ಹಿಂದೂ ಮಹಾ ಗಣಪತಿ ಮಹೋತ್ಸವ ಅಂಗವಾಗಿ ಬೈಕ್ ರ‍್ಯಾಲಿ : ಶೋಭಾ ಯಾತ್ರೆ ಸಮಿತಿ ಅಧ್ಯಕ್ಷ ಬಾಳೆಕಾಯಿ ರಾಮದಾಸ್ ಚಾಲನೆ

ಚಳ್ಳಕೆರೆ : ಭಾರತ ದೇಶ ಧಾರ್ಮಿಕತೆ ಹಾಗೂ ಆಧ್ಯಾತ್ಮಿಕತೆಯ ತವರೂರು, ಈಡೀ ವಿಶ್ವಕ್ಕೆ ಧಾರ್ಮಿಕತೆ ಹಾಗೂ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರವರು ಈ ದೇಶಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ, ಈ ಹಿನ್ನೆಲೆಯಲ್ಲಿ ಈಡೀ ಭಾರತ ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಯುರಲು ಈ ಗಣೇಶ ಚತುರ್ಥಿ ಒಂದಾಗಿದೆ ಎಂದು ಗಣೇಶ ಚತುರ್ಥಿ ಶೋಭಾ ಯಾತ್ರೆ ಸಮಿತಿ ಅಧ್ಯಕ್ಷ ಬಾಳೆಕಾಯಿ ರಾಮದಾಸ್ ಹೇಳಿದ್ದಾರೆ.


ಅವರು ನಗರದ ಬಿಇಓ ಕಚೇರಿ ಹಿಂಬಾಗ ಬಜರಂಗದಳದಿAದ ಪ್ರತಿಸ್ಠಾಪಿಸಿದ ಹಿಂದೂ ಮಹಾ ಗಣೇಶ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುವ ಅನಿವಾರ್ಯತೆ ಇದೆ, ಗಣೇಶ ಚತುರ್ಥಿ ಯಾವುದೇ ಒಂದು ಜಾತಿಗೆ, ಯಾವುದೇ ಒಂದು ಪಕ್ಷಕ್ಕೆ, ಹಾಗೂ ಯಾವುದೇ ಏಕ ವ್ಯಕ್ತಿಗೆ ಸೀಮಿತಗೊಳಿಸದೆ ಸರ್ವ ಜಾನಂಗದವರು ಕೂಡಿ ಆಚರಿಸಬೇಕು ತಾಲೂಕಿನ ಹಿರಿಮೆಯ ವೈಷ್ಠಿಯತೆಯನ್ನು ಪ್ರತಿಬಿಂಬಿಸುವ ಮೂಲಕ ಬೈಕ್ ಜಾಥ ಅನಿವಾರ್ಯತೆ ಇದೆ ಎಂದರು.


ಈದೇ ಸಂಧರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಜಯಪಾಲಯ್ಯ, ತಾಲೂಕು ಅಧ್ಯಕ್ಷ ಡಾ.ಮಂಜುನಾಥ್, ಕಾರ್ಯದರ್ಶಿ ಕೃಷ್ಣೇಗೌಡ, ಯಾತೀಶ್, ಮಾತೃಶ್ರೀ ಮಂಜುನಾಥ್, ನಾಗೇಶ್‌ಬಾಬು, ನಗರಸಭೆ ನಾಮ ನಿದೇರ್ಶನ ಸದಸ್ಯ ಮನೋಜ್, ಜಗದಾಂಭ, ಇಂದ್ರೇಶ್, ಬಜರಂಗದಳದ ಮಹಾಂತೇಶ್, ಉಮೇಶ್, ಬಾಲಕೃಷ್ಣ, ನಗರ ಘಟಕ ಅಧ್ಯಕ್ಷ ಈಶ್ವರ ನಾಯಕ, ಜೆಕೆ.ಕುಮಾರ್, ಹಾಗೂ ಬೈಕ್ ರ‍್ಯಾಲಿಗೆ ರಕ್ಷಣೆ ನೀಡಿದ ಪಿಎಸ್‌ಐ ಕೆ.ಸತೀಶ್‌ನಾಯ್ಕ, ಸಿಬ್ಬಂದಿ ಬಾಲಾಜಿ, ಮಂಜುನಾಥ್, ಮುಡುಕಿ ಮಂಜುನಾಥ್, ಇತರರು ಪಾಲ್ಗೋಂಡಿದ್ದರು.

Namma Challakere Local News
error: Content is protected !!