ಡಿಜೆಗೆ ಅನುಮತಿ ಇಲ್ಲ : ಡಿವೈಎಸ್ಪಿ ರಮೇಶ್ ಕುಮಾರ್ ಖಡಕ್ ಸೂಚನೆ
ಚಳ್ಳಕೆರೆ : ಭಾರತ ಸಂಸ್ಕೃತಿ ಆಚಾರ ವಿಚಾರ ಸೇರಿದಂತೆ ಭಕ್ತಿ ಭಾವದಿಂದ ಉತ್ತಮ ಬಾಂಧವ್ಯ ಹೊಂದಿದೆ ಆದ್ದರಿಂದ ಹಿಂದೂ ಮಹಾಗಣಪತಿಯ ವೇಳೆ ಭಕ್ತಿಯಿಂದ ವಿಸರ್ಜನೆ ಮಾಡಿ ಡಿವೈಎಸ್ಪಿ ರಮೇಶ್ ಕುಮಾರ್ ಹೇಳಿದ್ದಾರೆ.


ತಾಲೂಕಿನ ನಾಯಕನಹಟ್ಟಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು ಮಹಾಗಣಪತಿ ವಿಸರ್ಜನೆ ಇರುವುದರಿಂದ ಮೊದಲನೆದಾಗಿ ಡಿಜೆ ಬಳಸುವಂತಿಲ್ಲ, ಪ್ರಚೋದನೆ ಘೋಷಣೆಯನ್ನು ಕೂಗುವಂತಿಲ್ಲ ಯಾವುದೇ ಅಹಿತಕರ ಘಟನೆ ನಡೆಯದಂತೆ ಜವಾಬ್ದಾರಿತವಾಗಿ ಭಾಗವಹಿಸಿ ಖುಷಿಯಿಂದ ಹಿಂದೂ ಮಹಾ ಗಣಪತಿಯನ್ನು ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.


ಈ ವೇಳೆ ತಳಕು ವಲಯ ಸರ್ಕಲ್ ಇನ್ಸ್ಪೆಕ್ಟರ್ ಕೆ.ಸಮಿವುಲ್ಲಾ ಮಾತನಾಡಿ ವರ್ಷಕ್ಕೆ ಒಂದು ಬಾರಿ ಗಣಪತಿ ಹಬ್ಬವನ್ನು ಆಚರಿಸುತ್ತೇವೆ ಈ ಹಬ್ಬವನ್ನು ಜವಾಬ್ದಾರಿತವಾಗಿ ಖುಷಿಯಿಂದ ಆಚರಿಸಬೇಕು ಹಿಂದೂ ಮಹಾಗಣಪತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ನೋಡಿಕೊಳ್ಳಬೇಕು, ಆಯೋಜಕರೆ ನೇರವಾಗಿ ಹೊಣೆ ಹೊರಬೇಕಾಗುತ್ತದೆ ಯಾವುದೇ ಜಗಳವಾದರೆ ಮುಲಾಜು ಇಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು,


ಖುಷಿಯಿಂದ ಅಷ್ಟೇ ಅಲ್ಲ ಜವಾಬ್ದಾರಿಯುತವಾಗಿ ಗಣಪತಿ ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.
ಈ ವೇಳೆ ನಿಕಟ ಪೂರ್ವ ಅಧ್ಯಕ್ಷÀ ಎಂವೈಟಿ.ಸ್ವಾಮಿ ಮಾತನಾಡಿ ಹಿಂದೂ ಮಹಾಗಣಪತಿ ವಿಸರ್ಜನೆ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುತ್ತದೆ ಪಾದಗಟ್ಟೆಯಿಂದ ತೇರು ಬೀದಿ ಒಳಮಟ್ಟ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ನಂತರ ಅಂಬೇಡ್ಕರ್ ಸರ್ಕಲ್ ಮೂಲಕ ಹಿರೆಕೆರೆಯ ದೊಡ್ಡ ಕೆರೆೆಯಲ್ಲಿ ಹಿಂದೂ ಮಹಾ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ನಾಯಕನಹಟ್ಟಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜೆ.ಶಿವರಾಜ್, ಪಿಎಸ್‌ಐ ಎಸ್.ಬಸವರಾಜ್, ಜಾಕಿರ್ ಹುಸೇನ್, ಮಾಜಿ ತಾಲೂಕು ಪಂಚಾಯತಿ ಸದಸ್ಯ ಎಸ್ ಬಸವರಾಜ್, ಬೆಸ್ಕಾಂ ಶಾಖೆಧಿಕಾರಿ ಎನ್‌ಬಿ.ಬೋರಣ್ಣ, ವಿಷ್ಣು, ಬಾಬು, ವೆಂಕಟೇಶ್, ಭೀಮ, ಅಪ್ಪು, ಠಾಣೆಯ ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು

Namma Challakere Local News
error: Content is protected !!