ಚಳ್ಳಕೆರೆ : 36 ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿದ ಅಂಗನವಾಡಿ ಶಿಕ್ಷಕಿ ದೇವಿರಮ್ಮ ವಯೋನಿವೃತ್ತಿ

ಚಳ್ಳಕೆರೆ : ಅಂಗನವಾಡಿ ಶಿಕ್ಷಕಿ ದೇವಿರಮ್ಮ 36 ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಮೇಲ್ವಿಚಾರಕಿ ಎಂ ಸೌಮ್ಯ ಹೇಳಿದ್ದಾರೆ.


ನಾಯಕನಹಟ್ಟಿ ಪಟ್ಟಣದ ಅಂಗನವಾಡಿ. ಜಿ.ಕೇಂದ್ರದಲ್ಲಿ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರು ಪುಣ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ, ಅಂಗನವಾಡಿ ಶಿಕ್ಷಕಿಯರಿಗೆ ಸೂಚನೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದರು, ಪವಾಡ ಪುರುಷ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವುದು ಪುಣ್ಯ ಕಾರ್ಯ ಇಲ್ಲಿ ಮಾಡಿದವರಿಗೆ ನೀಡು ಭಿಕ್ಷೆ, ಕಾಯಕವೇ ಕೈಲಾಸ ಎಂಬ ಘೋಷ ವಾಕ್ಯದಂತೆ ಉತ್ತಮವಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಪಡೆದಿರುವುದು ಸಂತಸ ತಂದಿದೆ ಎಂದರು.


ಈ ಸಂದರ್ಭದಲ್ಲಿ ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶೇಷಾದ್ರಿ ನಾಯಕ್, ಚೈತ್ರ, ಅಂಗನವಾಡಿ ಶಿಕ್ಷಕಿಯರಾದ ವಿಮಲಾಕ್ಷಿ ,ನಾಗರತ್ನಮ್ಮ, ವೀಣಾ, ಚಂದ್ರಮತಿ, ಮಂಜುಳಾ, ರಮ್ಯಾ, ಸುಜಾತ, ಮಹಾಂತಮ್ಮ, ಶಾರದಮ್ಮ, ರತ್ನಮ್ಮ, ಸರಸ್ವತಿ ,ಬೋರಮ್ಮ, ಯಶೋದಮ್ಮ, ಮಮತಾ, ಶೈಲ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!