ಚಳ್ಳಕೆರೆ : ದೇಶದ ಗಡಿಯಲ್ಲಿ ಸೈನಿಕರು ಪ್ರಾಣತ್ಯಾಗ ಮಾಡಿ ದೇಶವನ್ನು ರಕ್ಷಣೆ ಮಾಡಿದರೆ, ದೇಶದ ಒಳಗಡೆ ಇಂದು ನಾವು 75ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಇದ್ದೆವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಕಂದಾಯ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ 1500 ಮೀಟರ್ ರಾಷ್ಟ್ರಧ್ವಜ ಪ್ರದರ್ಶನ ಮತ್ತು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಆಗಸ್ಟ್ 15ಕ್ಕೆ ಕೇವಲ ಒಂದು ದಿನ ಸಂಭ್ರಮಿಸಿದರೆ ಸಾಲದು ಈಡೀ ವರ್ಷದ ಉದ್ದಕ್ಕೂ ದೇಶಾಭಿಮಾನ ಮನೆ ಮಾಡಬೇಕು ಈ ನಿಟ್ಟಿನಲ್ಲಿ ಮನೆ ಮನೆಯಲ್ಲಿ ರಾಷ್ಟç ಪ್ರೇಮ ನೆಲೆಯುರಲು ಇಂದು ಸುಮಾರು ಒಂದು ಸಾವಿರ ಕಿ.ಮೀ ರಾಷ್ಟçಧ್ವಜದ ಜಾಗೃತಿ ಜಾಥ ನಗರದಲ್ಲಿ ಅರ್ಥಗರ್ಭಿತವಾಗಿದೆ, 1885ರಲ್ಲಿ ರಾಷ್ಟಿçಯ ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿ ಈ ದೇಶಕ್ಕೆ ಸ್ವಾತಂತ್ರö್ಯ ತರುವ ನಿಟ್ಟಿನಲ್ಲಿ ಶ್ರಮಿಸಿದ ಮಹಾನ್ ನಾಯಕರುಗಳು ಇಲ್ಲಿ ಇದ್ದಾರೆ.
ಮಹಾತ್ಮ ಗಾಂಧಿಜೀ, ಅಂಬೇಡ್ಕರ್, ಬಾಲ್‌ಗಂಗಾಧರ್ ತಿಲಕ್, ನೆಹರು, ಕಿತ್ತೂರು ರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷಿö್ಮ ಬಾಯಿ, ಈಗೇ ಅನೇಕ ಮಹಾನಿಯರು ಸ್ವತಂತ್ರö್ಯ ತಂದು ಕೊಟ್ಟ ದಿಮಂತ ವ್ಯಕ್ತಿಗಳ ನೆನೆಯುವ ಸುದೀನವಾಗಬೇಕಿದೆ.
ತುರುವನೂರು ಗ್ರಾಮದಲ್ಲಿ ಸ್ವಾತಂತ್ರö್ಯ ಹೋರಾಟಗಾರ ತ್ಯಾಗ ಬಲಿದಾನಗಳನ್ನು ನೆನೆಯುವ ಸುದೀನವಾಗಬೇಕು, ಕ್ಷೇತ್ರದಲ್ಲಿ ನೂರು ಕಿಲೋ.ಪಾದಯಾತ್ರೆ ಸಂಚಾರಿಸಿ ತುರುವನೂರು ಗ್ರಾಮದಲ್ಲಿ ಈಚಲ ಮರ ಕಡಿಯುವ ಮೂಲಕ ಅಸಹಾಕರ ಚಳುವಳಿ ಮಾಡುವ ಮೂಲಕ ಚಳುವಳಿಯಲ್ಲಿ ಭಾಗವಹಿಸಿದ ಕುಟುಂಬಗಳು ಇಲ್ಲಿ ವಾಸವಿದ್ದಾವೆ, ಸ್ವತಂತ್ರö್ಯ ಸಂಭ್ರಮ ಅರ್ಥಪೂರ್ಣವಾಗಿದೆ ಎಂದರು.
