ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ದೇವಸ್ಥಾನಕ್ಕೆ ಶ್ರೀ ಷ || ಬ್ರ|| ಅಭಿನವ ರುದ್ರಮುನಿ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿ ಹಂಪಸಾಗರ ರವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು
ನಾಯಕನಹಟ್ಟಿ:: ಪರಮ ಪಾವನ ಪುಣ್ಯಕ್ಷೇತ್ರವಾದ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಈ ಪುಣ್ಯ ಕ್ಷೇತ್ರದಲ್ಲಿ ವಿಜಯನಗರ ಜಿಲ್ಲೆ ಹರಪನಹಳ್ಳಿ ಮಹಾ ಪಟ್ಟಣದ ಪುಣ್ಯ ಕ್ಷೇತ್ರವಾದ ಪಂಚಗಣ ದೀಸರಲ್ಲಿ ಒಬ್ಬರಾದ ಶ್ರೀ ಗುರು ಕೆಂಪೇಶ್ವರ ಮಹಾಸ್ವಾಮಿಯ ದೇವಸ್ಥಾನದಲ್ಲಿ ಕಳೆದ ಶ್ರಾವಣ ಮಾಸದ ಅಂಗವಾಗಿ 15 ದಿನಗಳ ಪ್ರವಚನ ಕಾರ್ಯಕ್ರಮ ಏರ್ಪಡಿಸಿ ಅಲ್ಲಿನ ಮಹಾ ತಪಸ್ಸುಗಳಾದ ಸರಿಸುಮಾರು 365 ವರ್ಷಗಳ ಕಾಲ ಜೀವಂತವಾಗಿದ್ದು ಅಖಂಡ ಭೂಮಂಡಲವನ್ನು ಸಂಚರಿಸಿ ಆ ಮಹಾನ್ ತಪಸ್ಸಿಗಳಿಗೆ ನೆಲೆ ನಿಂತಂತಹ ಸದ್ಗುರು ಮಹಾದೇವ ತಾತನವರ ಪುರಾಣ ಚರಿತಾಮೃತವನ್ನು ನಾವೇ ಪ್ರವಚನ ಮಾಡಿಸಿದ್ದು
ಈ ನಿಟ್ಟಿನಲ್ಲಿ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುರಾಣ ಸಮಿತಿಯ ಸದ್ಭಕ್ತರು ಬಹಳ ಅಪೇಕ್ಷಿತರಾಗಿ ಪುರಾಣವನ್ನು ಭಕ್ತಿ ಶ್ರವಣ ಮಾಡಿ ಇಂದು ಆ ಪುರಾಣ ಮಹಾ ಮಂಗಳಗೊಂಡ ನಂತರವಾಗಿ ಒಂದು ದಿವಸ ನಾವೆಲ್ಲರೂ ಕೂಡ ಪವಿತ್ರ ಸದ್ಗುರು ಮಹಾದೇವ ತಾತನವರ ಶಿವಯೋಗಿ ಲಿಂಗಾಗಿ ಸಮರಸ್ಯವನ್ನು ಜೀವಂತ ಸಮಾಧಿಯ ಹೊಂದಿರುವಂತ ನಂಜನಗೂಡು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ಹತ್ತಿರದ ತ್ರಿವೇಣಿ ಸಂಗಮದ ದರ್ಶನ ಪಡೆಯಲು ಸಲುವಾಗಿ ದಾರಿ ಮಧ್ಯದಲ್ಲಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದರ್ಶನ ಕೊಡುವ ಭಾಗ್ಯವು ನಮಗೆ ಲಭಿಸಿದೆ
ಈ ಈ ಪ್ರವಾಸದಲ್ಲಿ ಸುಮಾರು 150 ಜನ ಭಕ್ತರು ಭಾಗಿಯಾಗಿದ್ದಾರೆ ಎಂದು *ಶ್ರೀ ಷ || ಬ್ರ|| ಅಭಿನವ ರುದ್ರಮುನಿ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಂಪಸಾಗರ ರವರು ತಿಳಿಸಿದ್ದಾರೆ.
ಈ ಸಮಯದಲ್ಲಿ ವಿದ್ವಾನ್ ಡಾ. ಶ್ರೀ ವೀರೇಶ್ ಹಿರೇಮಠ ಅವರು ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಷ|| ಬ್ರ|| ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಐಯ್ಯನ ಹಳ್ಳಿ. ರವರ ತಾಯಿ ಈರಮ್ಮ, ಭಕ್ತರಾದ ನಂಜುಂಡಿ ಸಂತೋಷ್, ಮಂಜಣ್ಣ, ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಾಲಯದ ಅರ್ಚಕರಾದ ಪೂಜಾರ್ ರಾಜಣ್ಣ , ಪೂಜಾರ್ ಅಭಿಷೇಕ್ ಇನ್ನು ಮುಂತಾದವರು ಇದ್ದರು