ಶಾಂತಿ ನೆಮ್ಮದಿ ಮತ್ತು ಅಹಿಂಸೆ ನಮ್ಮಲ್ಲಿ ಮನೆ ಮಾಡಬೇಕಿದೆ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಭಾರತ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಆಶಯದಂತೆ ಅಮೃತ ಮಹೋತ್ಸವದ ಸ್ವಾತಂತ್ರ‍್ಯೋತ್ಸವವನ್ನು ಈ ವರ್ಷ ನಾವೆಲ್ಲರೂ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ ಹರ್ ಗರ್ ತಿರಂಗ ಅಭಿಯಾನವನ್ನು ಶೇಕಡ ನೂರರಷ್ಟು ತಾಲೂಕಿನಲ್ಲಿ ಹಮ್ಮಿಕೊಂಡು ಯಶಸ್ವಿಯಾಗಿದ್ದೇವೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.


ಅವರು ತಾಲೂಕಿನ ತಳಕು ಹೊಬಳಿಯ ಚನ್ನಗಾನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿರುವAತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಸ್ವಾತಂತ್ರ‍್ಯೋತ್ಸವ ನಂತರದ ಗಾಂಧೀಜಿ ಮತ್ತು ಅಂಬೇಡ್ಕರ್ ಮೊದಲಿಗರಾಗಿ ಸುಭಾಷ್‌ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ವೀರ ಸಾವರ್ಕರ್, ಸಂಗೊಳ್ಳಿ ರಾಯಣ್ಣ, ಕಿತ್ತೂರಾಣಿ ಚೆನ್ನಮ್ಮ ಮುಂತಾದ ಹಲವಾರು ವೀರರಾಣಿಗಳು ಸ್ವಾತಂತ್ರ‍್ಯಕ್ಕಾಗಿ ತಮ್ಮ ಜೀವನವನ್ನೇ ಮೂಡಿಪಾಗಿಟ್ಟವರು.


ತ್ಯಾಗ ಮತ್ತು ಬಲಿದಾನದಿಂದ 200 ವರ್ಷಗಳ ಕಾಲ ಬ್ರಿಟಿಷರಲ್ಲಿದ್ದಂತ ಸ್ವಾತಂತ್ರ‍್ಯವನ್ನು ನಾವುಗಳ ಪಡೆದಿದ್ದೇವೆ ಈ 75 ವರ್ಷಗಳ ಅವಧಿಯಲ್ಲಿ ದೇಶ ಮತ್ತು ರಾಜ್ಯದಲ್ಲಿ ವಿಜ್ಞಾನ ತಂತ್ರಜ್ಞಾನ ಬಾಹ್ಯಾಕಾಶ ಶಿಕ್ಷಣ ನೀರಾವರಿ ಕೈಗಾರಿಕೆ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ.
ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶೇಷವಾದ ಸ್ಥಾನ ಬಂದಿದೆ ಮುಂದೆಯೂ ಕೂಡ ಭಾತೃತ್ವ ಶಾಂತಿ ನೆಮ್ಮದಿ ಮತ್ತು ಅಹಿಂಸೆ ನಮ್ಮಲ್ಲಿ ಮನೆ ಮಾಡಬೇಕಿದೆ ಈ ಭಾಗದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುವ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ವಾಮ್ಯದ ಹೆಚ್ಚು ಹೆಚ್ಚು ಉನ್ನತ ಹುದ್ದೆಗಳನ್ನು ಅಲಂಕರಿಸುವAತೆ ಆಗಬೇಕು


ಹಾಗಾಗಿ ಶೈಕ್ಷಣಿಕ ನೆಲೆಗಟ್ಟು ಭದ್ರಗೊಳ್ಳಬೇಕು ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಶಿಕ್ಷಣದ ಮೂಲಕ ಅಲಂಕರಿಸಬೇಕು ಎಂದು ಸಲಹೆ ನೀಡಿದರು.


ಗ್ರಾಮದ ಹಿರಿಯರಾದಂತಹ ತಿಮ್ಮಾರೆಡ್ಡಿ, ಗ್ರಾಮದಲ್ಲಿ ನಾಲ್ಕು ಜನ ಸ್ವತಂತ್ರ ಯೋಧರಿದ್ದು ಅವರು ಈಗ ದೈವಾಧೀನದರಾಗಿದ್ದಾರೆ ಅವರ ಕೊಡುಗೆ ಈ ಗ್ರಾಮಕ್ಕೆ ಬಹಳಷ್ಟು ಇದೆ ಎಲ್ಲಾ ಗ್ರಾಮಗಳು ಕೂಡ ಸ್ವಾತಂತ್ರ‍್ಯದ ಕಾಹಳೆಯನ್ನು ಮೊಳಗಿಸಿದಂತ ಗ್ರಾಮಗಳಾಗಿದ್ದವು ಇವತ್ತಿನ ಸ್ವತಂತ್ರೋತ್ಸವ ಕಾರ್ಯಕ್ರಮವನ್ನು ಇಂದು ಈ ಗ್ರಾಮದಲ್ಲಿ ಹಮ್ಮಿಕೊಂಡು ರಾಷ್ಟ್ರ ಅಭಿಮಾನದ ಬಗ್ಗೆ ಜನ ಜಾಗೃತಿ ಮೂಡಿಸಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.

ಘಟಪರ್ತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೇವಾನ್ಯಾಯ್ಕ, ಸದಸ್ಯೆ ಅಶ್ವಿನಿ ರುದ್ರಣ್ಣ, ಮಲ್ಲೇಶ್, ರಾಜಣ್ಣ, ರಾಮರೆಡ್ಡಿ ಗ್ರಾಮದ ಮುಖಂಡರು ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!