ಯಾವುದೇ ಕ್ಷೇತ್ರವಾಗಲಿ..! ಯಾವುದೇ ಶಾಸಕರು..! ಆಗಲಿ ಅಭಿವೃದ್ದಿಮುಖ್ಯ ಗೌರಸಮುದ್ರ ಗ್ರಾಮದ ರಸ್ತೆ ಸರಿಪಡಿಸಿ ಅಧಿಕಾರಿಗಳಿಗೆ ಖಡಕ್ ಸೂಚನೆ : ಶಾಸಕ ಟಿ.ರಘುಮೂರ್ತಿ

ಸಾರ್ವಜನಿಕರ ಹಿತ ದೃಷ್ಠಿಯಿಂದ ಕಾರ್ಯ ಮಾಡಿ ಮೊಳಕಾಲ್ಮೂರು ಕ್ಷೇತ್ರವಾಗಲಿ, ಚಳ್ಳಕೆರೆ ಕ್ಷೇತ್ರವಾಗಲಿ ಅಭಿವೃದಿ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಸತತ ಮಳೆಯಿಂದ ಬತ್ತಿದ ಹಳ್ಳ ಕೊಳ್ಳಗಳು ತುಂಬಿ ಕೋಡಿ ಹರಿಯುತ್ತಿವೆ ಇನ್ನೂ ಹಲವು ಗ್ರಾಮಗಳಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿ ಜನರು ಆರೈಕೆ ಕೇಂದ್ರಗಳಲ್ಲಿ ಆಶ್ರಯ ಪಡೆಯುತಿದ್ದಾರೆ.


ಅದರಂತೆ ರಸ್ತೆಗಳು ಹಾಳಾಗಿದ್ದು ವಾಹನ ಸಾವರರು ಪರದಾಡುವಂತಾಗಿದೆ. ಇನ್ನೂ ಗೌರ ಸಮುದ್ರ ಮಾರಮ್ಮ ದೇವಾಸ್ಥಾನಕ್ಕೆ ಹೋಗುವ ಪ್ರಮುಖವಾದ ರಸ್ತೆ ಪಕ್ಕದಲ್ಲೆ ಇರುವ ಪುರಾತನ ಕಾಲದ ಬಾವಿಯ ತಡೆಗೊಡೆ ಮಳೆಗೆ ಕುಸಿದು ಬಿದ್ದು ಹೊಗಿರುವುದರಿಂದ ವಾಹನ ಸಾವರರೂ ಅಂಗೈಯಲ್ಲಿ ಜೀವ ಹೊಡಿದು ಮುಂದೆ ಸಾಗುವಂತೆಯಾಗಿದೆ ಇನ್ನೂ ರಸ್ತೆ ಪ್ಕಕದ ಜಂಗಲ್ ಹಾಗೂ ದುರಸ್ತಿ ಪಡೆಸಬೇಕಾದ ಇಲಾಕೆ ಗಮನಹರಿಸುವ ಅನಿವಾರ್ಯತೆ ಇದೆ ಎಂದು ಕಳೆದ ನಾಲ್ಕು ದಿನಗಳ ಹಿಂದೆ ನಮ್ಮ ಚಳ್ಳಕೆರೆ ವರದಿ ಬಿತ್ತರಿಸಿದ ಹಿನ್ನೆಲೆ ಎಚ್ಚೆತ್ತುಕೊಂಡ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹೊನ್ನಯ್ಯರವರು ಸ್ಥಳ ಪರೀಶಿಲನೆ ನಡೆಸಿ ಅತೀ ತುರ್ತಾ ದುರಸ್ತಿಗೆ ಸೂಚನೆ ನೀಡಿದ್ದಾರೆ.


ಇನ್ನೂ ತಾಲೂಕು ಪಂಚಾಯಿತಿಯಲ್ಲಿ ನಡೆದ ಶಾಸಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಕೂಡ ವರದಿ ಆಧಾರಿಸಿ ಈ ಕೂಡಲೇ ರಸ್ತೆ ಪಕ್ಕದ ಬಾವಿಗೆ ತಡೆಗೊಡೆ ನಿರ್ಮಿಸಿ ಎಂದು ಖಡಕ್ ಸೂಚನೆ ನೀಡಿದ್ದರೆ.
ಯಾವ ಕ್ಷೇತ್ರವಾಗಲಿ ಯಾವ ಶಾಸಕರು ಹಾಗಲಿ ಅದರೆ ಅಭಿವೃದ್ದಿ ಮುಖ್ಯ ಸಾರ್ವಜನಿಕರ ಹಿತ ದೃಷ್ಠಿಯಿಂದ ಕಾರ್ಯ ಮಾಡಿ ಮೊಳಕಾಲ್ಮೂರು ಕ್ಷೇತ್ರವಾಗಲಿ, ಚಳ್ಳಕೆರೆ ಕ್ಷೇತ್ರವಾಗಲಿ ಅಭಿವೃದ್ದಿ ಮುಖ್ಯ ಕೇವಲ ನನ್ನ ಕ್ಷೇತ್ರದಲ್ಲಿ ಮಾಡಿ ಎಂಬ ಮೊನೋದೋರಣೆ ತೋರುವ ಶಾಸಕ ನಾನÀಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸ್ಥಳ ಪರಿಶೀಲನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶಶಿಕುಮಾರ್, ಓಬಣ್ಣ, ಈರಣ್ಣ, ತಾಪಂ.ಸಹಾಯಕ ನಿದೇರ್ಶಕ ಸಂಪತ್ ಕುಮಾರ್, ಪಿಡಿಓ ಕರ‍್ಲಯ್ಯ, ದಿವಾಕರ್, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!