚಳ್ಳಕೆರೆ ಕ್ಷೇತ್ರದ ಸರ್ವರು ಭಾಗವಹಿಸುವಂತೆ ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಹೇಳಿದ್ದಾರೆ.
ಅವರು ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಕಾರ್ಯಕ್ರಮದ ರೂಪುರೇಶಿಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು. ದೇಶವನ್ನು ಐಕ್ಯತೆಗೊಳಿಸೋಣ ಬನ್ನಿ ಭಾಗವಹಿಸಿ. ಇಡೀ ದೇಶದ್ಯಾಂತ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡ ಭಾರತ್ ಜೋಡೋ ಪಾದಯಾತ್ರೆಯ ಬಗ್ಗೆ ಈಗಾಗಲೇ ಸಂಪೂರ್ಣವಾಗಿ ಆಯೋಜನೆ ಮಾಡಲಾಗಿದೆ ಎಂದರು.
ಈದೇ ಸಂಧರ್ಭದಲ್ಲಿ ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಶಂಕರ್, ತಾಲೂಕು ಅಲ್ಪಸಂಖ್ಯಾತರ ಘಟಕ ಹಾಗೂ ಎನ್‌ಎಸ್‌ಯುವೈ ಘಟಕಗಳ ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ಲ, ಉಪಾಧ್ಯಕ್ಷÀ ಮೆಹಬೂಬ್ ಬಾಷಾ, ತಾಲೂಕು ಅಧ್ಯಕ್ಷ ಅನ್ವರ್ ಮಾಸ್ಟರ್, ಎನ್‌ಎಸ್‌ಯುವೈ ಜಿಲ್ಲಾ ಉಪಾಧ್ಯಕ್ಷ ಕುಮಾರಿ ರಕ್ಷಿತಾ ರಾಥೋಡ್, ತಾಲೂಕು ಎನ್ ಎಸ್ ಯು ವೈ ಅಧ್ಯಕ್ಷ ನವಾಜ್, ಮುಖಂಡರುಗಳಾದ ಮಜಿದ್, ವಾಜಿದ್, ನೂರುಲ್ಲಾ, ನಜೀರ್, ಖಾದರ್, ಜುಬೇರ್, ದಾದಾಪೀರ್ ಮತ್ತು ಮುಖಂಡರುಗಳು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.