ಚಳ್ಳಕೆರೆ : ಆಗಸ್ಟ್ 20 ರಂದು ನಗರದಲ್ಲಿ ಪವರ್ ಕಟ್
ಚಳ್ಳಕೆರೆ : ಆಗಸ್ಟ್ 20ರ ಶನಿವಾರದಂದು ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯ ಚಳ್ಳಕೆರೆ 66/11ಕೆವಿ, ವಿ.ವಿ.ಕೇಂದ್ರದಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ, 66/11ಕೆವಿ, ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆಯಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ (ಎಫ್-01 ಪಾವಗಡ ರಸ್ತೆ, ಎಫ್-02 ಬೆಂಗಳೂರು ರಸ್ತೆ, ಎಫ್-03 ದುರ್ಗಾವರ, ಎಫ್-04 ರೆಡ್ಡಿಹಳ್ಳಿ, ಎಫ್-05 ಸಿದ್ದಾಪುರ.
ಎಫ್-06 ನನ್ನಿವಾಳ, ಎಫ್-07 ಸೂಮಗುದ್ದು ರಸ್ತೆ, ಎಫ್-08 ಬಳ್ಳಾರಿ ರಸ್ತೆ. ಎಫ್-09 ಗಾಂಧಿನಗರ, ಎಫ್-11 ವೀರದಿಮ್ಮನಹಳ್ಳಿ ಎನ್.ಜೆ.ವೈ ಮತ್ತು ಎಫ್-12 ಕುಡಿಯುವ ನೀರು) ಬೆಳಗ್ಗೆ 10:00 ಗಂಟೆಯಿAದ ಸಂಜೆ 06:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಎಲ್ಲಾ ಗ್ರಾಹಕರು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು:
ಚಳ್ಳಕೆರೆ ಟೌನ್ ವ್ಯಾಪ್ತಿಯ ಎಲ್ಲಾ ನಗರ ಪ್ರದೇಶಗಳು, ಬೆಂಗಳೂರು ರಸ್ತೆ, ಬಳ್ಳಾರಿ ರಸ್ತೆ, ಪಾವಗಡ ರಸ್ತೆ ಹಾಗೂ ಬುಡ್ನಹಟ್ಟಿ ಗ್ರಾಮ ಪಂಚಾಯ್ತಿ, ನಗರಂಗೆರೆ ಗ್ರಾಮ ಪಂಚಾಯ್ತಿ, ನನ್ನಿವಾಳ ಗ್ರಾಮ ಪಂಚಾಯ್ತಿ, ವ್ಯಾಪ್ತಿಯ ಗ್ರಾಮಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯಾರ್ ರಾಜು ಹೇಳಿದ್ದಾರೆ.