ಪ್ಲಾಸ್ಟಿಕ್ ಮುಕ್ತ ಮಾಡಲು ಶಾಲಾ ಮಕ್ಕಳಿಗೆ ಕಾಟನ್ ಬ್ಯಾಗ್ ವಿತರಣೆ
ಚಳ್ಳಕೆರೆ : ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ ಮತ್ಸಮುದ್ರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಹಾಗೂ ಪ್ಲಾಸ್ಟಿಕ್ ಮುಕ್ತ ಗ್ರಾಮಗಳಾಗಿ ಮಾಡಲು ಕಾಟನ್ ಬ್ಯಾಗ್ ವಿತರಣೆ ಕಾರ್ಯಕ್ರಮಕ್ಕೆ ಪರುಶುರಾಂಪುರ ಪಿಎಸ್‌ಐ ಕಾಂತರಾಜ್ ಚಾಲನೆ ನೀಡಿದರು.
ಚನ್ನಮ್ಮನಾಗತಿಹಳ್ಳ, ಪುರ್ಲೆಹಳ್ಳಿ, ಹಾಲಿಗೊಂಡನಹಳ್ಳಿ, ಚಟ್ಟೇಕಂಬ, ದ್ಯಾವರನಹಳ್ಳಿ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೋಟ್ ಪುಸ್ತಕ ವಿತರಣೆ ಮಾಡಿದ ಅವರು, ಈಡೀ ನಗರ ಸ್ವಚ್ಚ ನಗರ ಮಾಡಲು ಪಣ ತೊಟ್ಟ ನಮ್ಮ ಸರಕಾರದ ಆಶಯದಂತೆ ಪ್ರತಿ ಹಳ್ಳಿಯಲ್ಲೂ ತ್ಯಾಜ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಆದರಂತೆ ಇಂದು ನಾವು ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಮೂಲಕ ಅವರಿಗೆ ಕಾಟನ್ ಬ್ಯಾಗ್ ವಿತರಿಸುವುದರ ಮೂಲಕ ಪ್ಲಾಸ್ಟಿಕ್ ಮುಕ್ತಗೊಳಿಸಿದ್ದೆವೆ ಎಂದರು.
ಇನ್ನೂ ಮತ್ಸಮುದ್ರದ ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಚಲ್ಮೇಶ್ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಮಾಡಲು ನಾವೇಲ್ಲೂರು ಇಂದು ಕಂಕಣ ಬದ್ದರಾಗೋಣ, ತ್ಯಾಜಮುಕ್ತ, ಹಾಗೂ ಪ್ಲಾಸ್ಟಿಕ್ ಮುಕ್ತಕ್ಕೆ ನಾವೇಲ್ಲಾ ಶಾಲಾ ಹಂತದಿAದ ನಮ್ಮ ಮನೆಯಲ್ಲಿ ಯಾರು ಕೂಡ ಕ್ಯಾರಿ ಬ್ಯಾಗ್ ಬಳಸುವಾಗ ಪ್ಲಾಸ್ಟಿಕ್ ಬಳಸದೆ ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನಾಗಿ ಮಾಡೋಣ ಎಂದಿದ್ದಾರೆ.
ಈದೇ ಸಂಧರ್ಭದಲ್ಲಿ ಎ.ಎಸ್.ಐ.ಸಂಗೀತ, ರವೀಂದ್ರ, ಶಿವಣ್ಣ, ಮಹಾಂತೇಶ ಮಂಜುನಾಥ, ಹಾಲೇಶ್, ಪರಮೇಶ್ವರ, ರಾಘವೇಂದ್ರ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಎಸ್‌ಡಿಎಂಸಿ ಸದಸ್ಯರು ಎಲ್ಲಾ ಊರಿನ ಮುಖಂಡರು ಭಾಗವಹಿಸಿದ್ದರು