ಮೊಳಕಾಲ್ಮುರು ಕ್ಷೇತ್ರದ ಮುಸ್ಲಿಂ ರಿಂದ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ : ಡಾ.ಯೋಗೀಶ್ ಬಾಬು ಹೇಳಿಕೆಗೆ..! ಅಲ್ಪಸಂಖ್ಯಾತರಿAದ ಸಾಮೂಹಿಕ ರಾಜಿನಾಮೆಗೆ ಸಜ್ಜು
ಚಳ್ಳಕೆರೆ : ಮೊಳಕಾಲ್ಮುರು ಕ್ಷೇತ್ರದ ಮುಸ್ಲಿಂರಿAದ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ.ಯೋಗೀಶ್ ಬಾಬು ನೀಡಿರುವ ಹೇಳಿಕೆಗೆ ಈಡೀ ಮುಸ್ಲಿಂ ಸಮುದಾಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಇನ್ನೂ ಅಲ್ಪ ಸಂಖ್ಯಾತರೆಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ತೊರೆಯಲು ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ಮೊಲಕಾಲ್ಮೂರು ಕ್ಷೇತ್ರದಲ್ಲಿ ಭಾರತ್ ಜೋಡು ಕಾರ್ಯಕ್ರಮದ ಪೂರ್ವಭಾವಿ ಸಭೆಯಲಿ ಯೋಗೀಶ್ ಬಾಬುರವರ ಈ ಹೇಳಿಕೆಯಿಂದ ಈಡೀ ಕ್ಷೇತ್ರದ ಮುಸ್ಲಿಂ ಸಮುದಾಯ ಕಾಂಗ್ರೆಸ್ ವಿರುದ್ದ ಸೆಟೆದು ನಿಂತಿದೆ.
ಅಷ್ಟೆ ಅಲ್ಲವೆಂಬAತೆ ಪದಾಧಿಕಾರಿಗಳು ಪಕ್ಷವನ್ನು ತೊರೆದು ರಾಜಿನಾಮೆ ನೀಡಲು ತಾಲೀಮು ನಡೆಸುತ್ತಿದ್ದಾರೆ
ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದವರು ಭಾಗವಹಿಸಲು ಹೋದಾಗ ಡಾ.ಯೊಗೇಶ್ ಬಾಬು ಅಲ್ಪಸಂಖ್ಯಾತರ ಕೆಲ ಮುಖಂಡರೊAದಿಗೆ ವಾಗ್ವಾದ ನಡಿಸಿ ಈ ಹೇಳಿಕೆ ಹೇಳಿರುವುದರಿಂದ ಮನನೊಂದು ಕಾಂಗ್ರೇಸ್ ಪಕ್ಷದಲ್ಲಿ ಕಾರ್ಯಪ್ರವೃತ್ತರಾಗಿರುವ ಎಲ್ಲಾ ಘಟಕಗಳ ಹುದ್ದೆಗಳಿಗೆ ರಾಜಿನಾಮೆ ಕೊಡಲು ಅಲ್ಪಸಂಖ್ಯಾತರ ಸಮುದಾಯವು ತಿರ್ಮಾನ ತೆಗೆದು ಕೊಂಡಿರುತ್ತೇವೆ. ಈ ರಾಜಿನಾಮೆ ಪತ್ರಗಳನ್ನು ಸಂಬAಧಪಟ್ಟ ಘಟಕಗಳ ಅಧ್ಯಕ್ಷರುಗಳಿಗೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನೂ ರಾಜಿನಾಮೆಗೆ ಮುಂದಾದ ಮುಸ್ಲಿಂ ಸಮುದಾಯದ ಡಿ.ಸಿ.ಸಿ ಕಾರ್ಯದರ್ಶಿ ಎಸ್.ಖಾದರ್, ಮೊಳಕಾಲ್ಮುರು ತಾಲ್ಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ಜುಬೇರ್ ಅಹಮ್ಮದ್, ಐ.ಎನ್.ಟಿ.ಸಿ ಅಧ್ಯಕ್ಷ ಮೊಹಮ್ಮದ್ ವಸೀವುಲ್ಲಾ, ಮೊಳಕಾಲ್ಮುರು ತಾಲ್ಲೂಕು ಅಲ್ಪಸಂಖ್ಯಾತರ ಗೌರವ ಅಧ್ಯಕ್ಷ ಮಹಬೂಬ್ ಬಾಷ, ರಾಜ್ಯ ಸಂಚಾಲಕರು ಅಲ್ಪಸಂಖ್ಯಾತರ ರಾಜ್ಯ ಘಟಕದ ಎಂ. ಅಬ್ದುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯುವ ಕಾಂಗ್ರೇಸ್ ಮಹಬೂಬ್ ಬಾಷ ಡಿ.ಆರ್., ಪ್ರಧಾನ ಕಾರ್ಯದರ್ಶಿ ಅಲ್ಪಸಂಖ್ಯಾತರ ಘಟಕದ ಎನ್.ನವಾಜ್ , ಕಾಂಗ್ರೇಸ್ ಸೇವದಳದ ಜುಲ್ಲೀಖಾರ್ ಷರೀಫ್, ಈಗೇ ಹಲವರು ರಾಜಿನಾಮೆ ನೀಡಲು ಸಿದ್ದರಾಗಿದ್ದಾರೆ.