ದೋಷ ರಹಿತ ಮತದಾರರ ಪಟ್ಟಿ, ಪಾರದರ್ಶಕ ಮತದಾನಕ್ಕೆ ದಾರಿ : ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ದೋಷ ರಹಿತ ಮತದಾರರ ಪಟ್ಟಿ ಪಾರದರ್ಶಕ ಮತದಾನಕ್ಕೆ ದಾರಿ ಮಾಡಿಕೊಡುತ್ತದೆ ಆದುದರಿಂದ ಮತದಾರರ ಪಟ್ಟಿಯನ್ನು ಯಾವುದೇ ಲೋಪವಿಲ್ಲದಂತೆ ಮತ್ತು ನಕಲಿ ಮತದಾರರ ಹೆಸರು ನಮೂದಾಗದಂತೆ ಎಚ್ಚರ ವಹಿಸಬೇಕಾಗಿರುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.


ಅವರು ತಾಲೂಕ ಕಚೇರಿಯಲ್ಲಿ ತಾಲೂಕು ನ್ಯಾಯಬೆಲೆ ಅಂಗಡಿಯ ಮಾಲೀಕರೊಂದಿಗೆ ಆಧಾರ್ ಮತ್ತು ಚುನಾವಣಾ ಗುರುತಿನ ಚೀಟಿಯ ಜೋಡಣೆಯ ಪ್ರತ್ಯಕ್ಷಿತಾ ತರಬೇತಿಯಲ್ಲಿ ಮಾತನಾಡಿ ಸಾರ್ವತ್ರಿಕ ಚುನಾವಣೆಗಳಲ್ಲಿ ಚುನಾವಣಾ ಪ್ರಕ್ರಿಯೆಗಳಿಗಿಂತ ಚುನಾವಣಾ ಪೂರ್ವದ ತಯಾರಿಗಳು ಬಹಳ ಮುಖ್ಯವಾಗುತ್ತವೆ.
ಆದುದರಿಂದ ಪ್ರತಿಯೊಬ್ಬ ನಾಗರಿಕರು ಕೂಡ ತಮ್ಮ ಆಧಾರ್ ಸಂಖ್ಯೆ ಮತ್ತು ಎಪಿಕ್ ನಂಬರ್ ಅನ್ನು ವೋಟರ್ ಆಪ್ ಮೂಲಕ ಜೋಡಣೆ ಮಾಡಬೇಕು, ಅದರಲ್ಲೂ ಮತದಾರರ ಪಟ್ಟಿಯ ಲೋಪಗಳಿಲ್ಲದಿದ್ದರೆ ನಿರಾತಕವಾಗಿ ಚುನಾವಣೆಗಳನ್ನು ನಡೆಸಬಹುದು.


ಗೊಂದಲಗಳನ್ನು ದೂರ ಮಾಡಬಹುದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬಹುದು ಈ ದಿಸೆಯಲ್ಲಿ ಪ್ರತಿಯೊಬ್ಬ ನ್ಯಾಯಬೆಲೆ ಅಂಗಡಿಗೆ ಮಾಲೀಕರು ಮೊದಲು ನಮ್ಮ ಮತ್ತು ತಮ್ಮ ಕುಟುಂಬದ ಆಧಾರ್ ಕಾರ್ಡ್ ಮತ್ತು ಎಪಿಕ್ ಜೋಡಣೆಯಾಗಬೇಕು ತದನಂತರ ಕಾರ್ಡ್ದಾರದ ಕುಟುಂಬದಲ್ಲಿರುವAತ ಸದಸ್ಯರ ಆಧಾರ್ ಕಾರ್ಡ್ ಮತ್ತು ಎಪಿಕ್ ಕಾರ್ಡನ್ನು ಜೋಡಣೆಯನ್ನು ಕಡ್ಡಾಯವಾಗಿ ಮಾಡಬೇಕು ಪಡಿತರವನ್ನು ವಿತರಿಸುವ ಮೊದಲು ಈ ಸತ್ಕಾರ್ಯವಾಗಬೇಕು
ಈ ಒಂದು ಬೃಹತ್ ಅಭಿಯಾನಕ್ಕೆ ತಾಲೂಕ ಆಡಳಿತ ಜೊತೆ ಈ ತಾಲೂಕಿನ ಜನತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಮಧುಸೂದಾನ ಮಾತನಾಡಿ ಆಧಾರ್ ಮತ್ತು ಎಪಿಕ್ ಜೋಡಣೆ ಕಾರ್ಯ ವಿಧಾನವು ತುಂಬಾ ಸರಳವಾಗಿದ್ದು ಇದಕ್ಕೆ ಸಂಬAಧಿಸಿದ ತಾಂತ್ರಿಕ ನೆರವನ್ನು ಇಲಾಖೆಯಿಂದ ನೀಡಲಾಗುತ್ತದೆ, ಆದುದರಿಂದ ಪ್ರತಿ ನ್ಯಾಯಬೆಲೆ ಅಂಗಡಿಗೆ ಗುರಿ ನಿಗಧಿ ಪಡಿಸಲಾಗಿದ್ದು ಉದಾಸೀನ ಮಾಡದೆ ಈ ಗುರಿಯನ್ನು ಸಾಧಿಸಬೇಕು ಆದಷ್ಟು ಬೇಗ ತಾಲೂಕಿನಲ್ಲಿ ಈ ಒಂದು ಕಾರ್ಯ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು


ಈದೇ ಸಂಧರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಆಹಾರ ಶಿರಸ್ತೇದಾರ್ ಶಿವಾಜಿ, ಶ್ರೀನಿವಾಸ್, ಚುನಾವಣೆ ಶಾಖೆಯ ಶಿರಸ್ತೆದಾರ್ ಶಕುಂತಲಾ, ಪ್ರಕಾಶ್, ಓಬಳೇಶ್, ಇನ್ನೂ ಹಲವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!