ನಮ್ಮದು ಬುಡಕಟ್ಟು ಸಂಸ್ಕೃತಿ..! ಗಣೇಶ ಚರ್ತುಥಿ ನಮ್ಮ ಜನಗಳ ಭಕ್ತಿ ಭಾವದ ಸಂಕೇತ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ನಮ್ಮದು ಬುಡಕಟ್ಟು ಸಂಸ್ಕೃತಿ ಇಲ್ಲಿ ಅತೀ ಹೆಚ್ಚಿನದಾಗಿ ಧಾರ್ಮಿಕ ಸಂಪ್ರಾದಾಯಗಳ ಮೂಲಕ ಇಲ್ಲಿನ ಪದ್ದತಿ ಹಾಸು ಹೊಕ್ಕಾಗಿದೆ ಅದರಂತೆ ಗಣೇಶ ಚರ್ತುಥಿ ಕೂಡ ನಮ್ಮ ಜನಗಳ ಭಕ್ತಿ ಭಾವದ ಪ್ರಗತಿಗೆ ಅಡಿಪಾಯವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದರು.


ಅವರು ನಗರದ ಗಾಂಧಿನಗರದ ಮಸೀದಿ ಪಾರ್ಕ್ ಬಳಿ ಕಳೆದ 19ನೇ ವರ್ಷದಿಂದ ವಾಣಿಜ್ಯೋಧ್ಯಮಿ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಪ್ರತಿಸ್ಠಾಪಿಸಿರುವ ಸರ್ವಧರ್ಮ ಗಣಪತಿ ಉತ್ಸವ ಅಂಗವಾಗಿ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಸ್ವಾತಂತ್ರ ಹೋರಾಟ ಜನ ಸಂಘನೆಗೆ ಗಣಪತಿ ಉತ್ಸವ ಜಾರಿಗೆ ಬಂತು ಎನ್ನುವ ಇತಿಹಾಸದಂತೆ ಸಮಾಜ ಮುಖಿಯಾಗಿ ಆಚರಣೆ ನಡೆಯಬೇಕು ಸರ್ವಧರ್ಮ ಗಣಪತಿ ಆಯೋಜನೆ ಸಮಾಜಕ್ಕೆ ಮಾದರಿ ಆಗಿದೆ ಎಂದುರು.


ನಗರಸಭಾ ಸದಸ್ಯ ಹೊಯ್ಸಳ ಗೋವಿಂದ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು ಸೆ.16 ರಂದು ನಗರದಲ್ಲಿ ಹಿಂದೆದೂ ಮಾಂಡಿರದ ಬೃಹತ್ ಶೋಭಾಯಾತ್ರೆ ಮೂಲಕ ಗಣಪತಿ ವಿಸರ್ಜನೆ ನಡೆಯಲಿದೆ, ಬ್ರಹ್ಮಾವರ ಮಠದ ಸಮೃದ್ದಿ ಚಂಡೆ ವಾಧ್ಯೆ, ಡೋಲು, ಗೊಂಬೆಕುಣಿತ ಸೇರಿ ವಿವಿಧ ಕಲಾ ತಂಡಗಳ ವೈಭವದ ಮೆರವಣಿಗೆ ನಡೆಯಲಿದೆ ಎಂದರು.


ಬೈಕ್ ರ‍್ಯಾಲಿಯಲ್ಲಿ ಇಮ್ರಾನ್ ತಿರುಮಲೇಶ್, ಯೂಸಪ್, ಕೌಸಿಪ್, ಮುರುಳಿ ಸಲೀಮ್, ಕಾಳಿಂಗ ತಿಪ್ಪೆಸ್ವಾಮಿ, ಸುನಿಲ್‌ಕುಮಾರ್, ಅಪ್ಪು, ಮಂಜುನಾಥ್, ಅಜೇಯ್ ಅಬ್ಬು ಮತ್ತಿತರರು ಇದ್ದರು.


About The Author

Namma Challakere Local News
error: Content is protected !!