ಚಳ್ಳಕೆರೆ : 76ನೇ ಸ್ವಾತಂತ್ರö್ಯ ದಿನಾಚರಣೆಯ ಅಂಗವಾಗಿ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಧ್ವಜರೋಹಣ ನೆರೆವೇರಿತು, ನಂತರ ಎತ್ತಿನ ಬಂಡಿಯಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ ತಹಶೀಲ್ದಾರ್ ಎನ್.ರಘುಮೂರ್ತಿ ಒಳಗೊಂಡ ಎತ್ತಿನ ಬಂಡಿಯಲ್ಲಿ ಮೆರೆವಣೆಗೆಯ ಮೂಲಕ ಸಾಗಿ ಬಂದ ಗಣ್ಯರು ಬಿಸಿನೀರು ಮುದ್ದಪ್ಪ ಪ್ರೌಢ ಶಾಲಾ ಮೈದಾನದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಧ್ವಜರೋಹಣ ನೆರೆವೇರಿತು ನಂತರ ಧ್ವಜವಂಧನೆ ಮೂಲಕ 76ನೇ ಸ್ವಾತಂತ್ರ‍್ಯ ಮಹೋತ್ಸವದ ಅಂಗವಾಗಿ ಬಿಸಿನೀರು ಮುದ್ದಪ್ಪ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ಶಾಸಕ ಟಿ.ರಘುಮೂರ್ತಿ ಗೌರವ ರಕ್ಷೆ ಸ್ವೀಕರಿಸಿದರು.
ಸ್ವತಂತ್ರ ದಿನಾಚರಣೆ ಕವಾಯತಿನಲ್ಲಿ ವಿವಿಧ ತಂಡಗಳ ನಾಗರಿಕ ಪೋಲಿಸ್ ಪಡೆ, ಗೃಹ ರಕ್ಷಕ ದಳ, ಎನ್.ಸಿ.ಸಿ. ಸ್ಕೌಟ್ಸ್, ವಸತಿ ಶಾಲೆ, ಸರಕಾರಿ ಶಾಲೆ, ಸೇರಿದಂತೆ 50 ಶಾಲಾ ಕಾಲೇಜುಗಳ ವಿದ್ಯಾರ್ಥಿ ತಂಡಗಳು ಭಾಗವಹಿಸಿದ್ದವು. ಪಿಎಸ್‌ಐ ಕೆ.ಸತೀಶ್ ನಾಯ್ಕ್ ಪರೇಡ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದರು.
ಸಮವಸ್ತ್ರ ಧರಿಸಿ ದೇಶಭಿಮಾನ ಉಕ್ಕಿಸುವ ಸುಶ್ರಾವ್ಯ ಕವಾಯಿತು ವಾದ್ಯಕ್ಕೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದ ಎಲ್ಲ ತಂಡಗಳ ಸದಸ್ಯರಿಗೆ ತಾಲೂಕು ಆಡಳಿತದ ಪರವಾಗಿ ಮತ್ತು ಇಲ್ಲಿ ನೆರೆದಿರುವ ಎಲ್ಲರ ಪರವಾಗಿ ಶಾಸಕ ಟಿ.ರಘುಮೂರ್ತಿ ಅಭಿನಂದನೆ ಸಲ್ಲಿಸಿದರು.
ನಂತರ ತಹಶೀಲ್ದಾರ್ ಎನ್.ರಘುಮೂರ್ತಿ ಧ್ವಜ ವಂದನೆಯ ಈ ಕವಾಯಿತಿನಲ್ಲಿ ಮಕ್ಕಳು ಕುರಿತು ತಾವು ಹಾಕಿದ ಹೆಜ್ಜೆಗಳು , ನಿಜಕ್ಕೂ ನಮ್ಮ ದೇಶ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ನಡೆದು ಬಂದ ಶಿಸ್ತುಬದ್ಧ ಅಭಿವೃದ್ಧಿಯ ಸಾಂಕೇತಿಕ ಪ್ರದರ್ಶನವಾಗಿತ್ತು ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ನಂತರ ರಂಗೋಲಿ ಸ್ಪರ್ಧೇಯಲ್ಲಿ ವಿಜೇತರಾದ ಮಹಿಳಾ ಮಣಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು,