ಚಳ್ಳಕೆರೆ : ಕಳೆದ ಒಂದು ವಾರದ ಇಂದೆ ಹಿಂದೆ ತಾಲ್ಲೂಕು ಪಂಚಾಯಿತಿ ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಹೊನ್ನಪ್ಪನವರನ್ನು ಎಲ್‌ಐಸಿ ದುಗ್ಯಾವರ ರಂಗಸ್ವಾಮಿ ಅಭಿಮಾನಿ ಬಳಗ, ತಾಲ್ಲೂಕು ಉಪ್ಪಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಲ್‌ಐಸಿ ದುರ್ಗಾವರ ರಂಗಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಟಿ.ರಂಗಸ್ವಾಮಿ
ಮಾತನಾಡಿ, ಚಳ್ಳಕೆರೆ ತಾಲ್ಲೂಕು ಅತಿ ದೊಡ್ಡ ತಾಲ್ಲೂಕು ಕೇಂದ್ರವಾಗಿದ್ದು ತಾಲ್ಲೂಕಿನ ಅಭಿವೃದ್ಧಿಗೆ ಕಾರ್ಯನಿರ್ವಹಿಸಿ ಎಂದು ಶುಭಹಾರೈಸಿದರು. ಬರಪೀಡಿತ ತಾಲ್ಲೂಕು ಕೇಂದ್ರದ ಅಭಿವೃದ್ಧಿಗೆ ಶ್ರಮಿಸಿ.
ನೀವು ಮಾಡುವ ಕೆಲಸ ಜನರ ಮನದಲ್ಲಿ ಉಳಿಯುವಂತೆ ಕೆಲಸಗಳನ್ನು ಮಾಡಬೇಕು ಪ್ರಾಮಾಣಿಕತೆಯಿಂದ ಎಂದು ಸಲಹೆ ನೀಡಿದರು.
ಉಪ್ಪಾರ ಸಂಘದ ಅಧ್ಯಕ್ಷ ಜಿ.ಎಚ್.ಹನುಮಂತಪ್ಪ ಬುಡ ಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಸೋಮಶೇಖರ್, ಸದಸ್ಯ ಆರ್.ಲೋಕೇಶ್, ಮೊಳಕಾಲೂರು ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಕೆ.ನಾಗರಾಜು(ಶ್ರೀಪತಿ), ಬೇಕರಿವಿಜಯ್, ಉಪಾಧ್ಯಕ್ಷ ಡಿ.ಟಿ.ನೀಲಕಂಠಪ್ಪ, ಪಿ.ಜೆ.ರಾಘವೇಂದ್ರ, ಏಕಾಂತಪ್ಪ, ರವಿ, ಎನ್.ಶಿವಣ್ಣ, ಮಲ್ಲಿಕಾರ್ಜುನ್ ಮುಂತಾದವರು ಉಪಸ್ಥಿತರಿದ್ದರು.