ಶ್ರೀರಾಮುಲು ನಿನ್ನ ರಾಜಾಕೀಯ ತಂತ್ರಗಾರಿಕೆ ಇಲ್ಲಿ ನಡೆಯೊಲ್ಲ : ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ ಆರೋಪ
ಚಳ್ಳಕೆರೆ : ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಮುಖ್ಯ ಮಂತ್ರಿಯಾಗಿ ಕಾಣಲು ನನಗೂ ಇಚ್ಚೆ ಇದೆ ಎಂದು ದೊಡ್ಡ ದೊಡ್ಡ ನಾಯಕರ ಬಗ್ಗೆ ಮಾತನಾಡಿದರೆ ದೊಡ್ಡವನಾಗುವ ಆಸೆ ಕಂಡಿರುವ ಶ್ರೀರಾಮುಲು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಎದುರಾಳಿಯಾಗಿ ನಿಂತು ಈಗ ಚುನಾವಣೆ ಸಮೀಪ ಇರುವುದರಿಂದ ಇಂತಹ ಹೇಳಿಕೆ ನೀಡಿದರೆ ಕುರುಬರ ಮತ ಹೊಡೆಯುವ ಹುನ್ನಾರ ಮಾಡಿದಂತಿದೆ ಎಂದು ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಶ್ರೀರಾಮುಲು ನಿನ್ನ ರಾಜಾಕೀಯ ತಂತ್ರ ಇಲ್ಲಿ ನಡೆಯೊಲ್ಲ, ನಿನ್ನ ಬಂಡವಾಳ ಕ್ಷೇತ್ರದ ಜನತೆಗೆ ಗೊತ್ತಿದೆ, ಆಡಳಿತ ಪಕ್ಷದ ಸಚಿವರಾಗಿ ಹಿಂದೂಳಿದ ಪ್ರದೇಶದಿಂದ ಪ್ರತಿನಿಧಿಸಿರುವ ನಿನ್ನ ಅಭಿವೃದ್ದಿ ಏನು ಎಂಬುದು, ಬಯಲು ಸೀಮೆಯ ಜನಕ್ಕೆ ತಿಳಿದಿದೆ. ನಿನಗೆ ಯಾವ ಕ್ಷೇತ್ರದಲ್ಲಿ ಸ್ಥಾನ ಮಾನವಿಲ್ಲ, ಮತದಾರರ ಓಲೈಕೆ ನಿಲ್ಲಿಸು ನಿನ್ನ ರಾಜಾಕೀಯ ತಂತ್ರಗಾರಿಕೆ ಇಲ್ಲಿ ನಡೆಯಲ್ಲ, ಬಳ್ಳಾರಿಯಿಂದ ವಲಸೆ ಬಂದ ಶ್ರೀರಾಮುಲು ಸುಳ್ಳು ಶ್ರೀರಾಮುಲು, ಬರೀ ಸುಳ್ಳು, ಡೊಂಗಿ ಭಾಷಣಗಳ ಮೂಲಕ ಮತದಾರರನ್ನು ದಿಕ್ಕು ತಪ್ಪಿಸಿ ಹಣದ ಆಮೀಷ ಹೊಡ್ಡುವ ಮೂಲಕ ತಂತ್ರಗಾರಿಕೆ ಮಾಡುತ್ತಿದ್ದಾನೆ ಎಂದು ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ ಆರೋಪ ಮಾಡಿದ್ದಾರೆ.
ಕ್ಷೇತ್ರಕ್ಕೆ ಭದ್ರಾ ನೀರು. ತುಂಗಾ ಭ್ರದ್ರಾ ಹಿನ್ನಿರು ಯೋಜನೆ ನಾನೆ ತಂದಿದ್ದು ಎಂದು ಹೇಳುತ್ತಾನೆ ಆದರೆ ಈಗ ಉದ್ಘಾಟಿಸುವ ಕಟ್ಟಡಗಳು ನಾನು ಶಾಸಕ ನಾಗಿದ್ದ ಸಂಧರ್ಭದಲ್ಲಿ ಮಂಜೂರು ಮಾಡಿಸಿ ಕಾಮಾಗಾರಿಗೆ ಚಾಲನೆ ನೀಡಿದ್ದೆ ಆದರೆ ಈಗ ಕ್ಷೇತ್ರದ ಜನತೆಗೆ ನಾನೇ ಅನುದಾನ ತಂದು ಅಭಿವೃದ್ದಿ ಮಾಡಿದ್ದೆನೆ ಎಂದು ಬಿಂಬಿಸಿಕೊಳ್ಳುತ್ತಾನೆ.
ಸಿದ್ಧರಾಮಯ್ಯನವರ ದೊಡ್ಡ ಮಟ್ಟದ ವ್ಯಕ್ತಿ ಇವರಲ್ಲ, ಸಿದ್ಧರಾಮಯ್ಯ ನವರ ಹುಟ್ಟು ಹಬ್ಬದ ಅಮೃತ ಮಹೋತ್ಸವದ ಜನ ಸಾಗರವನ್ನು ನೋಡಿ ಬಿಜೆಪಿ ನಾಯಕರು ದಂದಾಗಿದ್ದಾರೆ,
ಎಸ್ಟಿ ಮೀಸಲಾತಿ ತರುತ್ತೆನೆ ಎಂದು ಸುಳ್ಳು ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದ ಇವರು ಶಾಸಕ ಸ್ಥಾನ ಮುಗಿಯುವ ವೇಳೆ ಬಂದರು ಕೂಡ ಇವರು ಮೀಸಲಾತಿ ಕೊಡಸಲು ಮುಂದೆ ಬಂದಿಲ್ಲ, ವಾಲ್ಮಿಕಿ ಗುರು ಪೀಠದ ಸ್ವಾಮೀಜಿಯನ್ನು ಬಯಲಿನಲ್ಲೆ ಧರಣಿಗೆ ಬಿಟ್ಟಿದ್ದಾರೆ, ಯಾವ ನೈತಿಕತೆ ಇದೆ ಇವರಿಗೆ, ಈ ಬಾರಿ ಸೋಲು ಖಚಿತ, ಬಳ್ಳಾರಿ ಶ್ರೀರಾಮುಲು ಎಂದರೆ ಸುಳ್ಳು ರಾಮುಲು ಎಂದು ಆರೋಪ ಮಾಡಿದರು.