ಬೋರ್ಗರೆತ ನೀರಿನ ಸೇಳೆತ ಕಂಡು ತಾವೇ ಸ್ವತಃ ಪೋಟೋ ಕ್ಲಿಕಿಸಿಕೊಂಡ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಹರವಿಗೊಂಡನಹಳ್ಳಿ ಬ್ಯಾರೇಜ್ ವೀಕ್ಷಣೆಗೆ ತಮ್ಮ ಬೆಂಬಲಿಗರೊAದಿಗೆ ತೆರಳಿದ ಶಾಸಕ ಟಿ.ರಘುಮೂರ್ತಿ ನೀರಿನ ಭೋರ್ಗರೆತ ನೋಡಿದ ಬಳಿಕ ತಾವೇ ಸ್ವತಃ ತಮ್ಮ ಮೊಬೈಲ್ ಮೂಲಕ ಪೋಟೋ ಕ್ಲಿಕಿಸಿಕೊಳ್ಳುವುದರ ಮೂಲಕ ಕೆಲ ಕಾಲ ವಿಡಿಯೋ ಚಿತ್ರಿಕರಣ ಮಾಡಿ ಮನಸೋರೆಗೊಂಡಿದ್ದಾರೆ.


ಇನ್ನೂ ಸ್ಥಳದಲ್ಲಿ ಇದ್ದ ತಹಶೀಲ್ದಾರ್ ಹಾಗೂ ಹಲವು ಬೆಂಬಲಿಗರೊAದಿಗೆ ಬಯಲು ಸೀಮೆ ಹಸಿರುಕರಣಕ್ಕೆ ನಾಂದಿ ಹಾಡಿದ ಪ್ರಕೃತಿ ಭೂತಾಯಿಯನ್ನು ನೆನೆದು ಸಂತಸ ವ್ಯಕ್ತಪಡಿಸಿದ್ದಾರೆ.


ನನ್ನ ಶಾಸಕ ಅವಧಿಯಲ್ಲಿ ಸರಕಾರದ ಕಿವಿ ಇಂಡಿ ಬಯಲು ಸೀಮೆ ಜನತೆಗೆ ನೀರುಣಿಸುವ ಮಹತ್ವ ಕಾರ್ಯಕ್ಕೆ ಹತ್ತು ವರ್ಷಗಳ ಹಿಂದೆ ಕನಸು ಕಂಡಿದ್ದೆ, ಅಂದು ಈ ಬ್ಯಾರೇಜ್ ಪರಿಕಲ್ಪನೆಯಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಬ್ಯಾರೇಜ್ ಕಟ್ಟಲು ಅನುಕೂಲವಾಗಿತ್ತು,

ಅದರಂತೆ ಇಂದು ಬ್ಯಾರೇಜ್ ತುಂಬಿ ಹರಿಯುವ ಈ ವೇದಾವತಿ ನದಿ ನೋಡಿದರೆ ಹತ್ತು ವರ್ಷದ ಮಹತ್ವದ ಹೆಜ್ಜೆಗಳು ನೀರಾವರಿಗೆ ಇಟ್ಟ ಗುರಿ ಇಂದು ಈಡೇರಿದಂತಾಗಿದೆ ಎಂದು ಮನದಾಳದ ಮಾತುಗಳನ್ನು ಹಂಚಿಕೊAಡಿದ್ದಾರೆ.

About The Author

Namma Challakere Local News
error: Content is protected !!