20ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ : ಶಾಸಕ ಟಿ.ರಘುಮೂರ್ತಿ ಉದ್ಘಾಟನೆ
ಚಳ್ಳಕೆರೆ : ತಾಲೂಕಿನ ಇಮಾಂಪುರ ಗ್ರಾಮದ ಬಳಿಯ ಅಲ್ಲಿಪೀರ್ ಮಠದ ಹತ್ತಿರ ನೂತನವಾಗಿ ನಿರ್ಮಿಸಿದ ಸಮುದಾಯ ಭವನದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನೆರೆವೆರಿಸಿದರು.


ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ 2020-21ನೇ ಸಾಲಿನ ಅಂದಾಜು 20ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟನೆ ಮಾಡಿದರು.


ಈ ಸಂದರ್ಭದಲ್ಲಿ ಅಲ್ಲಿಪೀರ್ ಮಠದ ಸ್ವಾಮೀಜಿಗಳಾದ ಶ್ರೀ ಗಾಜಿಪೀರ್ ಹುಸೇನ ಅಲಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್‌ಮೂರ್ತಿ, ಮುಖಂಡರುಗಳಾದ ದೊಡ್ಡರಂಗಪ್ಪ , ಗುಜ್ಜಾರಪ್ಪ, ಮತ್ತು ಸೈಯದ್ ನಾಗರಾಜ ಷಣ್ಮುಖಪ್ಪ ಮುಖಂಡರು, ಕಾರ್ಯಕರ್ತರುಗಳು, ಸಾರ್ವಜನಿಕರು, ಮಠದ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!