ಬೆಳೆ ಹಾನಿ, ಬ್ಯಾರೇಜ್ ಗಳಿಗೆ ಹಾಗೂ ಸಂತ್ರಸ್ಥರ ಕುಟುಂಬಗಳಿಗೆ ಬೇಟಿ ನೀಡಿದ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ವರುಣರಾಯನ ಆರ್ಭಟಕ್ಕೆ ರಾಜ್ಯದಲ್ಲಿ ಅಕ್ಷರಶಃ ಜನರು ಹೈರಾಣಾಗಿದ್ದಾರೆ.
ಅದರಂತೆ ಕ್ಷೇತ್ರದ ಶಾಸಕ ಟಿ.ರಘುಮೂತೀ ಕ್ಷೇತ್ರ ವೀಕ್ಷಣೆ ಮಾಡಿ ತಾಲೂಕಿನ ವಿವಿಧೆಡೆ ಬೇಟಿ ನೀಡಿ ಸಂಕಷ್ಟದಲ್ಲಿ ಇರುವ ಕುಟುಂಬಗಳ ಬಳಿ ತೆರೆಳಿ ಅವರಿಗೆ ಸಾಂತ್ವನ ಹೇಳುವ ಮೂಲಕ ದೈರ್ಯ ತುಂಬಿದ್ದಾರೆ.
ಇನ್ನು
ತಾಲೂಕಿನ ಹಾಲಗೊಂಡನಹಳ್ಳಿ 21 ಸಂತ್ರಸ್ಥರ ಕುಟುಂಬಗಳು ಹಾಗೂ ಸೂರನಹಳ್ಳಿ ನದಿ ಪಾತ್ರದ 8 ಕುಟುಂಬಗಳ ಸಂತ್ರಸ್ಥರ ಬಳಿ ಬೇಟಿ ನೀಡಿ ಯಾವುದೇ ಕಾರಣಕೂ ದೃತಿಗೇಡುವುದು ಬೇಡ ನಿಮಗೆ ಅವಶ್ಯವಾದ ಮೂಲ ಭೂತ ಸೌಕರ್ಯಗಳ ಬಗ್ಗೆ ವ್ಯವಸ್ಥೆ ಕಲ್ಪಿಸಲಾಗುವುದು ಮಳೆ ಕಡಿಮೆಯಾಗುವರೆಗೂ ರಕ್ಷಣೆ ನೀಡಲಾಗುತ್ತದೆ,
ಅದೇ ರೀತಿಯಲ್ಲಿ ಜನ್ನೆನಹಳ್ಳಿ ಗ್ರಾಮದ ರೈತ ಕೃಷಿ ಭೂಮಿಯಲ್ಲಿ ಬೆಳೆದ ಈರುಳ್ಳಿ ನೀರಿನಲ್ಲಿ ಮುಳುಗಿದೆ, ಕೋಳಿ ಪಾರಂಗೆ ಹಾನಿಯಾಗಿದೆ, ಸ್ಥಳಕ್ಕೆ ಕೃಷಿ ಇಲಾಕೆ ಕಂದಾಯ ಇಲಾಖೆಯೊಂದಿಗೆ ಬೇಟಿ ನೀಡಿ ಪರಿಹಾರಕ್ಕೆ ಕ್ರಮವಹಿಸಿದ್ದೆನೆ, ಆದೇ ರೀತಿಯಲ್ಲಿ ಹರವಿಗೊಡಂನಹಳ್ಳಿ ಬ್ಯಾರೇಜ್‌ಗೆ ಇಂಜಿನಿಯಾರ್ ಜೋತೆ ಬೇಟಿ ನೀಡಿ ಮುಂಜಾಗ್ರತಾ ಕ್ರಮ ವಹಿಸಿದ್ದೆನೆ ಎಂದು ಶಾಸಕ ಟಿ.ರಘುಮೂರ್ತಿ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊAಡಿದ್ದಾರೆ
.