ಬರದ ನಾಡಿನಲ್ಲಿ ಜಲತ್ಸೋವ ಸಂಭ್ರಮ : ಶಾಸಕ ಟಿ.ರಘುಮೂರ್ತಿ, ತಹಶೀಲ್ದಾರ್ ಎನ್. ರಘುಮೂರ್ತಿ ರವರಿಂದ ಬಾಗೀನ ಅರ್ಪಣೆ
ಚಳ್ಳಕೆರೆ ; ಬರದ ನಾಡಿನಲ್ಲಿ ಬರತ್ಸೋವ ಆಚರಿಸುವ ಜನರು ಇಂದು ಜಲತ್ಸೋವ ಆಚರಿಸುವ ಮೂಲಕ ರೈತರಲ್ಲಿ ಸಂಭ್ರಮ ಮನೆ ಮಾಡಿದೆ,
ಚಳ್ಳಕೆರೆ ಎಂದರೆ ತಟ್ಟನೆ ನೆನಪಾಗೊದು ಬಿಸಿಲ ಜಳ, ಹೊಣ ಹವೆ ಇವುಗಳೂ ಇಲ್ಲಿನ ಜಾಲ್ವಂತ ಸಮಸ್ಯೆಗಳಾಗಿ ಬಿಂಬಿತವಾಗಿದ್ದವು ಆದರೆ ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ವರುಣರಾಯನ ಕೃಪೆಯಿಂದ ಈಡೀ ಬಯಲು ಸೀಮೆ ಹಸಿರುಕರುಣ ದತ್ತ ಮುಖ ಮಾಡಿದೆ
ಇನ್ನೂ ಬಯಲು ಸೀಮೆಯ ಸುಮಾರು 100 ಕೆರೆಗಳು ಬತ್ತಿ ಕೊಳವೆ ಬಾವಿಗಳ ಆಶ್ರಯ ಪಡೆಯುವಂತಾಗಿತ್ತು ಆದರೆ ಅಕಾಲಿಕ ಮಳೆಗೆ ಬತ್ತಿದ ಕೆರೆಗಳಲ್ಲಿ ನೀರು ತುಂಬಿ ಕೋಡಿ ಬಿದ್ದು ಈಡಿ ತಾಲೂಕು ಹಸಿರುಕರಣದತ್ತ ಮುಖ ಮಾಡಿದೆ.
ಅದರಂತೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅನ್ನೊಂದನೇ ಕೆರೆ ಬಾಗೀನ ಅರ್ಪಣೆಯ ಕಾರ್ಯಕ್ರಮದ ನನ್ನಿವಾಳ ಕೆರೆಗೆ ಬಾಗೀನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಭಾಗದ ರೈತರ ಸಂತಸಕ್ಕೆ ಪರವೇ ಇಲ್ಲ ಹಲವು ದಿನಗಳ ಕಾಲದ ಕನಸು ಈಗ ಈಡೇರಿದಂತಿದೆ ಇನ್ನೂ ಬಯಲು ಸೀಮೆ ಎಂಬ ಹಣೆ ಪಟ್ಟಿ ಕಳಚಿ ಬಿಳಲಿದೆ ಎಂದರು.

ಇನ್ನೂ ತಹಶೀಲ್ದಾರ್ ಎನ್.ರಘುಮೂರ್ತಿ ಭಾಗೀನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನನ್ನಿವಾಳ ಗ್ರಾಮ ಈಡೀ ಜಿಲ್ಲೆಯಲ್ಲೆ ಅತೀ ದೊಡ್ಡ ಹಟ್ಟಿಗಳು ಇರುವ ಗ್ರಾಮ ಇಂತಹ ಗ್ರಾಮದಲ್ಲಿ ಕುಡಿಯುವ ನೀರು ಬಹು ದೊಡ್ಡ ಸವಲಾಗಿ ಪರಿಣಮಿಸಿತ್ತು, ಆದರೆ ಈಗ ಕೆರೆ ತುಂಬಿ ಕೋಡಿ ಬಿದ್ದು ಈ ಭಾಗದ ರೈತರು ಇನ್ನೂ ಆತಂಕ ಪಡುವ ಅಗತ್ಯವಿಲ್ಲ ಎಂದರು.


ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಕೆರೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿಗಳಾದ ಎನ್. ರಘುಮೂರ್ತಿ, ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರಭಾವತಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್‌ಮೂರ್ತಿ, ಗ್ರಾಮ ಪಂಚಾಯತ್ ಸದಸ್ಯ ಅಪ್ಪಣ್ಣ, ತಿಮ್ಮರಾಯಪ್ಪ, ಪಾರಿಜಾತ, ಶಿವಮ್ಮ ರಾಜಣ್ಣ, ದೊಡ್ಡಬಯ್ಯಣ್ಣ, ಗೀತಮ್ಮ, ಮುಖಂಡರುಗಳಾದ ರಾಮಣ್ಣ, ಶಿವಣ್ಣ, ರಾಜಣ್ಣ, ಚಿದಾನಂದಪ್ಪ, ಮಾರ್ಕಂಡಯ್ಯ, ಓಬಣ್ಣ, ಬೊಮ್ಮಯ್ಯ, ಚಿನ್ನಸ್ವಾಮಿ, ಕೊಂಡಯ್ಯ, ಮಹೇಶ್ ಮತ್ತು ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!