ಸ್ವಾತಂತ್ರö್ಯ ಹೋರಾಟಗಾರರ ತ್ಯಾಗ ಬಲಿದಾನ ನೆನೆಯುವ ಸುದೀನವಾಗಬೇಕಿದೆ : ಮುಖ್ಯ ಶಿಕ್ಷಕ ಹೆಚ್.ಹನುಮಂತಪ್ಪ
ಚಳ್ಳಕೆರೆ : ಇಂದಿನ ಯುವ ಜನತೆಗೆ ಸ್ವಾತಂತ್ರ‍್ಯ ಹೋರಾಟದ ಮಹತ್ವ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 75ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಕಡೆ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಆಯೋಜಿಸಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಪಿ.ಗೊಂವಿದರಾಜು ಹೇಳಿದ್ದಾರೆ
ತಾಲೂಕಿನ ಬಂಡೆಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ವಾತಂತ್ರö್ಯದ ಅಮೃತ ಮಹೋತ್ಸವ ಅಂಗವಾಗಿ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು, ಸ್ವಾತಂತ್ರ‍್ಯ ನಂತರ ದೇಶ ಬಲಿಷ್ಠವಾಗಿ ಬೆಳೆದು ನಿಂತಿದೆ. ದೇಶದ ಹಳ್ಳಿಗಳಲ್ಲಿ ಕೂಡ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರನ್ನು ಕಾಣಬಹುದು, ಸ್ವಾತಂತ್ರö್ಯ ಹೋರಾಟ ನೆಡೆಸಿದ ಹೋರಾಟಗಾರರ ತ್ಯಾಗ ಬಲಿದಾನವು ಇತಿಹಾಸದ ಪುಟದಲ್ಲಿ ದಾಖಲಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಶಿಕ್ಷಕ ಹೆಚ್.ಹನುಮಂತಪ್ಪ ಮಾತನಾಡಿ, ಬ್ರೀಟೀಷರ ಆಳ್ವಿಕೆಯನ್ನು ಕೊನೆಗಾಣಿಸಿ ಮಹಾತ್ಮ ಗಾಂದಿಜೀ, ಹಾಗೂ ನೂರಾರು ರಾಷ್ಟç ನಾಯಕರು ಜೀವನವನ್ನೆ ಮುಡುಪಾಗಿಟ್ಟು ತ್ಯಾಗ ಬಲಿದಾನ ನೀಡಿದರು. ಭಾರತ ದೇಶ ಸ್ವಾತಂತ್ರö್ಯ 75ನೇ ಅಮೃತ ಮಹೋತ್ಸವ ಸಂಭ್ರಮಾಚರಣೆ ಈ ಸಂಧರ್ಭದಲ್ಲಿ ನಾವೇಲ್ಲಾರೂ ಒಂದೇ ಒಗ್ಗಟ್ಟಾಗಿ ಮಕ್ಕಳಲ್ಲಿ ರಾಷ್ಟçಪ್ರೇಮ, ದೇಶಭಕ್ತಿ ಬೆಳೆಸಬೆಕಾದ ಅನಿವಾರ್ಯವಿದೆ ಎಂದರು.
ಈದೇ ಸಂಧರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರಭಾವತಿ, ಪಿಡಿಓ ಪಾಲಯ್ಯ, ದೊರೆನಾಗರಾಜ್, ಜಯಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಜಿ.ತಿಪ್ಪೆಸ್ವಾಮಿ, ಗೀತಮ್ಮ ಪಾಪಣ್ಣ, ಗ್ರಾಮದ ಮುಖಂಡ ರಾಮಣ್ಣ, ಓಬಯ್ಯ, ಗಿರಿಜಾ, ಮಧುಕಲಾ, ಪಿ.ನಾಗರಾಜ್, ತಿಪ್ಪೆಸ್ವಾಮಿ, ಪಾಪಯ್ಯ, ಶಿಕ್ಷಕ ನಾಗರಾಜ್, ಇತರರು ಪಾಲ್ಗೊಂಡಿದ್ದರು.