ತಹಶೀಲ್ದಾರ್ ಎನ್.ರಘುಮೂರ್ತಿ ಪ್ರಾಸ್ತವಿಕವಾಗಿ ಮಾತನಾಡಿ, ಭಾರತಾಂಭೆಯ ಭೂಪಟ ಹೋಲುವ ನಕ್ಷೆಯಲ್ಲಿ ಮಕ್ಕಳನ್ನು ನಿಲ್ಲಿಸಿ ಗೌರವ ಸಮರ್ಪಣೆ ಮಾಡುವುದು ಹಾಗೂ ಒಂದು ಸಾವಿರ ಮೀಟರ್ ಧ್ವಜವನ್ನು ಮಕ್ಕಳು ಹಿಡಿದು ದೇಶ ಪ್ರೇಮ ಮೆರೆಯುವುದು ಸಂತಸಕರ ವಿಷಯ, 75ನೇ ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ಸರಕಾರ ಜಾರಿಗೆ ತಂದ ಮೂರು ದಿನಗಳ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಟ ಹಾಗೂ ಸರಕಾರ ಕಚೇರಿಗಳಲ್ಲಿ ಧ್ವಜ ವಂಧನೆ ಹಾಗೂ ಜಾಗೃತಿ ಜಾಥ ಕಾರ್ಯಕ್ರಮ ಅರ್ಥಗರ್ಭೀತವಾಗಿದೆ, ಈದೇಸೆಯಲ್ಲಿ ತಾಲೂಕು ಆಡಳಿತ ಆಗಸ್ಟ್ 13 ರ ಇಂದು ಒಂದು ಸಾವಿರ ಕಿ.ಮಿ. ಉದ್ದದ ರಾಷ್ಟç ಧ್ವಜದ ಜಾಗೃತಿ, 14 ರಂದು ಬೈಕ್ ಜಾಥ್, ನಂತರ 15 ರಂದು ಸ್ವಾತಂತ್ರö್ಯ ದಿನಾಚರಣೆ ಸಂಭ್ರಮ ಆಚರಿಸೋಣ ಎಂದಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಎನ್. ರಘುಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್, ನಗರಸಭೆ ಅಧ್ಯಕ್ಷ ಸುಮಕ್ಕ ಅಂಜನಪ್ಪ, ಉಪಾಧ್ಯಕ್ಷರಾದ ಮಂಜುಳ ಪ್ರಸನ್ನಕುಮಾರ್, ಸದಸ್ಯರುಗಳಾದ ಕವಿತಾ ಬೋರಯ್ಯ, ಸುಜಾತ ಪ್ರಹಲ್ಲಾದ್, ಸಾವಿತ್ರಮ್ಮ, ರಾಘವೇಂದ್ರ, ರಮೇಶಗೌಡ, ರೈತ ಸಂಘದ ಸೋಮಗುದ್ದು ರಂಗಸ್ವಾಮಿ, ವಿಶ್ವಕರ್ಮ ರಾಜ್ಯ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್, ಹೆಚ್ ಪಿಪಿಸಿ ಪ್ರಥಮದರ್ಜೆ ಕಾಲೇಜಿನ ಪ್ರಾಶುಂಪಾಲ ನರಸಿಂಹಮೂರ್ತಿ,
ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಶಿಕ್ಷಕ ಶಿವಮೂರ್ತಿ, ಪೌರಾಯುಕ್ತ ಸಿ.ಚಂದ್ರಪ್ಪ, ಹೊಂಗಿರAಣ ಶಾಲೆಯ ದಯಾನಂದ್, ಚಿತ್ರಕಲೆ ಶಿಕ್ಷಕ ಅಂಗಡಿ, ಎಸ್‌ಆರ್‌ಎಸ್‌ಶಾಲೆಯ ಪ್ರಾಶುಂಪಾಲರಾದ ರಂಗನಾಥ್, ಆತ್ಮನಂದ, ತಿಪ್ಪಾರೆಡ್ಡಿ, ಮತ್ತು ಮುಖಂಡರು, ಕಾರ್ಯಕರ್ತರು ಸಾರ್ವಜನಿಕರು ಚಳ್ಳಕೆರೆ ನಗರದ ಶಾಲಾ ಮತ್ತು ಕಾಲೇಜು ಶಿಕ್ಷಕರುಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಮುಂತಾದವರು ಉಪಸ್ಥಿತರಿದ್ದರು.